AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oracle Layoffs: ಒರೇಕಲ್​ನ ಭಾರತೀಯ ಉದ್ಯೋಗಿಗಳಿಗೆ ಶಾಕ್; ಮುನ್ಸೂಚನೆ ಇಲ್ಲದೇ 12,000 ಮಂದಿ ಲೇ ಆಫ್

Oracle allegedly lays off 12,000 employees in India, 30k globally: ಒರೇಕಲ್ ಸಂಸ್ಥೆ ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತದಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ರಾತ್ರೋರಾತ್ರಿ ಎಲ್ಲರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ಕನಿಷ್ಠ ಫೋನ್ ಕರೆಯಲ್ಲೂ ತಿಳಿಸದೆ ಇಮೇಲ್​ನಲ್ಲಿ ನೋಟೀಸ್ ಕೊಟ್ಟು ಲೇ ಆಫ್ ಮಾಡಲಾಗಿದೆಯಂತೆ.

Oracle Layoffs: ಒರೇಕಲ್​ನ ಭಾರತೀಯ ಉದ್ಯೋಗಿಗಳಿಗೆ ಶಾಕ್; ಮುನ್ಸೂಚನೆ ಇಲ್ಲದೇ 12,000 ಮಂದಿ ಲೇ ಆಫ್
ಲೇ ಆಫ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 01, 2026 | 12:50 PM

Share

ನವದೆಹಲಿ, ಏಪ್ರಿಲ್ 1: ವಿಶ್ವದ ಪ್ರಮುಖ ಸಾಫ್ಟ್​ವೇರ್ ಕಂಪನಿಗಳಲ್ಲಿ ಒಂದಾದ ಒರೇಕಲ್ ತನ್ನ ಉದ್ಯೋಗಿಗಳ ಸಂಖ್ಯೆಗೆ ಭಾರೀ ಕತ್ತರಿ (Oracle Layoffs) ಹಾಕಿದೆ. ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಒರೇಕಲ್ ಲೇ ಆಫ್ ಮಾಡಿದೆ. ಭಾರತವೊಂದರಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಒರೇಕಲ್ ಕಂಪನಿ 30,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 12,000 ಮಂದಿ ಎಂದರೆ ಶೇ. 40ರಷ್ಟು ಲೇ ಆಫ್ ಆದಂತಾಗುತ್ತದೆ.

ಒರೇಕಲ್ ಸಂಸ್ಥೆಯಿಂದ ಈ ಉದ್ಯೋಗ ಕಡಿತದ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಬೇರೆ ಬೇರೆ ವೇದಿಕೆಗಳಲ್ಲಿ ಸಂತ್ರಸ್ತ ಉದ್ಯೋಗಿಗಳು ಹಾಕಿರುವ ಪೋಸ್ಟ್​ಗಳಿಂದ ಇದರ ಮಾಹಿತಿ ಬಹಿರಂಗವಾಗಿದೆ. ನಿನ್ನೆಯಿಂದಲೇ (ಮಾರ್ಚ್ 31) ಲೇ ಆಫ್ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ರೆಡ್ಡಿಟ್, ಟೀಮ್​ಬ್ಲೈಂಡ್ ಮುಂತಾದ ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಕಣ್ಣೀರ ಕಥೆಗಳು ಹರಿದಾಡುತ್ತಿವೆ.

ಇದನ್ನೂ ಓದಿ: Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

ಫೋನ್ ಕೂಡ ಇಲ್ಲ… ಇಮೇಲ್​ನಲ್ಲಿ ಬಂತು ಲೇ ಆಫ್ ನೋಟೀಸ್

ಯಾವ ಪೂರ್ವಸೂಚನೆ ಇಲ್ಲದೆ, ರಾತ್ರೋರಾತ್ರಿ ಕೆಲಸ ಕಳೆದುಕೊಂಡ ಅನೇಕರು ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕಂಪನಿಯಲ್ಲಿ ಲೇ ಆಫ್ ಮಾಡುವಾಗ ಸಾಮಾನ್ಯವಾಗಿ ಅದರ ಸುಳಿವನ್ನು ಮುಂಚಿತವಾಗಿ ನೀಡಲಾಗಿರುತ್ತದೆ. ಲೇ ಆಫ್ ಮಾಡಿದಾಗ ಫೋನ್ ಮಾಡಿಯೋ, ಮೀಟಿಂಗ್ ಮಾಡಿಯೋ ಅಥವಾ ಎಚ್​​ಆರ್ ಕರೆಸಿಯೋ ತಿಳಿಸುವುದುಂಟು. ಆದರೆ, ಒರೇಕಲ್ ಉದ್ಯೋಗಿಗಳಿಗೆ ಒಂದು ಇಮೇಲ್​ನಲ್ಲಿ ಲೇ ಆಫ್ ನೋಟೀಸ್ ಬಂದಿತಂತೆ.

‘ನಾವು ಒರೇಕಲ್​ನಲ್ಲಿ 26 ವರ್ಷ ಕೆಲಸ ಮಾಡಿದ್ದೇನೆ. ನನಗೆ ಬೆಳಗ್ಗೆ 6 ಗಂಟೆಗೆ ಇಮೇಲ್ ಬಂತು. ಫೋನ್ ಕರೆ ಮಾಡಿ ತಿಳಿಸುವ ಸೌಜನ್ಯವೂ ಇಲ್ಲ, ಎಂಥ ಕಚಡ ಇದು’ ಎಂದು ಒಬ್ಬ ವ್ಯಕ್ತಿ ಅಲವತ್ತುಕೊಂಡಿದ್ದಾರೆ.

‘20 ವರ್ಷದ ಕೆಲಸ ಮಾಡಿದ ನನ್ನ ತಂದಗೆ ನಿವೃತ್ತಿಯಾಗಲು 2 ವರ್ಷ ಇತ್ತು. ಅವರಿಗೆ ಇಮೇಲ್ ಮೂಲಕ ಲೇ ಆಫ್ ಮಾಡಿದ್ದಾರೆ. ಅವರಿಗೆ ಕ್ಯಾನ್ಸರ್ ಇದೆ. ಆದರೆ, ಹೆಲ್ತ್ ಇನ್ಷೂರೆನ್ಸ್ ಇರೋದಿಲ್ಲ’ ಎಂದು ಮತ್ತೊಬ್ಬ ವ್ಯಕ್ತಿ ಗೋಳಿಟ್ಟಿದ್ದಾನೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ಓರೇಕಲ್ ಇಂಡಿಯಾ ಡೆಲಪ್ಮೆಂಟ್ ಸೆಂಟರ್​ಗಳಲ್ಲಿ ಹೆಚ್ಚಿನ ಜಾಬ್ ಕಟ್ ಆಗಿದೆ. ಅದರಲ್ಲೂ ಇಂಟರ್ನಲ್ ಟೀಮ್​ಗಳಲ್ಲಿ ಭರ್ಜರಿ ಕತ್ತರಿ ಬಿದ್ದಿದೆ. ಲೇ ಆಫ್ ಆದ ಉದ್ಯೋಗಿಗಳಿಗೆ ತತ್​ಕ್ಷಣವೇ ಜಾರಿಗೆ ಬರುವಂತೆ ಸ್ಲ್ಯಾಕ್, ವಿಪಿಎನ್, ಇಮೇಲ್ ಇತ್ಯಾದಿ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಉದ್ಯೋಗಿ ತತ್​ಕ್ಷಣವೇ ರಿಲೀವ್ ಆದಂತಾಗಿದೆ.

ಎನ್+2 ತಿಂಗಳ ವೇತನ

ಲೇ ಆಫ್ ಆದ ಒರೇಕಲ್ ಉದ್ಯೋಗಿಗಳಿಗೆ ಪರಿಹಾರವಾಗಿ ಕನಿಷ್ಠ ಎರಡು ತಿಂಗಳ ವೇತನ ಕೊಡಲಾಗುತ್ತದೆ. ಎನ್ + 2 ಸೂತ್ರದ ಪ್ರಕಾರ ವೇತನದ ಪರಿಹಾರ ಇರುತ್ತದೆ. ಎನ್ ಎಂಬುದು ಉದ್ಯೋಗಿ ಕೆಲಸ ಮಾಡಿರುವ ವರ್ಷಗಳ ಸಂಖ್ಯೆ. ಇದರ ಜೊತೆಗೆ ನೋಟೀಸ್ ಪೇ ಮತ್ತಿತರ ಪರಿಹಾರಗಳನ್ನು ಕೊಟ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಒರೇಕಲ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ