Rs 1 Crore: ಎಸ್​ಐಪಿ ಸ್ಕೀಮ್​ನಲ್ಲಿ 1 ಕೋಟಿ ಗಳಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಪಟ್ಟಿ

SIP Growth at 12pc CAGR: ನಿಮ್ಮ ಗೃಹಸಾಲಕ್ಕೆ ಪ್ರತೀ ತಿಂಗಳು ಕಂತು ಕಟ್ಟುವಂತೆಯೋ, ಅಥವಾ ಇನ್ಷೂರೆನ್ಸ್ ಹಣವನ್ನು ನಿಯಮಿತವಾಗಿ ಕಟ್ಟುವಂತೆ ಎಸ್​ಐಪಿಗೂ ನೀವು ನಿಯಮಿತವಾಗಿ ಹಣ ಕಟ್ಟಿದರೆ ನೀವಂದುಕೊಂಡ ಹಣಕಾಸು ಗುರಿ ಸಾಕಾರ ಮಾಡಿಕೊಳ್ಳಬಹುದು.

Rs 1 Crore: ಎಸ್​ಐಪಿ ಸ್ಕೀಮ್​ನಲ್ಲಿ 1 ಕೋಟಿ ಗಳಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಪಟ್ಟಿ
ಹಣ
Follow us
|

Updated on: May 05, 2023 | 4:38 PM

ಹಣ ಬೆಳೆಸುವ ಸಾಧನವಾಗಿ ಮ್ಯೂಚುವಲ್ ಫಂಡ್ (Mutual Fund) ಈಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಅದರಲ್ಲೂ ಮ್ಯೂಚುವಲ್ ಫಂಡ್​ಗೆ ಜೋಡಿತವಾದ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ SIP ಯೋಜನೆಗಳು ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ದೀರ್ಘಾವಧಿ ಪ್ರಗತಿ ಹೊಂದಲು ಎಸ್​ಐಪಿ ಬಹಳ ಪರಿಣಾಮಕಾರಿ ಎನಿಸಿವೆ. ಈ ಮ್ಯೂಚುವಲ್ ಫಂಡ್​ಗಳು ಜನರ ಹೂಡಿಕೆ ಹಣವನ್ನು ಷೇರುಮಾರುಕಟ್ಟೆ ಇತ್ಯಾದಿ ಲಾಭದಾಯಕ ಸ್ಥಳಗಳಲ್ಲಿ ಮರುಹೂಡಿಕೆ ಮಾಡಿ ಲಾಭ ಸೃಷ್ಟಿಸುತ್ತವೆ. ಈ ಲಾಭವು ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿದವರಿಗೆ ವರ್ಗವಾಗುತ್ತದೆ. ಮ್ಯೂಚುವಲ್ ಫಂಡ್​ಗೆ ನೇರವಾಗಿ ಹೂಡಿಕೆ ಮಾಡುವುದಕ್ಕಿಂತ ಎಸ್​ಐಪಿ ಮೂಲಕ ಹೂಡಿಕೆ ಮಾಡುವುದು ಇನ್ನೂ ಉತ್ತಮ ಎನಿಸುತ್ತದೆ. ನೀವು ಆದಾಯದಲ್ಲಿ ನಿಯಮಿತವಾಗಿ ಒಂದಷ್ಟು ಭಾಗವನ್ನು ಎಸ್​ಐಪಿ ಮೂಲಕ ಹೂಡಿಕೆ ಮಾಡಬಹುದು. ಇದರಿಂದ ಹೂಡಿಕೆಗೆ ನಿಮ್ಮ ಬದ್ಧತೆ ಹೆಚ್ಚುತ್ತದೆ.

ಯಾವುದೇ ಮ್ಯೂಚುವಲ್ ಫಂಡ್ ಪ್ರತೀ ತಿಂಗಳು, ಪ್ರತೀ ವರ್ಷವೂ ಬೆಳೆಯುತ್ತದೆ ಎಂದು ನಿರೀಕ್ಷಿಸಲು ಆಗುವುದಿಲ್ಲ. ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ್ದವು ಇವು. ನಿಮ್ಮ ಗೃಹಸಾಲಕ್ಕೆ ಪ್ರತೀ ತಿಂಗಳು ಕಂತು ಕಟ್ಟುವಂತೆಯೋ, ಅಥವಾ ಇನ್ಷೂರೆನ್ಸ್ ಹಣವನ್ನು ನಿಯಮಿತವಾಗಿ ಕಟ್ಟುವಂತೆ ಎಸ್​ಐಪಿಗೂ ನೀವು ನಿಯಮಿತವಾಗಿ ಹಣ ಕಟ್ಟಿದರೆ ನೀವಂದುಕೊಂಡ ಹಣಕಾಸು ಗುರಿ ಸಾಕಾರ ಮಾಡಿಕೊಳ್ಳಬಹುದು.

ಇದನ್ನೂ ಓದಿHealth Insurance: ಹೆಲ್ತ್ ಇನ್ಷೂರೆನ್ಸ್ ಮಾಡಿಸಲು ಭಯವಾ? ಹಣ ಕ್ಲೇಮ್​ಗೆ ಗೊಂದಲವಾ? ಇಲ್ಲಿದೆ ಟಿಪ್ಸ್

ಒಂದು ಕೋಟಿ ರೂ ಹಣ ಸಂಪಾದಿಸಬೇಕೆನ್ನುವ ಗುರಿ ನಿಮ್ಮಲ್ಲಿದೆ ಎಂದಿಟ್ಟುಕೊಂಡರೆ, ಈ ಗುರಿ ಸಾಧನೆಗೆ ನಾವು ಪ್ರತೀ ತಿಂಗಳು ಎಷ್ಟು ಹಣ ಕಟ್ಟಬೇಕು, ಎಷ್ಟು ವರ್ಷ ಕಟ್ಟಬೇಕು ಎಂಬ ಪ್ರಶ್ನೆ ಬಂದೇ ಬರುತ್ತದೆ. ಸಾಮಾನ್ಯವಾಗಿ ಒಂದು ಎಸ್​ಐಪಿ ಒಂದು ವರ್ಷದ ಅವಧಿಯಲ್ಲಿ ಶೇ. 12ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಡ್ಡಿ ಇಲ್ಲ. ಕೆಲ ಮ್ಯೂಚುವಲ್ ಫಂಡ್​ಗಳು ವರ್ಷಕ್ಕೆ ಶೇ. 25ರ ದರದಲ್ಲೂ ಬೆಳೆದಿರುವ ಉದಾಹರಣೆಗಳುಂಟು. ಒಂದು ಕೋಟಿ ರೂನಷ್ಟು ಹಣ ಬೆಳೆಸಲು ಈ ಕೆಳಗಿನ ಲೆಕ್ಕಾಚಾರ ಸಹಾಯಕವಾಗಬಹುದು. ಇದು ಎಸ್​ಐಪಿ ಶೇ. 12ರ ದರದಲ್ಲಿ ಬೆಳೆಯುತ್ತದೆ ಎಂಬ ಎಣಿಕೆ ಮೇಲೆ ಮಾಡಿರುವ ಲೆಕ್ಕಾಚಾರ, ನೆನಪಿರಲಿ:

10,000 ರೂ ಎಸ್​ಐಪಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ನಲ್ಲಿ ತಿಂಗಳಿಗೆ 10,000 ರೂ ಕಟ್ಟುತ್ತಾ ಹೋದರೆ ಶೇ. 12ರ ಸಿಎಜಿಆರ್ ದರದಲ್ಲಿ ಅದು ಬೆಳೆದರೆ ನಿಮ್ಮ ಹೂಡಿಕೆಯು 1 ಕೋಟಿ ಆಗಲು 20 ವರ್ಷ ಬೇಕಾಗುತ್ತದೆ. ಅಂದರೆ ನೀವು 20 ವರ್ಷ ಕಾಲ ತಿಂಗಳಿಗೆ 10,000 ರೂ ಕಟ್ಟಿದರೆ ನಿಮ್ಮ ಹಣ 1 ಕೋಟಿ ಆಗುತ್ತದೆ. ವಾಸ್ತವದಲ್ಲಿ ತಿಂಗಳಿಗೆ 10,000 ರೂ ಅನ್ನು 20 ವರ್ಷ ಕಟ್ಟಿದರೆ ಅದು 24 ಲಕ್ಷ ರೂ ಆಗುತ್ತದೆ. ಇದಕ್ಕೆ ವಾರ್ಷಿಕ ಶೇ. 12ರಂತೆ ಸಿಎಜಿಆರ್ ಸೇರಿದರೆ 1 ಲಕ್ಷ ರೂ ನಿಮ್ಮ ಕೈಸೇರಬಹುದು.

ಇದನ್ನೂ ಓದಿGreat Returns: 10,000 ರೂ ಎಸ್​ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್

20,000 ರೂ ಎಸ್​ಐಪಿ: ತಿಂಗಳಿಗೆ 20,000 ರೂ ಕಟ್ಟುತ್ತಾ ಹೋದರೆ 1 ಕೋಟಿ ರೂ ಆಗಲು 15 ವರ್ಷ 5 ತಿಂಗಳು ಬೇಕು. ಅದು ಶೇ. 12ರ ಸಿಎಜಿಆರ್ ದರದಲ್ಲಿ.

30,000 ರೂ ಎಸ್​ಐಪಿ: ತಿಂಗಳಿಗೆ 30,000 ರೂ ಹಣವನ್ನು ಕಟ್ಟುತ್ತಾ ಹೋದರೆ 12 ವರ್ಷ 4 ತಿಂಗಳಲ್ಲಿ 1 ಕೋಟಿ ರೂ ಮೊತ್ತವಾಗುತ್ತದೆ.

40,000 ರೂ ಎಸ್​ಐಪಿ: ತಿಂಗಳಿಗೆ 40,000 ರೂ ಕಟ್ಟಿದರೆ 1 ಕೋಟಿ ಆಗಲು 10 ವರ್ಷ 6 ತಿಂಗಳು ಬೇಕು.

50,000 ರೂ ಎಸ್​ಐಪಿ: ತಿಂಗಳಿಗೆ 50,000 ರೂ ಕಟ್ಟಿದರೆ 9 ವರ್ಷ 2 ತಿಂಗಳಲ್ಲಿ 1 ಕೋಟಿ ರೂ ಜಮೆ ಆಗುತ್ತದೆ.

1 ಲಕ್ಷ ರೂ ಎಸ್​ಐಪಿ: ನೀವು ತಿಂಗಳಿಗೆ 1 ಲಕ್ಷ ರೂನಷ್ಟು ಹೂಡಿಕೆ ಮಾಡಬಲ್ಲಿರಾದರೆ ಕೇವಲ 5 ವರ್ಷ 10 ತಿಂಗಳಲ್ಲಿ 1ಕೋಟಿ ರೂ ನೋಡಬಹುದು.

ಇದನ್ನೂ ಓದಿMudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?

ಈ ಮೇಲಿನ ಲೆಕ್ಕಾಚಾರವು ಶೇ. 12ರ ಸಿಎಜಿಆರ್ ದರದ ಆಧಾರದಲ್ಲಿ ಮಾಡಿರುವಂಥದ್ದು. ಕೆಲ ಎಸ್​ಐಪಿಗಳು ಇನ್ನೂ ಅಧಿಕ ಸಿಎಜಿಆರ್ ದರದಲ್ಲಿ ಬೆಳೆದಲ್ಲಿ ಇನ್ನೂ ಬೇಗನೇ ಹಣ ಬೆಳೆಯುತ್ತದೆ. ಸಿಎಜಿಆರ್ ಎಂದರೆ ಕಾಂಪೌಂಡೆಡ್ ಆನುಯಲ್ ಗ್ರೋತ್ ರೇಟ್. ಅಂದರೆ, ನಿರ್ದಿಷ್ಟ ವರ್ಷಗಳಲ್ಲಿ ಸರಾಸರಿಯಾಗಿ ವರ್ಷಕ್ಕೆ ಎಷ್ಟು ಬೆಳೆದಿದೆ ಎಂಬುದರ ಲೆಕ್ಕ ಅದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ