ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು

India GDP: ಭಾರತ ಮುಂದಿನ ನಾಲ್ಕು ವರ್ಷದಲ್ಲಿ ಜರ್ಮನಿ ಮತ್ತು ಜಪಾನ್ ದೇಶಗಳ ಜಿಡಿಪಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಹೋಗಬಹುದು ಎಂದು ಆರ್ಥಿಕ ತಜ್ಞರು ವಿಶ್ವಾಸ ಪಟ್ಟಿದ್ದಾರೆ. ಸದ್ಯ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನದಲ್ಲಿವೆ.

ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು
ಭಾರತದ ಆರ್ಥಿಕತೆ
Follow us
|

Updated on: Aug 17, 2023 | 10:25 AM

ನವದೆಹಲಿ, ಆಗಸ್ಟ್ 17: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ (Bigger Economies) ಹೊಂದಿರುವ ಭಾರತ ಇದೇ ವೇಗದಲ್ಲಿ ಬೆಳೆದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ನಂಬರ್ 3ನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು (Economists) ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಬಳಿಕ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯಿಂದ ಪುಟಿದೆದ್ದು, ಬಳಿಕ ರಷ್ಯಾ ಉಕ್ರೇನ್ ಯುದ್ಧದಿಂದ ಜಾಗತಿಕ ಆರ್ಥಿಕ ಹಿನ್ನಡೆ ನಡುವೆಯೂ ಗಮನಾರ್ಹ ಬೆಳವಣಿಗೆ ಕಾಣುತ್ತಿರುವ ಭಾರತ ಅದೇ ವೇಗ ಕಾಯ್ದುಕೊಳ್ಳುವ ಸಾಮರ್ಥ್ಯ ಇದೆ ಎಂದು ಹೇಳಲಾಗಿದೆ. ಆರ್ಥಿಕ ತಜ್ಞರ ಪ್ರಕಾರ ಭಾರತದ ಜಿಡಿಪಿ ಮುಂದಿನ ವರ್ಷಗಳಲ್ಲಿ ಶೇ. 6.5ರಿಂದ ಶೇ. 7ರಷ್ಟು ವಾರ್ಷಿಕ ದರದಲ್ಲಿ ಬೆಳೆಯಬಲ್ಲುದು. ಹೀಗಾದಲ್ಲಿ 2025ಕ್ಕೆ ಭಾರತ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. 2027ರಲ್ಲಿ 3ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಭಾರತದ ಬೆಳವಣಿಗೆಯ ನಿರೀಕ್ಷೆ ಈಡೇರುವುದಕ್ಕೆ ಎಲ್ಲಾ ಅಂಶಗಳು ಕೈಗೂಡಬೇಕು

ಭಾರತ 2027ರಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಬೇಕಾದರೆ ಹಲವು ಅಂಶಗಳು ನಿರೀಕ್ಷಿತ ರೀತಿಯಲ್ಲಿ ಜರುಗಬೇಕು. ಈ ವೇಳೆ ಟಾಪ್ 10ನಲ್ಲಿರುವ ಬೇರೆ ದೇಶಗಳು ಈಗ ಇರುವ ವೇಗದಲ್ಲೇ ಮುಂದುವರಿಯಬೇಕು. ಭಾರತದ ದೇಶೀಯ ಅನುಭೋಗ ಹೆಚ್ಚಬೇಕು. ಕೌಶಲ್ಯಭರಿತ ಮಾನವಸಂಪನ್ಮೂಲ ಹೆಚ್ಚಬೇಕು. ತಂತ್ರಜ್ಞಾನದ ಅಳವಡಿಕೆ ಹೆಚ್ಚಬೇಕು. ಇವೆಲ್ಲವೂ ಅಂದುಕೊಂಡ ರೀತಿಯಲ್ಲಿ ನಡೆದಲ್ಲಿ ಭಾರತ ಇನ್ನು 4 ವರ್ಷದಲ್ಲಿ ವಿಶ್ವದ ಟಾಪ್-3 ಪಟ್ಟಿಯಲ್ಲಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ.

ಇದನ್ನೂ ಓದಿ: New Passport Rules: ಪಾಸ್​ಪೋರ್ಟ್ ವೆರಿಫಿಕೇಶನ್​ಗೆ ಡಿಜಿಲಾಕರ್ ಕಡ್ಡಾಯ; ಏನಿದು ಹೊಸ ನಿಯಮ, ಇಲ್ಲಿದೆ ಡೀಟೇಲ್ಸ್

ಅತಿಹೆಚ್ಚು ಜಿಡಿಪಿ ಹೊಂದಿರುವ ದೇಶಗಳು

  1. ಅಮೆರಿಕ: 25.46 ಟ್ರಿಲಿಯನ್ ಡಾಲರ್
  2. ಚೀನಾ: 17.96 ಟ್ರಿಲಿಯನ್ ಡಾಲರ್
  3. ಜಪಾನ್: 4.231 ಟ್ರಿಲಿಯನ್ ಡಾಲರ್
  4. ಜರ್ಮನಿ: 4.072 ಟ್ರಿಲಿಯನ್ ಡಾಲರ್
  5. ಭಾರತ: 3.385 ಟ್ರಿಲಿಯನ್ ಡಾಲರ್
  6. ಬ್ರಿಟನ್: 3.071 ಟ್ರಿಲಿಯನ್ ಡಾಲರ್
  7. ಫ್ರಾನ್ಸ್: 2.783 ಟ್ರಿಲಿಯನ್ ಡಾಲರ್
  8. ರಷ್ಯಾ: 2.24 ಟ್ರಿಲಿಯನ್ ಡಾಲರ್
  9. ಕೆನಡಾ: 2.14 ಟ್ರಿಲಿಯನ್ ಡಾಲರ್
  10. ಇಟಲಿ: 2.010 ಟ್ರಿಲಿಯನ್ ಡಾಲರ್

ಇದನ್ನೂ ಓದಿ: ಹೆಚ್ಚುವರಿ ಸೂಪರ್ ಕಂಪ್ಯೂಟರ್​ಗಳ ಸ್ಥಾಪನೆಯಿಂದ ಹಿಡಿದು ಹಲವು ಮಹತ್ವದ ಸುಧಾರಣೆಗಳು; ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆಗೆ ಸಂಪುಟ ಒಪ್ಪಿಗೆ

ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿರುವ ಜಪಾನ್​ಗೂ ಐದನೇ ಸ್ಥಾನದಲ್ಲಿರುವ ಭಾರತಕ್ಕೂ ಅಂಥ ದೊಡ್ಡ ವ್ಯತ್ಯಾಸವಿಲ್ಲ. ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಯ ಬೆಳವಣಿಗೆ ಶೇ. 2ಕ್ಕಿಂತಲೂ ಕಡಿಮೆಯೇ ಇದೆ. ಭಾರತ ಶೇ. 6ಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುವ ಎಲ್ಲಾ ಸಾಮರ್ಥ್ಯ ಮತ್ತು ಸಾಧ್ಯತೆ ಹೊಂದಿದೆ. ಇದೇ ರೀತಿ ಮುಂದುವರಿದಲ್ಲಿ ಜಿಡಿಪಿ ರೇಸ್​ನಲ್ಲಿ ಜರ್ಮನಿ ಮತ್ತು ಜಪಾನ್ ದೇಶಗಳನ್ನು ಭಾರತ ಬಹಳ ಬೇಗ ಹಿಂದಿಕ್ಕಬಹುದು.

ಮೂರನೇ ಸ್ಥಾನಕ್ಕೆ ಏರಿದ ಬಳಿಕ ಚೀನಾ ಮತ್ತು ಅಮೆರಿಕದ ಹತ್ತಿರಕ್ಕೆ ಭಾರತ ಹೋಗಲು ಬಹಳ ವರ್ಷಗಳೇ ಬೇಕಾಗುತ್ತದೆ. 2060ರ ಬಳಿಕ ಭಾರತಕ್ಕೆ ಟಾಪ್ 2 ಮಟ್ಟಕ್ಕೆ ಹೋಗಲು ಸಾಧ್ಯವಾಗಬಹುದು ಎನ್ನಲಾಗುತ್ತಿದೆ. ಭಾರತದ ಒಟ್ಟಾರೆ ಸಾಲ ಅಷ್ಟು ಹೆಚ್ಚಿಲ್ಲ….

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ