ನಿರ್ಮಾಪಕಿ ಆಗಿ ಗೆದ್ದ ನಟಿ ಶ್ವೇತಾ ಪ್ರಸಾದ್
ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ಬೆಳವಣಿಗೆ ತೋರಿಸಿರುವ ಮ್ಯುಚುವಲ್ ಫಂಡ್ಗಳು; ಇಷ್ಟು ವೇಗದಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚುತ್ತೆ ಲೆಕ್ಕಹಾಕಿ
Profitable Mutual Funds: ಭಾರತದ ಎನ್ಎಸ್ಇ ಮತ್ತು ಬಿಎಸ್ಇನ ಮಿಡ್ಕ್ಯಾಪ್ ಇಂಡೆಕ್ಸ್ಗಳು ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ವೇಗದಲ್ಲಿ ಕಳೆದ 3 ವರ್ಷದಲ್ಲಿ ಬೆಳೆದಿವೆ. ಇವುಗಳನ್ನು ಟ್ರ್ಯಾಕ್ ಮಾಡುವ 12 ಮ್ಯುಚುವಲ್ ಫಂಡ್ಗಳು ಅಷ್ಟೇ ಲಾಭ ಮಾಡಿವೆ.
ಇತ್ತೀಚಿನ ವರ್ಷಗಳಲ್ಲಿ ಷೇರುಮಾರುಕಟ್ಟೆ (Share Market) ಗಣನೀಯವಾಗಿ ಬೆಳೆದಿದೆ. ಸೆನ್ಸೆಕ್ಸ್30, ನಿಫ್ಟಿ50 ಸೇರಿದಂತೆ ವಿವಿಧ ಸೂಚ್ಯಂಕಗಳು ಗಮನಾರ್ಹ ವೇಗದಲ್ಲಿ ವೃದ್ಧಿಸಿವೆ. ಇವುಗಳೊಂದಿಗೆ ಜೋಡಿತವಾದ ಮ್ಯೂಚುವಲ್ ಫಂಡ್ಗಳೂ ಹೂಡಿಕೆದಾರರಿಗೆ ಲಾಭ ತಂದಿವೆ. ಮಿಡ್ ಕ್ಯಾಪ್ ಮ್ಯುಚುವಲ್ ಫಂಡ್ಗಳು ಸಾಕಷ್ಟು ಲಾಭ ತಂದಿವೆ. ಕಳೆದ 3 ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ದರದಲ್ಲಿ (Annualised Returns) ಲಾಭ ಮಾಡಿರುವ 12 ಮ್ಯೂಚುವಲ್ ಫಂಡ್ಗಳಿವೆ. ಮಿಡ್ ಕ್ಯಾಪ್ನ ಬೆಂಚ್ಮಾರ್ಕ್ ಸೂಚ್ಯಂಕಗಳೇ (Benchmark Indices) ಶೇ. 30ಕ್ಕಿಂತಲೂ ಹೆಚ್ಚು ವೇಗದಲ್ಲಿ ವೃದ್ಧಿಸಿವೆ. ಮಿಡ್ ಕ್ಯಾಪ್ ಎಂದರೆ ಮಧ್ಯ ಪ್ರಮಾಣದ ಷೇರುಸಂಪತ್ತು ಹೊಂದಿರುವ ಕಂಪನಿಗಳು.
ಕಳೆದ 3 ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಲಾಭ ತಂದಿರುವ ಮಿಡ್ಕ್ಯಾಪ್ ಮ್ಯುಚುವಲ್ ಫಂಡ್ಗಳು
ಎಡೆಲ್ವೇಸ್ ಮಿಡ್ ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ವರ್ಷಕ್ಕೆ ಶೇ. 32.33ರ ದರದಲ್ಲಿ ಬೆಳೆದಿದೆ. ರೆಗ್ಯುಲರ್ ಪ್ಲಾನ್ನಿಂದಲೇ ಶೇ. 30.37ರ ದರದಲ್ಲಿ ಸಂಪತ್ತುವೃದ್ಧಿಸಿದೆ.
ಎಚ್ಡಿಎಫ್ಸಿ ಮಿಡ್ ಕ್ಯಾಪ್ ಆಪೋರ್ಚೂನಿಟೀಸ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 34.52; ರೆಗ್ಯುಲ್ ಪ್ಲಾನ್ ಶೇ. 33.59ರಷ್ಟು ಬೆಳೆದಿದೆ.
ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 32.57ರ ವಾರ್ಷಿಕ ದರದಲ್ಲಿ ಹೂಡಿಕೆಯನ್ನು ಬೆಳೆಸಿದೆ. ಇನ್ನು ರೆಗ್ಯುಲರ್ ಪ್ಲಾನ್ನಲ್ಲಿ ಶೇ. 30.95ರಷ್ಟು ರಿಟರ್ನ್ ಬಂದಿದೆ.
ಮಹೀಂದ್ರ ಮನುಲೈಫ್ ಮಿಡ್ ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 32.28, ರೆಗ್ಯುಲರ್ ಪ್ಲಾನ್ ಶೇ. 30.11ರಷ್ಟು ರಿಟರ್ನ್ ಕೊಟ್ಟಿದೆ.
ಮಿರೇ ಅಸೆಟ್ ಮಿಡ್ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 33.02, ರೆಗ್ಯುಲರ್ ಪ್ಲಾನ್ ಶೇ. 31.26ರಷ್ಟು ಆದಾಯ ತಂದಿದೆ.
ಇದನ್ನೂ ಓದಿ: ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು
ಇವುಗಳ ಜೊತೆಗೆ ಮೋತಿಲಾಲ್ ಓಸ್ವಾಲ್ ಮಿಡ್ಕ್ಯಾಪ್ ಫಂಡ್, ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್, ಪಿಜಿಐಎಂ ಇಂಡಿಯಾ ಮಿಡ್ಕ್ಯಾಪ್ ಆಪೋರ್ಚುನಿಟೀಸ್ ಫಂಡ್, ಕ್ವಾಂಟ್ ಮಿಡ್ ಕ್ಯಾಪ್ ಫಂಡ್, ಎಸ್ಬಿಐ ಮ್ಯಾಗ್ನಂ ಮಿಡ್ಕ್ಯಾಪ್ ಫಂಡ್, ಟಾಟಾ ಮಿಡ್ಕ್ಯಾಪ್ ಗ್ರೋತ್ ಫಂಡ್, ಯೂನಿಯನ್ ಮಿಡ್ಕ್ಯಾಪ್ ಫಂಡ್ಗಳು ತಮ್ಮ ಡೈರೆಕ್ಟ್ ಪ್ಲಾನ್ಗಳಲ್ಲಿ ಶೇ. 30ಕ್ಕಿಂತಲೂ ಹೆಚ್ಚಿನ ವಾರ್ಷಿಕ ಲಾಭ ತಂದಿವೆ.
ಬೆಂಚ್ಮಾರ್ಕ್ ಸೂಚ್ಯಂಕಗಳು
ಈ ಮೇಲೆ ಹೆಸರಿಸಿದ 12 ಮ್ಯೂಚುವಲ್ ಫಂಡ್ಗಳಲ್ಲಿ ಯೂನಿಯನ್ ಮಿಡ್ಕ್ಯಾಪ್ ಫಂಡ್ ಮಾತ್ರವೇ ಬಿಎಸ್ಇ150 ಮಿಡ್ಕ್ಯಾಪ್ ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಸೂಚ್ಯಂಕ 3 ವರ್ಷದಲ್ಲಿ ಶೇ. 32.31ರ ವಾರ್ಷಿಕ ದರದಲ್ಲಿ ಬೆಳೆದಿದೆ. ಇನ್ನುಳಿದ 11 ಮ್ಯುಚುವಲ್ ಫಂಡ್ಗಳು ನಿಫ್ಟಿ ಮಿಡ್ಕ್ಯಾಪ್ 150 ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತವೆ. ಈ ಸೂಚ್ಯಂಕ ಕಳೆದ 3 ವರ್ಷದಲ್ಲಿ ಶೇ. 32.80ರ ವಾರ್ಷಿಕ ದರದಲ್ಲಿ ಬೆಳೆದಿರುವುದು ಗಮನಾರ್ಹ.
ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ
3 ವರ್ಷದಲ್ಲಿ ಎಷ್ಟು ಸಂಪತ್ತುವೃದ್ಧಿ?
ಮಿಡ್ಕ್ಯಾಪ್ ಇಂಡೆಕ್ಸ್ ಟ್ರ್ಯಾಕ್ ಮಾಡುವ ಈ ಮೇಲಿನ ಯಾವುದಾದರೂ ಮ್ಯೂಚುವಲ್ ಫಂಡ್ ಮೇಲೆ ಕಳೆದ 3 ವರ್ಷಗಳಿಂದ ತಿಂಗಳಿಗೆ 10,000 ರೂನಂತೆ ಹೂಡಿಕೆ ಮಾಡುತ್ತಾ ಬಂದಿದ್ದರೆ ಇವತ್ತು ನಿಮ್ಮ ಹಣ 5ರಿಂದ 6 ಲಕ್ಷ ರುಪಾಯಿ ಆಗಿರುತ್ತಿತ್ತು. ಅಷ್ಟು ಭರ್ಜರಿಯಾಗಿ ಈ ಫಂಡ್ಗಳು ಲಾಭ ತಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ