ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?

No Rupee payment: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ತೈಲ ಆಮದು ಮಾಡಿಕೊಳ್ಳುವಾಗ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸುವ ಆಫರ್ ಅನ್ನು ತೈಲ ಪೂರೈಕೆದಾರರು ಒಪ್ಪುತ್ತಿಲ್ಲ. ಸಂಸದೀಯ ಸ್ಥಾಯಿ ಸಮಿತಿಯೊಂದರ ಮುಂದೆ ಕೇಂದ್ರ ತೈಲ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ.

ತೈಲ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಸುವ ಆಫರ್; ಸ್ಪಂದಿಸದ ತೈಲ ಪೂರೈಕೆದಾರರು; ಕಾರಣ ಏನು?
ರೂಪಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 24, 2023 | 6:26 PM

ನವದೆಹಲಿ, ಡಿಸೆಂಬರ್ 24: ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ (International currency) ಮಾಡುವ ಸರ್ಕಾರದ ಗುರಿಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಕಚ್ಚಾ ತೈಲ ಆಮದು ಮಾಡಿಕೊಳ್ಳಲು ರುಪಾಯಿ ಕರೆನ್ಸಿಯಲ್ಲಿ ಪಾವತಿಸುವ ಭಾರತದ ಆಫರ್​ಗೆ ಯಾರೂ ಸ್ಪಂದಿಸುತ್ತಿಲ್ಲ. ರುಪಾಯಿ ಕರೆನ್ಸಿಯಲ್ಲಿ ಹಣ ಸ್ವೀಕರಿಸಲು ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಕೇಂದ್ರ ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿ (parliamentary standing committee) ಮುಂದೆ ಈ ಸತ್ಯವನ್ನು ಬಿಚ್ಚಿಟ್ಟಿದೆ. ತೈಲ ಪೂರೈಕೆದಾರರು (oil suppliers) ರೂಪಾಯಿ ಕರೆನ್ಸಿಯಲ್ಲಿ ಪಾವತಿ ಸ್ವೀಕರಿಸದೇ ಇರಲು ಸಕಾರಣಗಳಂತೂ ಇವೆ. ಕರೆನ್ಸಿ ಮರುಬಳಕೆ, ಅಧಿಕ ವಹಿವಾಟು ವೆಚ್ಚದ ಸಮಸ್ಯೆಗಳು ತಲೆದೋರುತ್ತವೆಂದು ತೈಲ ಪೂರೈಕೆದಾರರು ಕಾರಣ ನೀಡುತ್ತಾರೆ ಎಂದು ಸರ್ಕಾರ ಹೇಳುತ್ತಿದೆ.

ಕಚ್ಚಾ ತೈಲದ ಬಹುತೇಕ ಎಲ್ಲಾ ವಹಿವಾಟಿನಲ್ಲಿ ಡಾಲರ್ ಕರೆನ್ಸಿಯನ್ನು ಬಳಕೆ ಮಾಡಲಾಗುತ್ತದೆ. ಅದು ವರ್ಷಗಳಿಂದ ಬಂದಿರುವ ಕ್ರಮ. ಡಾಲರ್ ಕರೆನ್ಸಿ ಕೇವಲ ತೈಲ ವಹಿವಾಟಿಗೆ ಮಾತ್ರವಲ್ಲ ಹೆಚ್ಚಿನ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನಡೆಯುವ ಹಣ ವಹಿವಾಟಿಗೆ ಬಳಕೆ ಆಗುತ್ತದೆ. ಹೀಗಾಗಿ, ವ್ಯಾಪಾರಿಗಳು ಹಣ ಪಾವತಿಗೆ ಡಾಲರ್ ಕರೆನ್ಸಿಯನ್ನೇ ಇಚ್ಛಿಸುತ್ತಾರೆ.

ಇದನ್ನೂ ಓದಿ: ಹೊರ ದೇಶಗಳ ಮಾರುಕಟ್ಟೆ ಮಂದಗೊಂಡರೂ ಭಾರತದ ಆರ್ಥಿಕ ವೃದ್ಧಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಪುಷ್ಟಿ: ಫಿಚ್ ರೇಟಿಂಗ್ಸ್

ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಮತ್ತು ರುಪಾಯಿ ಕರೆನ್ಸಿ ಬಲಪಡಿಸಲು ಆರ್​ಬಿಐ 2022ರ ಜುಲೈನಲ್ಲಿ ರುಪಾಯಿಯನ್ನ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡುವ ಪ್ರಯತ್ನ ಮೊದಲಿಟ್ಟಿತು. ತನ್ನ ಆಮದು ಮತ್ತು ರಫ್ತುಗಳಿಗೆ ರುಪಾಯಿ ಕರೆನ್ಸಿಯಲ್ಲೇ ಪಾವತಿ ಆಗುವ ಅವಕಾಶ ತೆರೆದಿಟ್ಟಿತು. ಅದಕ್ಕಾಗಿ ರುಪಾಯಿ ವೋಸ್ಟ್ರೋ ಖಾತೆಯಂತಹ ವ್ಯವಸ್ಥೆ ರೂಪಿಸಿದೆ. ಕೆಲ ವ್ಯಾಪಾರಗಳಲ್ಲಿ ಇದಕ್ಕೆ ಪೂರಕ ಸ್ಪಂದೆ ಸಿಕ್ಕಿದೆಯಾದರೂ ತೈಲ ವ್ಯವಹಾರದಲ್ಲಿ ಇದೂವರೆಗೆ ನಕಾರವೇ ಸಿಕ್ಕಿದೆ.

‘2022-23ರಲ್ಲಿ ಭಾರತದ ಸರ್ಕಾರಿ ತೈಲ ಮಾರುಕಟ್ಟೆ ಸಂಸ್ಥೆಗಳು ಮಾಡಿದ ಆಮದಿಗೆ ರುಪಾಯಿಯಲ್ಲಿ ಹಣ ಪಾವತಿಯಾಗಿದ್ದು ಇಲ್ಲ. ಕಚ್ಚಾ ತೈಲ ಪೂರೈಕೆದಾರರು ರುಪಾಯಿ ಕರೆನ್ಸಿ ಮರುಬಳಕೆ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಕರೆನ್ಸಿ ಪರಿವರ್ತನೆಯಲ್ಲಿ ಆಗುವ ಅಧಿಕ ಟ್ರಾನ್ಸಾಕ್ಷನ್ ವೆಚ್ಚದ ಸಮಸ್ಯೆಯನ್ನೂ ಎತ್ತಿತೋರಿಸಿದ್ದಾರೆ,’ ಎಂದು ಸಂಸದೀಯ ಸ್ಥಾಯಿ ಸಮಿತಿ ಬಳಿ ಕೇಂದ್ರ ತೈಲ ಸಚಿವಾಲಯ ಸ್ಪಷ್ಟನೆ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 24 December 23

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು