ಹಾವು, ಚೇಳುಗಳೊಂದಿಗೆ ಪಾಳುಬಿದ್ದಿದ್ದ ಕಾರ್ಖಾನೆ ಕೇವಲ 90 ದಿನದಲ್ಲಿ ದುರಸ್ತಿ; ಇವತ್ತು ಆರು ತಿಂಗಳಲ್ಲಿ 3,000 ಕೋಟಿ ಆದಾಯ; ಇದು ಟಾಟಾ ಮ್ಯಾಜಿಕ್

NINL factory: ಒಡಿಶಾದ ಕಳಿಂಗನಗರ್​ನಲ್ಲಿ ಮೂರು ವರ್ಷಗಳಿಂದ ಮುಚ್ಚಿಹೋಗಿದ್ದ ಎನ್​ಐಎನ್​​ಎಲ್ ಸ್ಟೀಲ್ ಕಂಪನಿಯನ್ನು ಟಾಟಾ ಖರೀದಿಸಿ ಮ್ಯಾಜಿಕ್ ಮಾಡಿದೆ. ಪಾಳು ಬಿದ್ದ ಕಾರ್ಖಾನೆ ಮತ್ತು ಆವರಣವನ್ನು ಕೇವಲ 90 ದಿನದಲ್ಲಿ ದುರಸ್ತಿಗೊಳಿಸಿ ಉತ್ಪಾದನೆ ಶುರು ಮಾಡಲಾಗಿದೆ. 2022ರ ಅಕ್ಟೋಬರ್​ನಿಂದ ನಡೆದ ಉತ್ಪಾದನೆಯಲ್ಲಿ ಇಲ್ಲಿಯವರೆಗೆ ಈ ಕಾರ್ಖಾನೆ ಟಾಟಾ ಸ್ಟೀಲ್​ಗೆ 4,600 ಕೋಟಿ ರೂ ಆದಾಯ ತಂದಿದೆ.

ಹಾವು, ಚೇಳುಗಳೊಂದಿಗೆ ಪಾಳುಬಿದ್ದಿದ್ದ ಕಾರ್ಖಾನೆ ಕೇವಲ 90 ದಿನದಲ್ಲಿ ದುರಸ್ತಿ; ಇವತ್ತು ಆರು ತಿಂಗಳಲ್ಲಿ 3,000 ಕೋಟಿ ಆದಾಯ; ಇದು ಟಾಟಾ ಮ್ಯಾಜಿಕ್
ಎನ್​ಐಎನ್​ಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2023 | 4:01 PM

ನವದೆಹಲಿ, ಡಿಸೆಂಬರ್ 25: ಹಲವು ವರ್ಷಗಳಿಂದ ಮುಚ್ಚಿದ್ದ ಕಾರ್ಖಾನೆ; ಕಟ್ಟಡದ ಸುತ್ತಮುತ್ತ ಬೆಳೆದ ಪೊದೆ; ಕಾರ್ಮಿಕರು ಇರಬೇಕಾದ ಜಾಗದಲ್ಲಿ ಹಾವು, ಚೇಳು, ಹೆಗ್ಗಣಗಳ ಆವಾಸ; ತುಕ್ಕು ಹಿಡಿದ ಯಂತ್ರೋಪಕರಣಗಳು… ಇದು ಯಾವುದೋ ಹಾರರ್ ಸಿನಿಮಾ ದೃಶ್ಯವಲ್ಲ. ಒಡಿಶಾದ ನೀಲಾಚಲ್ ಇಸ್ಪತ್ ನಿಗಮ್ ಲಿ (ಎನ್​ಐಎನ್​ಎಲ್) ಎಂಬ ಸರ್ಕಾರಿ ಸ್ವಾಮ್ಯದ ಉಕ್ಕು ಉತ್ಪನ್ನ ಸಂಸ್ಥೆಯ ಕಾರ್ಖಾನೆ ಇದ್ದ ಸ್ಥಿತಿ. ಟಾಟಾ ಸಂಸ್ಥೆ ಇದರ ಸುಪರ್ದಿ ಪಡೆದ ಬಳಿಕ ಕೇವಲ 3 ತಿಂಗಳಲ್ಲಿ ನಾವೀನ್ಯ ಸ್ಪರ್ಶ ಕೊಟ್ಟಿದೆ. ಇವತ್ತು ಈ ಕಾರ್ಖಾನೆ ಸಾಕಷ್ಟು ಆದಾಯ ತರುವ ಘಟಕವಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂಡವಾಳ ಹಿಂತೆಗೆದುಕೊಂಡ ಸರ್ಕಾರಿ ಸ್ವಾಮ್ಯದ ಮೊದಲ ಉಕ್ಕು ಸಂಸ್ಥೆ ಎನ್​ಐಎನ್​ಎಲ್ ಆಗಿತ್ತು. 2022ರ ಜುಲೈ 4ರಂದು ಟಾಟಾ ಸ್ಟೀಲ್ ಸಂಸ್ಥೆ ಎನ್​ಐಎನ್​ಎಲ್ ಅನ್ನು ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸಿತು. ಅದಾದ ಬಳಿಕ, ಪಾಳು ಬಿದ್ದ ಇಡೀ ಆವರಣವನ್ನು ಸರಿಸ್ಥಿತಿಗೆ ತರುವ ದೊಡ್ಡ ಸವಾಲು ಇತ್ತು. ಅದಕ್ಕೆ 90 ದಿನದ ಡೆಡ್​ಲೈನ್ ಇಟ್ಟುಕೊಂಡು ಕೆಲಸ ಆರಂಭವಾಯಿತು.

ಇದನ್ನೂ ಓದಿ: Working Hours: ಹೆಚ್ಚು ಅವಧಿ ಕೆಲಸ ಮಾಡಿ, ಜೀವನದ ಜೊತೆ ಕೆಲಸ ಮಿಳಿತಗೊಳಿಸಿ: ಉದ್ಯೋಗಿಗಳಿಗೆ ಅಮೆರಿಕನ್ ಸಿಇಒ ನೀರಜ್ ಶಾ ಕರೆ

ಒಡಿಶಾ ರಾಜಧಾನಿ ಭುವನೇಶ್ರದಿಂದ 120 ಕಿಮೀ ದೂರದಲ್ಲಿರುವ ಕಳಿಂಗನಗರದಲ್ಲಿ ಎನ್​ಐಎನ್​ಎಲ್​ನ ಆವರಣ ಇದ್ದು, 2,500 ಎಕರೆಯಷ್ಟು ವಿಶಾಲವಾಗಿತ್ತು. ಸಂಸ್ಥೆಗೆ ಸರಿಯಾದ ಫಂಡಿಗ್ ಇಲ್ಲದೆ ಮೂರು ವರ್ಷದಿಂದ ಮುಚ್ಚಿತ್ತು. ಹಾಳಾದ ಸ್ಥಿತಿ ಇದ್ದ ಈ ಘಟಕವನ್ನು ದುರಸ್ತಿಗೊಳಿಸಲು ಕಾರ್ಯಾಚರಣೆಗೆ ಇಳಿಯುವ ಮುನ್ನ ಎಲ್ಲಾ ಯೋಜನೆ ರೂಪಿಸಲಾಯಿತು. ಮೊದಲು ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ಓಡಾಡಲು ಸಾಧ್ಯವಾಗುವಂತೆ ಮಾಡಲಾಯಿತು. ಕಚೇರಿ ಸೇರಿದಂತೆ ಎಲ್ಲಾ ಕಟ್ಟಡಗಳ ದುರಸ್ತಿ ಮಾಡಲಾಯಿತು. ಅಗತ್ಯ ಇದ್ದ ಕಡೆ ಮರು ನಿರ್ಮಾಣ ಮಾಡಲಾಯಿತು. ಬ್ರಾಡ್​ಬ್ಯಾಂಡ್ ಲೈನ್​ಗಳನ್ನು ಹಾಕಲಾಯಿತು. ಈ ಕಾರ್ಯಾಚರಣೆ ಶುರುವಾಗಿದ್ದು 2022ರ ಜುಲೈನಲ್ಲಿ. ಡೆಡ್​ಲೈನ್​ಗೆ ಎರಡು ದಿನ ಮುನ್ನವೇ, ಅಂದರೆ ಅಕ್ಟೋಬರ್ 11ಕ್ಕೆ ಉಕ್ಕು ಕಾರ್ಖಾನೆಯಲ್ಲಿ ಮೊದಲ ಬಿಲ್ಲೆಟ್ ಉತ್ಪಾದನೆ ಆಯಿತು.

ವಿವಿಧ ಟಾಟಾ ಸ್ಟೀಲ್ ಘಟಕಗಳಿಂದ ತಂತ್ರಜ್ಞರನ್ನು ಎನ್​ಐಎಂಎಲ್ ಘಟಕಕ್ಕೆ ಕರೆಸಿ ಯಂತ್ರೋಪಕರಣಗಳನ್ನು ಸರಿ ಮಾಡಿಸಲಾಗಿತ್ತು. ಮೂರು ವರ್ಷದಿಂದ ಮುಚ್ಚಿಹೋಗಿದ್ದ ಎನ್​ಐಎಂಎಲ್ ಕಾರ್ಖಾನೆ ಮತ್ತೆ ಆರಂಭಗೊಳ್ಳುತ್ತದೆ ಎಂದು ಅಲ್ಲಿನ ಉದ್ಯೋಗಿಗಳು ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ, ಆ ವರ್ಷ ದೀಪಾವಳಿ ಹಬ್ಬದ ಸಂಭ್ರಮ ಕಾರ್ಮಿಕರ ಪಾಲಿಗೆ ಚಿರಸ್ಮರಣೀಯ ಎನಿಸಿದ.

ಇದನ್ನೂ ಓದಿ: ಪೇಟಿಎಂನಲ್ಲಿ ಕೆಲಸ ಕಳೆದುಕೊಂಡ ಶೇ. 10ಕ್ಕೂ ಹೆಚ್ಚು ಉದ್ಯೋಗಿಗಳು; ಈ ವರ್ಷ ಕಂಡ ಅತಿದೊಡ್ಡ ಲೇ ಆಫ್​ಗಳಲ್ಲಿ ಇದೂ ಒಂದು

ಟಾಟಾ ಸಂಸ್ಥೆ ಎನ್​ಐಎಂಎಲ್​ನ ಎಲ್ಲಾ ಉದ್ಯೋಗಿಗಳ ಎಲ್ಲಾ ಬಾಕಿ ವೇತನ ಪಾವತಿಸಿತು. ಸಂಸ್ಥೆಯ ಎಲ್ಲಾ ಸಾಲವನ್ನೂ ತೀರಿಸಿತು. ಹೆಚ್ಚೂಕಡಿಮೆ 13,000 ಕೋಟಿ ರೂ ವ್ಯಯಿಸಿ ಎನ್​ಐಎನ್​ಎಲ್ ಸಂಸ್ಥೆಯನ್ನು ಖರೀದಿಸಿದ ಟಾಟಾ ಗ್ರೂಪ್ ಈಗ ಆದಾಯ ಕೂಡ ಗಳಿಸುವ ಸ್ಥಿತಿಗೆ ಅದನ್ನು ಮಾರ್ಪಡಿಸಿದೆ. 2022ರ ಅಕ್ಟೋಬರ್ ತಿಂಗಳಿಂದ 2023ರ ಸೆಪ್ಟೆಂಬರ್​ವರೆಗೆ 4,600 ಕೋಟಿ ರೂ ಆದಾಯವು ಈ ಘಟಕದಿಂದ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್