ಪೇಟಿಎಂನಲ್ಲಿ ಕೆಲಸ ಕಳೆದುಕೊಂಡ ಶೇ. 10ಕ್ಕೂ ಹೆಚ್ಚು ಉದ್ಯೋಗಿಗಳು; ಈ ವರ್ಷ ಕಂಡ ಅತಿದೊಡ್ಡ ಲೇ ಆಫ್​ಗಳಲ್ಲಿ ಇದೂ ಒಂದು

Paytm Layoffs: ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಶೇ. 10ಕ್ಕೂ ಹೆಚ್ಚು. ಪೇಟಿಎಂನ ವೆಚ್ಚ ಕಡಿತ ಹಾಗೂ ಕಾರ್ಯಾಚರಣೆಗಳ ಮರುರಚನೆ ಉದ್ದೇಶದಿಂದ ಈ ಬೃಹತ್ ಲೇ ಆಫ್ ಕ್ರಮ ಕೈಗೊಳ್ಳಲಾಗಿದೆ. ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಪೇಟಿಎಂಗೆ ಹೆಚ್ಚು ವರ್ತಕರನ್ನು ಜೋಡಿಸಲು 50,000 ಮಂದಿಯ ನೇಮಕಾತಿ ಕೂಡ ಆಗಲಿದೆ.

ಪೇಟಿಎಂನಲ್ಲಿ ಕೆಲಸ ಕಳೆದುಕೊಂಡ ಶೇ. 10ಕ್ಕೂ ಹೆಚ್ಚು ಉದ್ಯೋಗಿಗಳು; ಈ ವರ್ಷ ಕಂಡ ಅತಿದೊಡ್ಡ ಲೇ ಆಫ್​ಗಳಲ್ಲಿ ಇದೂ ಒಂದು
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2023 | 1:00 PM

ಬೆಂಗಳೂರು, ಡಿಸೆಂಬರ್ 25: ಪೇಟಿಎಂನ ಮಾತೃ ಸಂಸ್ಥೆ ಒನ್ 97 ಕಮ್ಯೂನಿಕೇಶನ್ಸ್ ತನ್ನ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಆಗಿದೆ. ಕಳೆದ ಕೆಲ ತಿಂಗಳುಗಳಾದ್ಯಂತ ಈ ಲೇ ಆಫ್ (Layoffs) ಪ್ರಕ್ರಿಯೆ ನಡೆದಿರುವುದು ತಿಳಿದುಬಂದಿದೆ. ಶೇಕಡಾವಾರು ಲೆಕ್ಕದಲ್ಲಿ ಶೇ. 10ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ವರ್ಷ ಭಾರತದ ಟೆಕ್ ಕಂಪನಿಯೊಂದು ಮಾಡಿದ ಅತಿದೊಡ್ಡ ಲೇ ಆಫ್​ಗಳ ಪೈಕಿ ಪೇಟಿಎಂನದ್ದೂ ಒಂದು.

ಪೇಟಿಎಂನ ಕಾರ್ಯಾಚರಣೆಗಳ ಮರುರಚನೆ ಮಾಡಲು ಮತ್ತು ವೆಚ್ಚ ಕಡಿತ ಮಾಡಲು ಒನ್ 97 ಕಮ್ಯೂನಿಕೇಶನ್ಸ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾತ್ರವಲ್ಲ, ಇತರ ಕ್ರಮಗಳನ್ನೂ ಅದು ಕೈಗೊಂಡಿದೆ ಉದಾಹರಣೆಗೆ, ಅದರ ಯುಪಿಐ ಪ್ಲಾಟ್​ಫಾರ್ಮ್​ನಲ್ಲಿ ‘ಬಯ್ ನೌ ಪೇ ಲೇಟರ್’ (Buy now pay later) ಯೋಜನೆಯನ್ನು ನಿಲ್ಲಿಸಿತ್ತು. ಹಾಗೆಯೇ, ಸಣ್ಣ ಸಾಲಗಳ ನೀಡುವಿಕೆಯನ್ನೂ (small ticket loans) ನಿಲ್ಲಿಸಿತ್ತು.

ಇದನ್ನೂ ಓದಿ: ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?

ದೊಡ್ಡ ಮೊತ್ತದ ವೈಯಕ್ತಿಕ ಸಾಲ ಮತ್ತು ವರ್ತಕರಿಗೆ ನೀಡುವ ಸಾಲದ ಬಗ್ಗೆ ಹೆಚ್ಚಿನ ಒತ್ತು ಕೊಡುವ ಕಾರ್ಯತಂತ್ರವನ್ನು ಪೇಟಿಎಂ ಅನುಸರಿಸಲು ನಿರ್ಧರಿಸಿದೆ.

ಕಳೆದ ಕೆಲ ತಿಂಗಳುಗಳಲ್ಲಿ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಲೇ ಆಫ್ ಮಾಡಿದೆಯದರೂ, ಸೇಲ್ಸ್ ವಿಭಾಗದಲ್ಲಿ 50,000ಕ್ಕೂ ಹೆಚ್ಚು ಮಂದಿಯನ್ನು ನೇಮಕಾತಿ ಮಾಡುವ ಉದ್ದೇಶವನ್ನು ಪೇಟಿಎಂ ವಾರದ ಹಿಂದಷ್ಟೇ ವ್ಯಕ್ತಪಡಿಸಿತ್ತು. ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವರ್ತಕರನ್ನು ಪೇಟಿಎಂ ವ್ಯಾಪ್ತಿಗೆ ತರಲು ಈ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಲಾಗುತ್ತಿದೆ.

ಇದನ್ನೂ ಓದಿ: Year Ender 2023: ವರ್ಷದ ಕೊನೆಯಲ್ಲಿ ಹೂಡಿಕೆ ತಪ್ಪುಗಳ ಮೆಲುಕು; ಈ ನಾಲ್ಕು ಅಂಶ, ಹುಷಾರ್

‘ಈ ವರ್ಷ ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿ ಜೋಡಿತವಾದ ವರ್ತಕರ ಸಂಖ್ಯೆ 5 ಕೋಟಿ ದಾಟಬೇಕು,’ ಎಂದು ಪೇಟಿಎಂ ಸಂಸ್ಥಾಪಕರು ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಇತ್ತೀಚೆಗೆ ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು