AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಎರಡು ಬುಲೆಟ್ ರೈಲುಗಳು; ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲುಗಳ ಪಟ್ಟಿ

List of India's proposed bullet train projects: ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್​ನ ಮೊದಲ ಹಂತದ ಯೋಜನೆ ಮುಂದಿನ ವರ್ಷ ಜಾರಿಯಾಗಲಿದೆ. 2027ರ ಆಗಸ್ಟ್ 15ರಂದು ಸೂರತ್-ಬಿಲಿಮೋರಾ ನಡುವಿನ ಮಾರ್ಗದಲ್ಲಿ ಮೊದಲ ಬುಲೆಟ್ ರೈಲು ಸಂಚಾರ ಆರಂಭವಾಗಬಹುದು. ಭಾರತದಲ್ಲಿ ಅನುಮೋದನೆ ಪಡೆದಿರುವ ಮತ್ತು ಪ್ರಸ್ತಾಪದ ಹಂತದಲ್ಲಿರುವ ಹಲವು ಬುಲೆಟ್ ರೈಲು ಯೋಜನೆಗಳಿವೆ.

ಬೆಂಗಳೂರಿಗೆ ಎರಡು ಬುಲೆಟ್ ರೈಲುಗಳು; ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲುಗಳ ಪಟ್ಟಿ
ಬುಲೆಟ್ ರೈಲು ಕಾಮಗಾರಿ ಸಂದರ್ಭದಲ್ಲಿ ನರೇಂದ್ರ ಮೋದಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 13, 2026 | 8:58 AM

Share

ನವದೆಹಲಿ, ಜುಲೈ 13: ವಂದೇ ಭಾರತ್ ರೈಲುಗಳಿಗಿಂತಲೂ ಎರಡು ಮೂರು ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲ ಬುಲೆಟ್ ರೈಲು ಭಾರತದಲ್ಲಿ ಸಂಚರಿಸುವ ಕಾಲ ಸಮೀಪಿಸುತ್ತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿರುವ ಮಾಹಿತಿ ಪ್ರಕಾರ ಮುಂದಿನ ಸ್ವಾತಂತ್ರ್ಯೋತ್ಸವದಂದು ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚಾರ (Bullet Train) ಆರಂಭವಾಗಬಹುದು. ಅಂದರೆ, 2027ರ ಆಗಸ್ಟ್ 15ರಂದು ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ಕಾರ್ಯಾಚರಣೆ (High-speed rail project) ಹಂತ ಹಂತವಾಗಿ ಶುರುವಾಗಬಹುದು.

ಮುಂಬೈ-ಅಹ್ಮದಾಬಾದ್ ನಡುವಿನ 508 ಕಿಮೀ ಹೈಸ್ಪೀಡ್ ಕಾರಿಡಾರ್​ನಲ್ಲಿ ಮೊದಲಿಗೆ ಸೂರತ್-ಬಿಲಿಮೋರಾ ಮಾರ್ಗ ಮೊದಲಿಗೆ ಸಿದ್ಧವಾಗಲಿದೆ. 2027ರ ಆಗಸ್ಟ್ 15ರಂದು ಇಲ್ಲಿ ಸಂಚಾರ ಶುರುವಾಗಲಿದೆ. ಬಳಿಕ ವಾಪಿ-ಸೂರತ್, ವಾಪಿ-ಅಹ್ಮದಾಬಾದ್, ಅಹ್ಮದಾಬಾದ್-ಠಾಣೆ ಮಾರ್ಗಗಳನ್ನು ಹಂತ ಹಂತವಾಗಿ ಸಂಚಾರಕ್ಕೆ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಮುಂಬೈ-ಅಹಮದಾಬಾದ್ ಪೂರ್ಣಗೊಳ್ಳುತ್ತದೆ. ಇದು 2029ರ ವೇಳೆ ಆಗುವ ನಿರೀಕ್ಷೆ ಇದೆ. ಈ ಹೈಸ್ಪೀಡ್ ಬುಲೆಟ್ ರೈಲು 320 ಕಿಮೀ ವೇಗದಲ್ಲಿ ಚಲಿಸಬಲ್ಲುದು. ಮುಂಬೈ ಮತ್ತು ಅಹ್ಮದಾಬಾದ್ ನಡುವಿನ 508 ಕಿಮೀ ದೂರವನ್ನು ಈ ರೈಲು ಕೇವಲ 2 ಗಂಟೆಯಲ್ಲಿ ಕ್ರಮಿಸಬಲ್ಲುದು.

ಇದನ್ನೂ ಓದಿ: ಹೈಸ್ಪೀಡ್ ಯುಗಕ್ಕೆ ಭಾರತ ಸಜ್ಜು: 2027 ಆಗಸ್ಟ್ 15 ರಿಂದ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ

ಭಾರತದಲ್ಲಿ ಇತರ ಬುಲೆಟ್ ರೈಲು ಯೋಜನೆಗಳು ಯಾವಾಗ ಜಾರಿ?

ಭಾರತದಲ್ಲಿ ಪ್ರಸ್ತುತ ಹೈಸ್ಪೀಡ್ ರೈಲು (High-Speed Rail – HSR) ಯೋಜನೆಗಳನ್ನು ದೇಶದ ವಿವಿಧ ವಲಯಗಳಲ್ಲಿ ಆರ್ಥಿಕ ಮತ್ತು ಪ್ರವಾಸೋದ್ಯಮ ಪ್ರಗತಿಗಾಗಿ ಯೋಜಿಸಲಾಗಿದೆ. ಸದ್ಯ ಜಾರಿ ಹಂತದಲ್ಲಿರುವುದು ಮುಂಬೈ-ಅಹ್ಮದಾಬಾದ್ ಕಾರಿಡಾರ್. ಇದರ ಶೇ. 80 ಕಾಮಗಾರಿ ಮುಗಿದಿದೆ. ಜಪಾನ್​ನ ಶಿಂಕೆನ್ಸೆನ್ ತಂತ್ರಜ್ಞಾನದ ನೆರವಿನೊಂದಿಗೆ ಈ ಕಾರಿಡಾರ್ ನಿರ್ಮಿಸಲಾಗುತ್ತಿದೆ.

ಅನುಮೋದನೆ ಪಡೆದು, ಡಿಪಿಆರ್ ಹಂತದಲ್ಲಿರುವ ಬುಲೆಟ್ ರೈಲು ಯೋಜನೆಗಳು

ಇತ್ತೀಚಿನ ಕೇಂದ್ರ ಬಜೆಟ್‌ಗಳಲ್ಲಿ ಸರ್ಕಾರವು ದೇಶಾದ್ಯಂತ ಹೊಸ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದ್ದು, ಇವುಗಳ ವಿವರವಾದ ಯೋಜನಾ ವರದಿ (DPR – Detailed Project Report) ಸಿದ್ಧತೆ ಅಥವಾ ಅಂತಿಮ ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಇದರಲ್ಲಿ ಬೆಂಗಳೂರಿನ ಎರಡು ಬುಲೆಟ್ ರೈಲು ಯೋಜನೆಗಳು ಸೇರಿವೆ.

  1. ಚೆನ್ನೈ – ಬೆಂಗಳೂರು ಕಾರಿಡಾರ್: 306 ಕಿಮೀ
  2. ಹೈದರಾಬಾದ್ – ಬೆಂಗಳೂರು ಕಾರಿಡಾರ್: 618 ಕಿಮೀ
  3. ದಿಲ್ಲಿ – ವಾರಣಾಸಿ ಕಾರಿಡಾರ್: 865 ಕಿಮೀ
  4. ಮುಂಬೈ – ಪುಣೆ ಕಾರಿಡಾರ್: 150 ಕಿಮೀ
  5. ಪುಣೆ – ಹೈದರಾಬಾದ್ ಕಾರಿಡಾರ್: 650 ಕಿಮೀ
  6. ಹೈದರಾಬಾದ್ – ಚೆನ್ನೈ ಕಾರಿಡಾರ್: 744 ಕಿಮೀ
  7. ವಾರಣಾಸಿ – ಹೌರಾ (ಕೊಲ್ಕತ್ತಾ): 711 ಕಿಮೀ
  8. ವಾರಣಾಸಿ – ಸಿಲಿಗುರಿ: 1,705 ಕಿಮೀ

ಇದನ್ನೂ ಓದಿ: ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ

ಪ್ರಸ್ತಾವನೆ ಮತ್ತು ಸಮೀಕ್ಷೆ ಹಂತದಲ್ಲಿರುವ ಬುಲೆಟ್ ರೈಲು ಯೋಜನೆಗಳು

ಈ ಕೆಳಗಿನ ಮಾರ್ಗಗಳನ್ನು ರೈಲ್ವೆಯ ದೀರ್ಘಾವಧಿ ರಾಷ್ಟ್ರೀಯ ರೈಲು ಯೋಜನೆ (National Rail Plan) ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಇವುಗಳು ಪ್ರಾಥಮಿಕ ಹಂತದಲ್ಲಿವೆ:

  1. ದಿಲ್ಲಿ – ಅಹಮದಾಬಾದ್ ಕಾರಿಡಾರ್ (886 ಕಿಮೀ)
  2. ಮುಂಬೈ – ನಾಗ್ಪುರ ಕಾರಿಡಾರ್ (736 ಕಿಮೀ)
  3. ದಿಲ್ಲಿ – ಅಮೃತಸರ ಕಾರಿಡಾರ್ (480 ಕಿಮೀ)
  4. ತಿರುವನಂತಪುರಂ – ಕಣ್ಣೂರು (ಸಿಲ್ವರ್ ಲೈನ್ – 430 ಕಿಮೀ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:39 am, Mon, 13 July 26

Follow Us
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ