ಜನಸಾಮಾನ್ಯರು ಹೆಚ್ಚು ಇಷ್ಟಪಡುವ ಹೂಡಿಕೆಗಳು ಯಾವುದು ಎಂದರೆ ಚಿಟ್ ಫಂಡ್ ಅಥವಾ ಚೀಟಿ ಮತ್ತು ರಿಕರಿಂಗ್ ಡೆಪಾಸಿಟ್ (RD- Recurring Deposit) ಅಥವಾ ಆರ್ಡಿ ಎನ್ನಲಡ್ಡಿ ಇಲ್ಲ. ಆರ್ಡಿ ಒಂದು ರೀತಿಯಲ್ಲಿ ಎಸ್ಐಪಿ ಯೋಜನೆಯಾಗಿದೆ. ಎಫ್ಡಿಗಿಂತಲೂ ಸರಳವಾಗಿ ನಿರ್ವಹಿಸಬಹುದು. ಹಲವು ಉಳಿತಾಯ ಯೋಜನೆಗಳಷ್ಟೇ ಬಡ್ಡಿ ಆರ್ಡಿಯಿಂದಲೂ ಸಿಗುತ್ತದೆ. ಬಡ್ಡಿ ದರದಲ್ಲಿ ಎಫ್ಡಿ ದರಕ್ಕೆ ಪೈಪೋಟಿ ನೀಡಬಲ್ಲುದು. ಕೆಲ ಬ್ಯಾಂಕುಗಳಲ್ಲಿ ಆರ್ಡಿಗೆ ಶೇ. 7.6ರವರೆಗೂ ಬಡ್ಡಿ ಸಿಗುತ್ತದೆ. ಆರ್ಡಿ ಪರಿಣಾಮಕಾರಿ ಎನಿಸುವುದು ಅದರ ನಿರ್ವಹಣೆಯಲ್ಲಿ. ನೀವು ಬ್ಯಾಂಕಿನಲ್ಲಿ ಆರ್ಡಿ ತೆರೆದರೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಖಾತೆಯಿಂದಲೇ ನೇರವಾಗಿ ಮತ್ತು ಸ್ವಯಂಚಾಲಿತವಾಗಿ ರವಾನೆಯಾಗುವಂತೆ ಮಾಡಬಹುದು. ನೀವೇ ಖುದ್ದಾಗಿ ಆರ್ಡಿಗೆ ಹಣ ಟ್ರಾನ್ಸ್ಫರ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಆರ್ಡಿ ಒಂದು ಸಮರ್ಪಕ ಹೂಡಿಕೆ ಯೋಜನೆಯೂ ಹೌದು. 6 ತಿಂಗಳಿಂದ ಹಿಡಿದು 10 ವರ್ಷದವರೆಗೂ ಠೇವಣಿಗಳಿಗೆ ಅವಕಾಶ ಇದೆ.
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಆರ್ಡಿಗೆ ಶೇ. 7ರಷ್ಟು ವಾರ್ಷಿಕ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.5 ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Business Tips: ಬ್ಯುಸಿನೆಸ್ ಆರಂಭಿಸಲು ಯಾವ ವಯಸ್ಸು ಸೂಕ್ತ? ಇಂಟ್ರೆಸ್ಟಿಂಗ್ ಇದೆ ಈ ಮಾಹಿತಿ
ಆ್ಯಕ್ಸಿಸ್ ಬ್ಯಾಂಕ್ನಲ್ಲಿ 5 ವರ್ಷ ಅವಧಿಯ ಆರ್ಡಿಗೆ ವಾರ್ಷಿಕವಾಗಿ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಬರುತ್ತದೆ.
ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಿಕರಿಂಗ್ ಡೆಪಾಸಿಟ್ಗೆ ಶೇ. 6.8ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಶೇ. 7.30 ಇದೆ.
ಕರ್ಣಾಟಕ ಬ್ಯಾಂಕ್ನಲ್ಲಿ ಆರ್ಡಿ ಠೇವಣಿಗಳಿಗೆ ವಾರ್ಷಿಕ ಶೇ 7.20 ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.
ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್ ಅಥವಾ ಡಿಸಿಬಿ ಬ್ಯಾಂಕ್ನಲ್ಲಿ ಶೇ. 7.6ರವರೆಗಿನ ದರದಲ್ಲಿ ಆರ್ಡಿಗೆ ಬಡ್ಡಿ ಸಿಗುತ್ತದೆ. ಇದು ಸದ್ಯ ಅತ್ಯುತ್ತಮ ಬಡ್ಡಿ ದರ ಕೊಡುವ ಬ್ಯಾಂಕುಗಳ ಸಾಲಿಗೆ ಸೇರುತ್ತದೆ.
ಇದನ್ನೂ ಓದಿ: Mutual Funds: ಮ್ಯೂಚುವಲ್ ಫಂಡ್ಗೆ ಹಣ ಹಾಕಿ ಆತಂಕಗೊಂಡಿದ್ದೀರಾ? ಹೂಡಿಕೆ ಯಾವಾಗ ನಿಲ್ಲಿಸಬೇಕು? ಇಲ್ಲಿದೆ ಟಿಪ್ಸ್
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೊದಲಾದ ಹಲವು ಬ್ಯಾಂಕುಗಳು ಆರ್ಡಿಗೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ಆಫ್ ಮಾಡುತ್ತವೆ.
ಸಾಮಾನ್ಯವಾಗಿ ಗರಿಷ್ಠ ಬಡ್ಡಿ ದರ ಎಲ್ಲಾ ಮೊತ್ತದ ಠೇವಣಿಗಳಿಗೂ ಸಿಗುವುದಿಲ್ಲ. ಕೆಲ ಬ್ಯಾಂಕುಗಳಲ್ಲಿ 2ರಿಂದ 5 ವರ್ಷ ಅವಧಿಯ ಆರ್ಡಿಗಳಿಗೆ ಅತ್ಯಧಿಕ ಬಡ್ಡಿ ಆಫರ್ ಮಾಡಲಾಗುತ್ತದೆ. ಕೆಲ ಬ್ಯಾಂಕುಗಳು ಆರ್ಡಿಗೆ ಕನಿಷ್ಠ ಮಾಸಿಕ ಹೂಡಿಕೆ 500 ರೂ ಪಡೆದರೆ, ಇನ್ನೂ ಹಲವು ಬ್ಯಾಂಕುಗಳಲ್ಲಿ ಕನಿಷ್ಠ ಮೊತ್ತ 1,000 ರೂ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ತಿಂಗಳು ಆರ್ಡಿ ಕಟ್ಟದೇ ಹೋದರೆ ಈ ಯೋಜನೆ ಸ್ವಯಂಚಾಲಿತವಾಗಿ ನಿಂತುಹೋಗುತ್ತದೆ. ಆವರೆಗೂ ಕಟ್ಟಲಾದ ಅಷ್ಟೂ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಯಾವ ದಂಡವನ್ನು ವಿಧಿಸಲಾಗುವುದಿಲ್ಲ. ಹೀಗಾಗಿ, ರಿಕರಿಂಗ್ ಡೆಪಾಸಿಟ್ ಎಂಬುದು ಜನರಿಗೆ ಬಹಳ ಸುರಕ್ಷಿತವಾದ ಮತ್ತು ಸರಳವಾದ ಹೂಡಿಕೆ ಯೋಜನೆ ಎನಿಸಿದೆ.