ಈಗ ಹಣ ಹೂಡಿಕೆಗೆ ಹಲವು ಆಯ್ಕೆಗಳಿವೆ. ಎಸ್ಐಪಿಗಳು ಟ್ರೆಂಡಿಂಗ್ನಲ್ಲಿವೆ. ಆದರೆ, ಸರ್ಕಾರಿ ಹೂಡಿಕೆ ಸಾಧನಗಳ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ. ಸರ್ಕಾರಿ ಪ್ರಾಯೋಜಿತ ಮತ್ತು ಗ್ಯಾರಂಟಿ ಇರುವ ನಿವೃತ್ತಿ ಯೋಜನೆಗಳಿಗೆ ಬೇಡಿಕೆ ಇದೆ. ಉದ್ಯೋಗಿ ಭವಿಷ್ಯ ನಿಧಿ (EPF- Employee Provident Fund), ಸಾರ್ವಜನಿಕ ಭವಿಷ್ಯ ನಿಧಿ (PPF- Public Provident Fund), ಸ್ವಯಂಪ್ರೇರಿತ ಪಿಂಚಣಿ ನಿಧಿ (VPF- Voluntary Provident Fund) ನಮ್ಮ ನಿವೃತ್ತಿ ಬದುಕಿಗೆ ಆಧಾರ ನೀಡಬಲ್ಲ ಸ್ಕೀಮ್ಗಳಾಗಿವೆ. ಇದರಲ್ಲಿ ಯಾವುದು ನಮಗೆ ಸೂಕ್ತ? ಇದನ್ನು ತಿಳಿಯುವ ಮುನ್ನ ಈ ಸ್ಕೀಮ್ಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ.
ಇದು ಪ್ರತಿಯೊಬ್ಬ ಉದ್ಯೋಗಿಗೂ ಸಿಗುವ ಒಂದು ಸ್ಕೀಮ್. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯು ಈ ಸ್ಕೀಮ್ ಅಳವಡಿಸಬೇಕು. ಎಲ್ಲಾ ಉದ್ಯೋಗಿಗೂ ಇಪಿಎಫ್ ಖಾತೆ ತೆರೆಯಬೇಕು. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣವನ್ನು ಇಪಿಎಫ್ ಖಾತೆಗೆ ಹಾಕಬೇಕು. ಸಂಸ್ಥೆಯೂ ಅಷ್ಟೇ ಪ್ರಮಾಣದ ಹಣವನ್ನು ಈ ಖಾತೆಗೆ ಜಮೆ ಮಾಡಬೇಕು. ಹೀಗೆ ಇದರಲ್ಲಿ ಜಮೆಯಾದ ಹಣಕ್ಕೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ಸೇರಿಸಿ ತುಂಬುತ್ತದೆ.
ಇಪಿಎಫ್ ಎಂಬುದು ಉದ್ಯೋಗಿ ನಿವೃತ್ತಿರಾದ ಬಳಿಕ ಅವರ ಹಣಕಾಸು ಭದ್ರತೆ ಅಥವಾ ಪಿಂಚಣಿಗೆಂದು ರೂಪಿಸಲಾಗಿರುವ ಸ್ಕೀಮ್. ಇದಕ್ಕೆ ತೆರಿಗೆ ಲಾಭವೂ ಉಂಟು. ತುರ್ತು ಅಗತ್ಯಬಿದ್ದರೆ ಮಧ್ಯದಲ್ಲಿ ಇಪಿಎಫ್ ಖಾತೆಯಿಂದ ಮುಂಗಡ ಹಣ ಹಿಂಪಡೆಯಲು ಸಾಧ್ಯ.
ಇದನ್ನೂ ಓದಿ: Tips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ
ಇಪಿಎಫ್ ಖಾತೆ ಇರುವ ಉದ್ಯೋಗಿಗಳಿಗೆ ಸಿಗುವ ಹೆಚ್ಚುವರಿ ಆಯ್ಕೆ ಇದು. ಪ್ರಸಕ್ತ ಇಪಿಎಫ್ ಖಾತೆಗೆ ಉದ್ಯೋಗಿಯ ಬೇಸಿಕ್ ಸಂಬಳದ ಶೇ. 12ರಷ್ಟು ಹಣವನ್ನು ತುಂಬಲಾಗುತ್ತದೆ. ಉದ್ಯೋಗಿಗಳು ಇಚ್ಛಿಸಿದರೆ ತಮ್ಮ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಇದರಿಂದ ಖಾತೆಗೆ ಹಣ ಸಂಗ್ರಹ ಹೆಚ್ಚುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂಬುದೂ ಕೂಡ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂಬ ದೃಷ್ಟಿಯಿಂದ ರೂಪಿಸಿರು ಯೋಜಜನೆ. ಉದ್ಯೋಗಿಗಳು ಮಾತ್ರವಲ್ಲ ಯಾವುದೇ ಸಾರ್ವಜನಿಕರು ಪಿಪಿಎಫ್ನಲ್ಲಿ ಹೂಡಿಕೆ ಮಾಡಬಹುದು. ಪಿಪಿಎಫ್ನ ಕನಿಷ್ಠ ಅವಧಿ 15ವರ್ಷದ್ದಾಗಿದೆ. ಇದಕ್ಕೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Crorepati: 10,000 ರೂ ಎಸ್ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ
ಈ ಮೂರು ಸ್ಕೀಮ್ಗಳು ಉತ್ತಮವೇ. ಪಿಪಿಎಫ್ನಲ್ಲಿ ನಿಮಗೆ ಸಿಗುವ ಬಡ್ಡಿ ಎಷ್ಟೇ ಮೊತ್ತದ್ದಾದರೂ ತೆರಿಗೆ ಅನ್ವಯ ಆಗುವುದಿಲ್ಲ.
ಇಪಿಎಫ್ ಮತ್ತು ವಿಪಿಎಫ್ನಲ್ಲಿ ನೀವು ಗಳಿಸುವ ತೆರಿಗೆ ವರ್ಷಕ್ಕೆ 2.5 ಲಕ್ಷ ರೂ ಮೇಲ್ಪಟ್ಟಿದ್ದರೆ ಮಾತ್ರ ಆ ಹೆಚ್ಚುವರಿ ಬಡ್ಡಿ ಹಣಕ್ಕೆ ತೆರಿಗೆ ಬೀಳುತ್ತದೆ. ಸರ್ಕಾರಿ ನೌಕರರಾದರೆ 5 ಲಕ್ಷ ರೂವರೆಗೂ ಬಡ್ಡಿ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.