Petrol Diesel Price on July 23: ಇಂದು ಕೇಂದ್ರ ಬಜೆಟ್​, ದೇಶಾದ್ಯಂತ ಇಂಧನ ದರ ಎಷ್ಟಿದೆ ತಿಳಿಯಿರಿ

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಾರುಕಟ್ಟೆ ಕಂಪನಿಗಳು ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಸ್ಥಿರವಾಗಿರಿಸಿಕೊಂಡಿವೆ. ಜುಲೈ 23, ಮಂಗಳವಾರದಂದು ವಿವಿಧ ನಗರಗಳಲ್ಲಿ ತೈಲ ದರ ಎಷ್ಟಿದೆ ತಿಳಿಯಿರಿ.

Petrol Diesel Price on July 23: ಇಂದು ಕೇಂದ್ರ ಬಜೆಟ್​, ದೇಶಾದ್ಯಂತ ಇಂಧನ ದರ ಎಷ್ಟಿದೆ ತಿಳಿಯಿರಿ
ಪೆಟ್ರೋಲ್Image Credit source: Business Standard
Follow us
|

Updated on: Jul 23, 2024 | 7:16 AM

ಇಂದು ಕೇಂದ್ರ ಬಜೆಟ್​ ಮಂಡನೆಯಾಗಲಿದ್ದು, ಇದಕ್ಕೂ ಮುನ್ನ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಾಗಲಿದೆ ಎಂಬುದನ್ನು ತಿಳಿಯೋಣ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಆದಾಗ್ಯೂ ತೈಲದ ಬೆಲೆ ಇನ್ನೂ ಪ್ರತಿ ಬ್ಯಾರೆಲ್​ಗೆ 85 ಡಾಲರ್​ಗಿಂತ ಕಡಿಮೆ ಇದೆ. ಬ್ರೆಂಟ್ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 83.04 ಡಾಲರ್ ಹಾಗೂ ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 80.56 ಡಾಲರ್​ ಆಗಿದೆ.

ರಾಷ್ಟ್ರಮಟ್ಟದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದರೂ, ರಾಜ್ಯ ಮಟ್ಟದಲ್ಲಿ ವಿಧಿಸಲಾದ ತೆರಿಗೆಗಳಿಂದಾಗಿ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು.

ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಅನ್ನು 15 ಪೈಸೆ ಅಗ್ಗವಾಗಿ ಲೀಟರ್‌ಗೆ 94.66 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಕೂಡ 18 ಪೈಸೆ ಕುಸಿದು ಲೀಟರ್‌ಗೆ 87.76 ರೂ.ಗೆ ತಲುಪಿದೆ. ಗಾಜಿಯಾಬಾದ್‌ನಲ್ಲಿ ಪೆಟ್ರೋಲ್ 12 ಪೈಸೆ ಇಳಿಕೆಯಾಗಿ 94.53 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 14 ಪೈಸೆ ಇಳಿಕೆಯಾಗಿ 87.61 ರೂ.ಗೆ ತಲುಪಿದೆ. ಹರಿಯಾಣದ ರಾಜಧಾನಿ ಗುರುಗ್ರಾಮ್‌ನಲ್ಲಿ ಪೆಟ್ರೋಲ್ ಲೀಟರ್‌ಗೆ 14 ಪೈಸೆ ಕುಸಿದು 94.97 ರೂ.ಗೆ ಮತ್ತು ಡೀಸೆಲ್ 14 ಪೈಸೆಯಷ್ಟು ಅಗ್ಗವಾಗಿದ್ದು, ಲೀಟರ್‌ಗೆ 87.83 ರೂ.ಗೆ ಮಾರಾಟವಾಗುತ್ತಿದೆ.

ಮತ್ತಷ್ಟು ಓದಿ: Petrol Diesel Price on July 20: ಕೇಂದ್ರ ಬಜೆಟ್​ಗೂ ಮುನ್ನ ದೇಶದಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗಿದೆಯೇ?

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 102.86 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 88.94 ರೂ. ಇದೆ.

– ದೆಹಲಿಯಲ್ಲಿ ಪೆಟ್ರೋಲ್ ರೂ 94.72 ಮತ್ತು ಡೀಸೆಲ್ ಲೀಟರ್‌ಗೆ ರೂ 87.62 – ಮುಂಬೈನಲ್ಲಿ ಪೆಟ್ರೋಲ್ ರೂ 103.44 ಮತ್ತು ಡೀಸೆಲ್ ರೂ 89.97 ರೂ. – ಚೆನ್ನೈನಲ್ಲಿ ಪೆಟ್ರೋಲ್ ರೂ 100.76 ಮತ್ತು ಡೀಸೆಲ್ ರೂ. 92.35 ಕೋಲ್ಕತ್ತಾದಲ್ಲಿ ರೂ.95 ರೂ. ಮತ್ತು ಡೀಸೆಲ್ ಲೀಟರ್‌ಗೆ 91.76 ರೂ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಬಿಡುಗಡೆಯಾಗುತ್ತವೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಆಧಾರದ ಮೇಲೆ ತೈಲ ಮಾರಕಟ್ಟೆ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನವೀಕರಿಸಲಾಗುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ