
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PM Jeevan Jyoti Bima Yojana) 2015ರಲ್ಲಿ ಆರಂಭವಾಗಿದೆ. ಹೆಚ್ಚೆಚ್ಚು ಜನರನ್ನು ಇನ್ಷೂರೆನ್ಸ್ ವ್ಯಾಪ್ತಿಗೆ ತರುವ ಉದ್ದೇಶದಿಂದ ಸರ್ಕಾರ ಜಾರಿ ತಂದಿದೆ. ಇಲ್ಲಿಯವರೆಗೆ 10 ವರ್ಷದಲ್ಲಿ ಕೋಟ್ಯಂತರ ಜನರು ಈ ಇನ್ಷೂರೆನ್ಸ್ ಕವರೇಜ್ ಪಡೆದಿದ್ದಾರೆ. ಕೈಗೆಟುಕುವ ದರದಲ್ಲಿ ಇನ್ಷೂರೆನ್ಸ್ ಪ್ಲಾನ್ಗಳಿದ್ದು, ಬಡವರೂ ಕೂಡ ಪಾಲಿಸಿ ಪಡೆಯಲು ಅವಕಾಶ ಇದೆ.
ನೀವು ಯಾವುದೇ ಕಮರ್ಷಿಯಲ್ ಬ್ಯಾಂಕು ಮತ್ತು ಅಂಚೆ ಕಚೇರಿಗೆ ಹೋಗಿ ಜೀವನ್ ಜ್ಯೋತಿ ವಿಮಾ ಯೋಜನೆಯನ್ನು ಪಡೆಯಬಹುದು. ವಿಮೆ ಮಾಡಿಸುವವರ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 50 ವರ್ಷ ಇದೆ. ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಇದ್ದರೆ ಅದರಲ್ಲಿ ಇದನ್ನು ಮಾಡಿಸಬಹುದು. ಒಬ್ಬ ವ್ಯಕ್ತಿ ಹಲವು ಅಕೌಂಟ್ ಹೊಂದಿದ್ದರೂ ಒಂದು ಅಕೌಂಟ್ನಲ್ಲಿ ಮಾತ್ರವೇ ಪಿಎಂಜೆಜೆಬಿವೈ ಪ್ಲಾನ್ ಪಡೆಯಬಹುದು. ಸರ್ಕಾರದ ಬೆಂಬಲಿತ ಇನ್ಷೂರೆನ್ಸ್ ಪ್ಲಾನ್ ಇದಾದರೂ ಪ್ರೀಮಿಯಮ್ಗೆ ಸರ್ಕಾರದ ಕೊಡುಗೆ ಇರುವುದಿಲ್ಲ.
ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ
ಪಿಎಂ ಜೀವನಜ್ಯೋತಿ ವಿಮಾ ಯೋಜನೆಯು ಲೈಫ್ ಇನ್ಷೂರೆನ್ಸ್ ಸ್ಕೀಮ್ ಆಗಿದೆ. ಒಂದು ವರ್ಷ ಅವಧಿಯ ಟರ್ಮ್ ಪಾಲಿಸಿ ಇದು. ಅಂದರೆ, ಪ್ರತೀ ವರ್ಷ ಈ ಪಾಲಿಸಿಯನ್ನು ನವೀಕರಿಸಬೇಕಾಗುತ್ತದೆ. ವರ್ಷಕ್ಕೆ 436 ರೂ ಪ್ರೀಮಿಯಮ್ ಇರುತ್ತದೆ. ಪ್ರತೀ ವರ್ಷ ನೀವೇ ಮ್ಯಾನುಯಲ್ ಆಗಿ ಪ್ರೀಮಿಯಮ್ ಪಾವತಿಸಿ ಪಾಲಿಸಿ ನವೀಕರಿಸಬಹುದು. ಅಥವಾ ಆಟೊಡೆಬಿಟ್ ಆಗುವಂತೆ ಮಾಡಬಹುದು.
ಪಾಲಿಸಿದಾರ ಸಾವನ್ನಪ್ಪಿದರೆ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಸಿಗುತ್ತದೆ. ಮತ್ತೊಂದು ಸಂಗತಿ ಎಂದರೆ, ಪ್ರತೀ ವರ್ಷ ಜೂನ್ ತಿಂಗಳಲ್ಲಿ ರಿನಿವಲ್ ಇರುತ್ತದೆ. ನೀವು ಹೊಸದಾಗಿ ಪಾಲಿಸಿ ಪಡೆಯುತ್ತಿದ್ದರೆ ಯಾವ ತಿಂಗಳಲ್ಲಿ ಹಣ ಪಾವತಿ ಮಾಡುತ್ತೀರಿ ಎಂಬುದರ ಮೇಲೆ ಆರಂಭಿಕ ಪ್ರೀಮಿಯಮ್ ನಿಗದಿಯಾಗುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್
ಉದಾಹರಣೆಗೆ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜೀವನ್ ಜ್ಯೋತಿ ಬಿಮಾ ಪಾಲಿಸಿ ಪಡೆದರೆ ಮೊದಲ ಕಂತು 436 ರೂ ಇರುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಎನ್ರೋಲ್ ಆದರೆ ಪ್ರೀಮಿಯಮ್ 342 ರೂ ಆಗುತ್ತದೆ. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿಯಾದರೆ 228 ರೂ, ಹಾಗೂ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಖರೀದಿಸಿದರೆ 114 ರು ಪ್ರೀಮಿಯಮ್ ಇರುತ್ತದೆ.
ಈ ಮೇಲಿನದ್ದು ಮೊದಲ ಪ್ರೀಮಿಯಮ್ ಮಾತ್ರವೇ. ನೀವು ಎರಡನೇ ವರ್ಷಕ್ಕೆ ರಿನಿವಲ್ ಮಾಡುವಾಗ ಪೂರ್ಣವಾದ 436 ರೂ ಪ್ರೀಮಿಯಮ್ ಪಾವತಿಸಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ