AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ

Retirement Planning: ನೀವು ಇನ್ನು 20 ವರ್ಷದವರೆಗೂ ಮಾತ್ರ ಕೆಲಸ ಮಾಡುವುದು ಅನ್ನುವುದಾದರೆ ಅದಕ್ಕೆ ತಕ್ಕಂತೆ ನಿಮ್ಮ ನಿವೃತ್ತಿಗೆ ಹಣಕಾಸು ಪ್ಲಾನ್ ಮಾಡಬೇಕು. ಈ ನಿಟ್ಟಿನಲ್ಲಿ ನೀವಂದುಕೊಂಡಷ್ಟು ಹಣ ಸಂಗ್ರಹಣೆಯ ಗುರಿ ಈಡೇರಲು ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಕಲ್ಪನೆ ಇರಲಿ.

20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2023 | 2:45 PM

Share

ಪ್ರತಿಯೊಬ್ಬ ವ್ಯಕ್ತಿಗೂ ಹಣಕಾಸು ಅರಿವು (Financial Awareness) ಬಹಳ ಅಗತ್ಯ. ಹಿಂದೆ ಆಗಿದ್ದು ಆಯಿತು, ಮುಂದೆ ಆಗೋದು ಆಗುತ್ತೆ, ಈಗ ಆಗುವುದನ್ನು ಅನುಭವಿಸು ಎಂದು ಹಿರಿಯರು ಹೇಳುತ್ತಾರೆ. ಹಾಗಂತ ಸಂಪಾದನೆಯ ಹಣವನ್ನೆಲ್ಲಾ ಇವತ್ತಿನ ಸಂತೋಷಕ್ಕಾಗಿ ಮೀಸಲಿಟ್ಟರೆ ನಾಳೆಯ ದಿನಗಳು ಸಂತೋಷಕರವಾಗಿರುವುದಿಲ್ಲ ಎಂಬುದು ಗೊತ್ತಿರಲಿ. ನೀವು ದುಡಿಯುವವರೆಗೂ ಹಣಕಾಸು ಓಡಾಡಬಹುದು. ದುಡಿಮೆ ನಿಂತಾಗ ಅಥವಾ ದುಡಿಯುವ ಕೈ ಸೋತಾಗ ಪರಿಸ್ಥಿತಿ ಹೇಗೆ? ಅಂದರೆ ನೀವು ನಿವೃತ್ತರಾದಾಗ ಹಣಕಾಸು ಸ್ಥಿತಿ ಹೇಗೆ ಎಂಬುದನ್ನು ಎಲ್ಲರೂ ಯೋಚಿಸಬೇಕು. ಸರ್ಕಾರಿ ನೌಕರಿಯಾದರೆ ಪಿಂಚಣಿ ಸಿಗಬಹುದು. ಖಾಸಗಿ ಕ್ಷೇತ್ರದ ಉದ್ಯೋಗಿಗಳು ನಿವೃತ್ತಿಗೆ ಪ್ಲಾನ್ ಮಾಡುವುದು ಅನಿವಾರ್ಯ. 25 ವರ್ಷ ವಯಸ್ಸಿನಿಂದಲೇ ನಿವೃತ್ತಿ ಯೋಜನೆಗೆ ಪ್ಲಾನ್ ಮಾಡುವುದು ಸೂಕ್ತ. ಹಾಗಂತ ಹೆಚ್ಚು ವಯಸ್ಸಾಗಿದ್ದರೆ ಹತಾಶೆಗೊಳ್ಳುವುದು ಬೇಡ.

60 ವರ್ಷ ಬಳಿಕ ಎಷ್ಟು ಹಣ ಇರಬೇಕು? ಗುರಿ ನಿಗದಿ ಮಾಡಿ

ನೀವು 40 ವರ್ಷದ ಪ್ರಾಯದವರಾಗಿದ್ದರೆ ಕೆಲಸದಿಂದ ನಿವೃತ್ತರಾಗಲು 20 ವರ್ಷ ಇರುತ್ತದೆ. ಅದಕ್ಕೆ ತಕ್ಕಂತೆ ಹಣಕಾಸು ಯೋಜನೆ ಹಮ್ಮಿಕೊಳ್ಳುವುದು ಅಗತ್ಯ. ನಿಮ್ಮ ಗುರಿ ಈಡೇರಿಕೆಗೆ ಮೂರು ಅಂಶಗಳು ಮುಖ್ಯ ಆಗುತ್ತವೆ. ಒಂದು ನಿಮ್ಮ ಸಂಪಾದನೆ, ಇನ್ನೊಂದು ನಿಮ್ಮ ಉಳಿತಾಯ, ಮಗದೊಂದು ನಿಮ್ಮ ಹೂಡಿಕೆ.

ನಿಮ್ಮ ಸಂಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋದರೆ ಉಳಿತಾಯವೂ ಸಹಜವಾಗಿ ಹೆಚ್ಚುತ್ತದೆ. ಇದರಿಂದ ನಿಮ್ಮ ಹೂಡಿಕೆ ಮೊತ್ತವನ್ನೂ ವರ್ಷದಿಂದ ವರ್ಷಕ್ಕೆ ಹೆಚ್ಚಿಸಲು ಸಾಧ್ಯ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿಮ್ಮ ನಿವೃತ್ತಿಗೆ ಎಷ್ಟು ಹಣ ಸಂಗ್ರಹ ಆಗಬೇಕೆಂದು ಗುರಿ ಇಟ್ಟುಕೊಳ್ಳಿ.

ಇದನ್ನೂ ಓದಿ: ನಿವೃತ್ತಿ ಬಳಿಕ ಆರೋಗ್ಯ ವಿಮಾ ಪಾಲಿಸಿ ಸಿಗುತ್ತದಾ? ಇನ್ಷೂರೆನ್ಸ್ ಮಾಡಿಸುವಾಗ ಎಚ್ಚರವಹಿಸಬೇಕಾದ ಸಂಗತಿಗಳನ್ನು ತಿಳಿದಿರಿ

ನಿಮ್ಮ ಆರಂಭಿಕ ಗುರಿ ಎಷ್ಟಾದರೂ ಇರಲಿ, ಹೋಗುತ್ತಾ ಹೋಗುತ್ತಾ ಗುರಿಯನ್ನು ಪರಿಷ್ಕರಿಸಲು ಅಡ್ಡಿ ಇಲ್ಲ. ಈ ನಿಟ್ಟಿನಲ್ಲಿ ನಿಮ್ಮ ಆರಂಭಿಕ ಗುರಿ 10 ಕೋಟಿ ರೂ ಎಂದಿಟ್ಟುಕೊಳ್ಳೋಣ. ಅಂದರೆ 20 ವರ್ಷದಲ್ಲಿ 10 ಕೋಟಿ ಹಣ ನಿಮ್ಮ ಬಳಿ ಇರಬೇಕು. ನೀವು ಈಕ್ವಿಟಿ ಅಥವಾ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಸರಾಸರಿಯಾಗಿ ವರ್ಷಕ್ಕೆ ಶೇ. 12ರ ದರದಲ್ಲಿ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ ಎಂದು ಅಂದಾಜಿಸಬಹುದು.

ಎಫ್​ಡಿ, ಆರ್​ಡಿ, ಪಿಪಿಎಫ್ ಇತ್ಯಾದಿ ಇತರ ಹೂಡಿಕೆ ಸಾಧನಗಳಿಗಿಂತ ಈಕ್ವಿಟಿ ಮೇಲಿನ ಹೂಡಿಕೆ ಹೆಚ್ಚು ರಿಸ್ಕಿ ಎನಿಸಿದರೂ ಹೆಚ್ಚು ರಿಟರ್ನ್ ತಂದುಕೊಡುತ್ತದೆ. ನೀವು ನೇರವಾಗಿ ಈಕ್ವಿಟಿಗೆ ಹಾಕದೇ ಹೋದರೂ ಮ್ಯೂಚುವಲ್ ಫಂಡ್​ಗಳ ಮೂಲಕ ಈಕ್ವಿಟಿಯಲ್ಲಿ ಹಣ ತೊಡಗಿಸಿಕೊಳ್ಳಬಹುದು.

ಇದನ್ನೂ ಓದಿ: ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್

ಈಗ 20 ವರ್ಷದಲ್ಲಿ 10 ಕೋಟಿ ರೂ ಗುರಿ ವಿಷಯಕ್ಕೆ ಬರೋಣ. ನೀವು ನಿರೀಕ್ಷಿಸಿದಂತೆ ನಿಮ್ಮ ಮ್ಯೂಚುವಲ್ ಫಂಡ್ 20 ವರ್ಷದಲ್ಲಿ ಶೇ. 12ರ ದರದಲ್ಲಿ ಬೆಳೆದುಬಿಡುತ್ತೆ ಎಂದು ಭಾವಿಸೋಣ. ನೀವು ತಿಂಗಳಿಗೆ ಸುಮಾರು 1 ಲಕ್ಷ ರೂನಷ್ಟು ಹೂಡಿಕೆ ಮಾಡಬೇಕು. ಆಗ 20 ವರ್ಷಕ್ಕೆ 10 ಕೋಟಿ ರೂ ಆಗುತ್ತದೆ.

ನೀವು ಒಂದು ವೇಳೆ 30ರ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದಾದರೆ 30 ವರ್ಷದಷ್ಟು ಸುದೀರ್ಘ ಅವಧಿ ಇರುತ್ತದೆ. ಆಗ ನೀವು ತಿಂಗಳಿಗೆ ಸುಮಾರು 68,000 ರೂನಷ್ಟು ಹೂಡಿಕೆ ಮಾಡುತ್ತಾ ಹೋದರೆ 30 ವರ್ಷದಲ್ಲಿ 10 ಕೋಟಿ ರೂ ಆಗುತ್ತದೆ.

ನಿಮ್ಮ ಸಂಪಾದನೆ ಮಧ್ಯಮಧ್ಯದಲ್ಲಿ ಹೆಚ್ಚುತ್ತಿದ್ದರೆ ಬೇರೆ ಮ್ಯೂಚುವಲ್ ಫಂಡ್ ಎಸ್​ಐಪಿ ಆರಂಭಿಸಿ ಅದರಿಂದಲೂ ರಿಟರ್ನ್ ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ಹಣ ಬಹಳ ವೇಗದಲ್ಲಿ ವೃದ್ಧಿಸುತ್ತದೆ. ಇದೆಲ್ಲವೂ ಸಾಧ್ಯವಾಗಬೇಕಾದರೆ ನಿಮ್ಮಲ್ಲಿ ಸಂಯಮ ಮತ್ತು ಸ್ಥಿರ ಮನೋಭಾವ ಅಗತ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ