Sign In

By signing in or creating an account, you agree with Associated Broadcasting Company's Terms & Conditions and Privacy Policy.

New I-T Bill: ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ; ಏನಿದೆ ಈ ಹೊಸ ಐಟಿ ಬಿಲ್​ನಲ್ಲಿ?

New Income Tax Bill tabled in Parliament: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 13, ಗುರುವಾರದಂದು ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದ್ದ ಈ ಮಸೂದೆಗೆ ಫೆ. 7ರಂದು ಕೇಂದ್ರ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಸಂಸತ್​ನ ಹಣಕಾಸು ಸ್ಥಾಯಿ ಸಮಿತಿಯಿಂದ ಪರಿಶೀಲನೆಯಾಗಿ, ಸಂಸತ್​ನಲ್ಲಿ ಅಂತಿಮ ಒಪ್ಪಿಗೆ ಸಿಕ್ಕಿದ ಬಳಿಕ ಇದು ಕಾಯ್ದೆಯಾಗಿ ಬದಲಾಗುತ್ತದೆ.

New I-T Bill: ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಮಂಡನೆ; ಏನಿದೆ ಈ ಹೊಸ ಐಟಿ ಬಿಲ್​ನಲ್ಲಿ?
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 13, 2025 | 2:56 PM

ನವದೆಹಲಿ, ಫೆಬ್ರುವರಿ 13: ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಇದೇ ಬಜೆಟ್ ಅಧಿವೇಶನದಲ್ಲಿ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನ ಮುಂದಿಟ್ಟಿದೆ. ಇಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು (New Income Tax Bill) ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. 622 ಪುಟಗಳಿರುವ ಐನ್ಕಮ್ ಟ್ಯಾಕ್ಸ್ ಮಸೂದೆ 2025 ಅನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಫೆಬ್ರುವರಿ 7ರಂದು ಕೇಂದ್ರ ಸಂಪುಟ ಅನುಮೋದನೆ ಕೂಡ ಮಾಡಿತ್ತು.

ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದಾದ ಬಳಿಕ ಸಂಸತ್​ನ ಹಣಕಾಸು ಸ್ಥಾಯಿ ಸಮಿತಿಯ (Parliament standing committee on Finance) ಅವಗಾಹನೆಗೆ ಈ ಮಸೂದೆಯನ್ನು ಕಳುಹಿಸಲಾಗುತ್ತದೆ. ಅದಾದ ಬಳಿಕ ಏನಾದರೂ ಬದಲಾವಣೆ ಮಾಡಲಾಗಿದ್ದರೆ ಸಂಸತ್ತಿನ ಎರಡೂ ಸದನಗಳ ಬಳಿ ಈ ಮಸೂದೆ ಮರಳಿ ಬರಲಿದೆ. ಸಂಸತ್​ನಿಂದ ಅಂತಿಮ ಒಪ್ಪಿಗೆ ಮುದ್ರೆ ದೊರೆತ ಬಳಿಕ ಅದು ಕಾಯ್ದೆಯಾಗಲಿದೆ. 2026ರ ಏಪ್ರಿಲ್​ನಿಂದ ಈ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಬಹುದು.

ಇದನ್ನೂ ಓದಿ: ಎಪ್ಸಿಲಾನ್ ಗ್ರೂಪ್​ನಿಂದ ಕರ್ನಾಟಕದಲ್ಲಿ 15,350 ಕೋಟಿ ರೂ ಬಂಡವಾಳ; ಇವಿ ಬ್ಯಾಟರಿ ಭಾಗಗಳ ತಯಾರಿಕೆಗೆ ಹೂಡಿಕೆ

ಆರು ದಶಕಗಳ ಹಿಂದೆ ರಚಿತವಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಾಗಿ ಹೊಸ ಕಾಯ್ದೆ ತರಲು ಈ ಮಸೂದೆ ರೂಪಿಸಲಾಗಿದೆ. 622 ಪುಟಗಳು ಇದ್ದು, ಹಳೆಯ ಕಾಯ್ದೆಯ ನಿಯಮ ಮತ್ತು ಕಾನೂನುಗಳನ್ನು ಸರಳಗೊಳಿಸಲಾಗಿದೆ. ವಿವಿಧ ಸೆಕ್ಷನ್​ಗಳ ಸಂಖ್ಯೆಯನ್ನು ಶೇ. 25ರಿಂದ 30ರಷ್ಟು ಕಡಿಮೆ ಮಾಡಲಾಗಿದೆ. ಪರಿಭಾಷೆಗಳನ್ನು ಸರಳಗೊಳಿಸಲಾಗಿದೆ. ಕಾನೂನು ಪರಿಣಿತರು ಅಲ್ಲದವರಿಗೂ ಅರ್ಥವಾಗುವ ರೀತಿಯಲ್ಲಿ ಕಾನೂನು ವಿವರಿಸಲಾಗಿದೆ.

ಉದಾಹರಣೆಗೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಅಸೆಸ್ಮೆಂಟ್ ವರ್ಷ, ಹಣಕಾಸು ವರ್ಷ ಎಂದು ಎರಡು ವರ್ಗೀಕರಣ ಇತ್ತು. ಇದು ತೆರಿಗೆ ಪಾವತಿದಾರರಿಗೆ ಗೊಂದಲ ಮೂಡಿಸುವುದಾಗಿದೆ. ಇವೆರಡರ ಬದಲು ಒಂದೇ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನಾವು 2024-25ರ ಹಣಕಾಸು ವರ್ಷಕ್ಕೆ ತೆರಿಗೆ ಪಾವತಿಸುವಾಗ, ಅದರ ಅಸೆಸ್ಮೆಂಟ್ ವರ್ಷ 2025-26 ಎಂದು ಕರೆಯಲಾಗುತ್ತಿತ್ತು. ಈಗ ಈ ಅಸೆಸ್ಮೆಂಟ್ ಇಯರ್​ನ ಜಂಝಾಟವನ್ನು ತೆಗೆಯಲಾಗಿದೆ. ಯಾವ ವರ್ಷಕ್ಕೆ ತೆರಿಗೆ ಪಾವತಿಸುತ್ತೇವೆಯೋ ಅದನ್ನು ಆ ಟ್ಯಾಕ್ಸ್ ಇಯರ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಲೋಕಸಭೆಯಲ್ಲೂ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ; ಮಾರ್ಚ್ 10ರವರೆಗೆ ಕಲಾಪ ಮುಂದೂಡಿಕೆ

ಈ ಮೇಲೆ ಹೇಳಿದ ರೀತಿಯಲ್ಲಿ ಹಲವು ಅಂಶಗಳನ್ನು ಸರಳಗೊಳಿಸಲು ಈ ಮಸೂದೆಯಲ್ಲಿ ಪ್ರಯತ್ನಿಸಲಾಗಿದೆ. ಹಿಂದಿನ ಆದಾಯ ತೆರಿಗೆ ಕಾಯ್ದೆಯಲ್ಲಿರುವ ಬಹುತೇಕ ಅಂಶಗಳೇ ಹೊಸ ಕಾಯ್ದೆಯಲ್ಲೂ ಇವೆಯಾದರೂ ಸ್ಪಷ್ಟತೆ ಹೆಚ್ಚಿಸಲಾಗಿದೆ, ಸಂಕೀರ್ಣತೆ ಕಡಿಮೆ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Thu, 13 February 25

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ