AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು

India’s Rs 1.3 lakh crore semiconductor push has 3 winners: ಸರ್ಕಾರ ಎರಡನೇ ಹಂತದ ಸೆಮಿಕಂಡಕ್ಟರ್ ಯೋಜನೆಗೆ ಚಾಲನೆ ನೀಡಿದೆ. ಇದು 1.3 ಲಕ್ಷ ಕೋಟಿ ರೂ ಬಜೆಟ್​ನದ್ದಾಗಿದೆ. ಚಿಪ್ ತಯಾರಿಸುವ ಘಟಕಗಳು ಮಾತ್ರವಲ್ಲ, ಈ ಉದ್ಯಮಕ್ಕೆ ಅಗತ್ಯವಾಗಿರುವ ರಾಸಾಯನಿಕ, ಅನಿಲ ಮತ್ತು ಪ್ಲಾಸ್ಟಿಕ್​ಗಳ ಪೂರೈಕೆ ಮಾಡುವ ಕಂಪನಿಗಳಿಗೂ ಪುಷ್ಟಿ ಸಿಗುತ್ತಿದೆ.

ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು
ಸೆಮಿಕಂಡಕ್ಟರ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2026 | 7:32 PM

Share

ನವದೆಹಲಿ, ಜುಲೈ 17: ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ₹1.3 ಲಕ್ಷ ಕೋಟಿ ಬಜೆಟ್‌ನ ‘ಸೆಮಿಕಾನ್ 2.0’ (Semicon 2.0) ಯೋಜನೆಯು ದೇಶದ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಕ್ರಾಂತಿಯ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ಯೋಜನೆಯಿಂದ ತಕ್ಷಣವೇ ಭಾರಿ ಲಾಭ ಗಳಿಸುತ್ತಿರುವ ದೇಶದ ಪ್ರಮುಖ 3 ಕಂಪನಿಗಳು ನೇರವಾಗಿ ಯಾವುದೇ ಮೈಕ್ರೋಚಿಪ್‌ಗಳನ್ನು (Chips) ತಯಾರಿಸುವುದಿಲ್ಲ! ಬದಲಿಗೆ, ಚಿಪ್ ತಯಾರಿಕಾ ಘಟಕಗಳಿಗೆ (Fabs) ಅತ್ಯಗತ್ಯವಾಗಿ ಬೇಕಾಗುವ ಜಾಗತಿಕ ಗುಣಮಟ್ಟದ ರಾಸಾಯನಿಕಗಳು, ಗ್ಯಾಸ್‌ಗಳು ಮತ್ತು ಪ್ಲಾಸ್ಟಿಕ್ ಘಟಕಗಳನ್ನು ಪೂರೈಸುವ ಮೂಲಕ ಇವು ಮಾರುಕಟ್ಟೆಯಲ್ಲಿ ವಿಜೇತರಾಗಿ ಹೊರಹೊಮ್ಮುತ್ತಿವೆ.

ಗುಜರಾತ್ ಫ್ಲೋರೋಕೆಮಿಕಲ್ಸ್

ಚಿಪ್ ತಯಾರಿಕಾ ಘಟಕಗಳಲ್ಲಿ ಅತ್ಯಂತ ತೀವ್ರವಾದ ತಾಪಮಾನ ಮತ್ತು ರಾಸಾಯನಿಕ ತುಕ್ಕು (Chemical Corrosion) ತಡೆಯಲು ವಿಶೇಷ ‘ಫ್ಲೋರೋಪಾಲಿಮರ್ಸ್’ (Fluoropolymers – PTFE, PFA, PVDF) ಅಗತ್ಯವಿರುತ್ತದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯ ತಂತ್ರಜ್ಞಾನವಿಲ್ಲ.

ಮುಂಬರುವ 5G ನೆಟ್‌ವರ್ಕ್ ಮತ್ತು AI ಡೇಟಾ ಸೆಂಟರ್‌ಗಳ ಬೇಡಿಕೆ ಪೂರೈಸಲು ಈ GFL (Gujarat Fluorochemicals) ಸಂಸ್ಥೆಯು ಈಗಾಗಲೇ ಗ್ರಾಹಕರಿಂದ ಅಗತ್ಯ ಅನುಮೋದನೆ ಪಡೆದು ವಾಣಿಜ್ಯ ಪೂರೈಕೆ ಆರಂಭಿಸಿದೆ. ಸೆಮಿಕಂಡಕ್ಟರ್ ವಲಯದ ವಿಶೇಷ ಕೆಮಿಕಲ್‌ಗಳಿಗಾಗಿ ಕಂಪನಿಯು ₹222 ಕೋಟಿ ಹಾಗೂ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ₹250 ಕೋಟಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ

ನವೀನ್ ಫ್ಲೋರಿನ್ ಇಂಟರ್ನ್ಯಾಷನಲ್

ಸ್ಮಾರ್ಟ್‌ಫೋನ್ ಮತ್ತು ಡೇಟಾ ಸೆಂಟರ್‌ಗಳ ಮೈಕ್ರೋಚಿಪ್‌ಗಳಿಗೆ ಆಧಾರವಾಗಿರುವ ಸಿಲಿಕಾನ್ ವೇಫರ್‌ಗಳನ್ನು (Silicon Wafers) ಸ್ವಚ್ಛಗೊಳಿಸಲು ಮತ್ತು ಅವುಗಳ ಮೇಲೆ ವಿನ್ಯಾಸ ಕೆತ್ತಲು (Etching) ಅಲ್ಟ್ರಾ-ಪ್ಯೂರ್ ಗುಣಮಟ್ಟದ ಆಸಿಡ್‌ಗಳು ಬೇಕಾಗುತ್ತವೆ. ನವಿನ್ ಫ್ಲೋರಿನ್ ಇಂಟರ್ನ್ಯಾಷನಲ್ ಸಂಸ್ಥೆ (Navin Fluorine International) ಈ ಆಸಿಡ್​​ಗಳನ್ನು ಪೂರೈಸುತ್ತದೆ.

ಸ್ವಿಸ್ ಮೂಲದ ಬಸ್ ಕೆಮ್ಟೆಕ್ (Buss ChemTech) ಕಂಪನಿಯೊಂದಿಗೆ ತಾಂತ್ರಿಕ ಪಾಲುದಾರಿಕೆ ಹೊಂದಿರುವ ನವೀನ್ ಫ್ಲೋರಿನ್, ಗುಜರಾತ್‌ನ ದಹೇಜ್‌ನಲ್ಲಿ ₹450 ಕೋಟಿ ವೆಚ್ಚದಲ್ಲಿ ಹೈಡ್ರೋಫ್ಲೋರಿಕ್ ಆಸಿಡ್ (HF) ಪ್ಲಾಂಟ್ ಸ್ಥಾಪಿಸಿ ಈಗಾಗಲೇ ವಾಣಿಜ್ಯ ಸರಬರಾಜು ಆರಂಭಿಸಿದೆ. ಇದಲ್ಲದೆ, ಹಾರ್ಡ್‌ವೇರ್ ಕೂಲಿಂಗ್ ತಂತ್ರಜ್ಞಾನಕ್ಕಾಗಿ ಮತ್ತೊಂದು ಜಾಗತಿಕ ಸಂಸ್ಥೆಯೊಂದಿಗೆ ₹120 ಕೋಟಿ ಒಪ್ಪಂದ ಮಾಡಿಕೊಂಡಿದೆ.

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್

ಸೆಮಿಕಂಡಕ್ಟರ್, ಸೋಲಾರ್ ಸೆಲ್ ಮತ್ತು ಆಪ್ಟಿಕಲ್ ಫೈಬರ್ ಉದ್ಯಮದಲ್ಲಿ ಅತಿ ಹೆಚ್ಚು ಶುದ್ಧತೆಯುಳ್ಳ ರೆಫ್ರಿಜರೆಂಟ್ ಹಾಗೂ ವಿಶೇಷ ಕೈಗಾರಿಕಾ ಗ್ಯಾಸ್‌ಗಳ (ಮುಖ್ಯವಾಗಿ ದ್ರವ ಹೀಲಿಯಂ – Liquid Helium) ಅಗತ್ಯವಿರುತ್ತದೆ.

ಇದನ್ನೂ ಓದಿ: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಕಂಪನಿಯು (Stallion India Fluorochemicals) ತನ್ನ ಖಾಲಾಪುರ ಮತ್ತು ಆಂಧ್ರಪ್ರದೇಶದ ಮಾಂಬಟ್ಟು ಘಟಕಗಳಲ್ಲಿ ದ್ರವ ಹೀಲಿಯಂ ಮೂಲಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದ್ದು, ಇದು 2026 ರ ಮಧ್ಯಭಾಗದಲ್ಲಿ ಲಭ್ಯವಾಗಲಿದೆ. ತನ್ನ ಪೂರೈಕೆಯನ್ನು ಸುರಕ್ಷಿತಗೊಳಿಸಲು ಕತಾರ್ ಆಯಿಲ್‌ಫೀಲ್ಡ್ಸ್‌ನಿಂದ ಗ್ಯಾಸ್ ಪಡೆಯಲು ಶಾರ್ಜಾ ಆಕ್ಸಿಜನ್ ಕಂಪನಿಯೊಂದಿಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ. 2030 ರ ವೇಳೆಗೆ ₹3,000 ಕೋಟಿ ಆದಾಯದ ಗುರಿಯನ್ನು ಕಂಪನಿ ಹೊಂದಿದೆ.

ಒಂದು ದೊಡ್ಡ ಉದ್ಯಮ ಬೆಳೆಯುವಾಗ ಕೇವಲ ಅಂತಿಮ ಉತ್ಪನ್ನ ತಯಾರಿಸುವ ಕಂಪನಿಗಳು ಮಾತ್ರವಲ್ಲದೆ, ಅದಕ್ಕೆ ಕಚ್ಚಾ ವಸ್ತು ಹಾಗೂ ಅಗತ್ಯ ಬಿಡಿಭಾಗಗಳನ್ನು ಒದಗಿಸುವ ‘ಸಪ್ಲೈ ಚೈನ್’ (Supply Chain) ಕಂಪನಿಗಳು ಕೂಡ ಹೂಡಿಕೆಗೆ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಭಾರತದ ಸೆಮಿಕಂಡಕ್ಟರ್ ಯೋಜನೆ ಮತ್ತು ಈ ಮೂರು ಕಂಪನಿಗಳ ಬೆಳವಣಿಗೆಯೇ ಸಾಕ್ಷಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ