Vishwakarma scheme Loan: ಕರಕುಶಲಕರ್ಮಿಗಳಿಗೆ 1 ಲಕ್ಷ ರೂವರೆಗೆ ಸಾಲ: ಕೇಂದ್ರ ಅನುಮೋದನೆ

|

Updated on: Aug 16, 2023 | 4:37 PM

CCEA Approves PM Vishwakarma Scheme: ಅಕ್ಕಸಾಲಿಗರು, ಶಿಲ್ಪಿಗಳು, ಚಮ್ಮಾರ, ಕುಂಬಾರ, ಕಮ್ಮಾರ ಇತ್ಯಾದಿ ಹಲವು ಕರಕುಶಲಕರ್ಮಿ ಸಮುದಾಯದವರಿಗೆ ವೃತ್ತಿಯಲ್ಲಿ ಸಹಾಯವಾಗಿ ಕೇಂದ್ರ ಸರ್ಕಾರ 1 ಲಕ್ಷ ರೂವರೆಗೂ ಸಾಲಸೌಲಭ್ಯ ಒದಗಿಸುವ ಯೋಜನೆ ರೂಪಿಸಿದೆ.

Vishwakarma scheme Loan: ಕರಕುಶಲಕರ್ಮಿಗಳಿಗೆ 1 ಲಕ್ಷ ರೂವರೆಗೆ ಸಾಲ: ಕೇಂದ್ರ ಅನುಮೋದನೆ
ಕರಕುಶಲಕರ್ಮಿಗಳು
Follow us on

ನವದೆಹಲಿ, ಆಗಸ್ಟ್ 16: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಘೋಷಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಗೆ (PM Vishwakarma Scheme) ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA- Central Committee on Economic Affairs) ಆಗಸ್ಟ್ 16, ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಿಂದ ದೇಶದ 30 ಲಕ್ಷ ಕರಕುಶಲಕರ್ಮಿಗಳಿಗೆ ಲಾಭವಾಗಲಿದೆ. ಇವರಿಗೆ ಕೇವಲ 5 ಪರ್ಸೆಂಟ್ ವಾರ್ಷಿಕ ಬಡ್ಡಿದರದಲ್ಲಿ 1 ಲಕ್ಷ ರೂವರೆಗೂ ಮೊದಲ ಹಂತದ ಸಾಲ ಕೊಡುವ ಯೋಜನೆ ಇದು. ಮುಂದಿನ 5 ವರ್ಷಗಳಿಗೆ ಈ ಯೋಜನೆಗೆಂದು ಸರ್ಕಾರ 13,000 ಕೋಟಿ ರೂ ಹಣ ಮಿಸಲಿಟ್ಟಿದೆ.

ಪಿಎಂ ವಿಶ್ವಕರ್ಮ ಸ್ಕೀಮ್​ ಯಾರಿಗೆಲ್ಲಾ ಲಭ್ಯ ಇದೆ?

ಪಿಎಂ ವಿಶ್ವಕರ್ಮ ಯೋಜನೆಯು ಕೇವಲ ವಿಶ್ವಕರ್ಮ ಸಮುದಾಯಕ್ಕೆ ಮಾತ್ರವಲ್ಲ, ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಮಂದಿಗೆ ಅನ್ವಯ ಆಗುತ್ತದೆ. ಸದ್ಯ 18 ಸಾಂಪ್ರದಾಯಿಕ ಕರಕುಶಲ ಕೆಲಸಗಳನ್ನು ಇದರಲ್ಲಿ ಒಳಗೊಳ್ಳಲಾಗಿದೆ. ಈ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಐಡಿ ಕಾರ್ಡ್, ಪಿಎಂ ವಿಶ್ವಕರ್ಮ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತದೆ.

ಮೊದಲ ಹಂತದಲ್ಲಿ 1 ಲಕ್ಷ ರೂ ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂನಷ್ಟು ಸಾಲ ಒದಗಿಸಲಾಗುತ್ತದೆ. ವಾರ್ಷಿಕ ಬಡ್ಡಿದರ ಶೇ. 5 ಇರಲಿದೆ. ಜೊತೆಗೆ, ಕೌಶಲ್ಯ ಅಭಿವೃದ್ಧಿ, ಟೂಲ್​ಕಿಟ್, ಡಿಜಿಟಲ್ ವಹಿವಾಟು, ಮಾರ್ಕೆಟಿಂಗ್ ಇತ್ಯಾದಿ ಪ್ರೋತ್ಸಾಹಗಳನ್ನು ಕರಕುಶಲಕರ್ಮಿಗಳಿಗೆ ಒದಗಿಸಲಾಗುವುದು.

ಇದನ್ನೂ ಓದಿ: Income Tax Rules for X Users: ಟ್ವಿಟ್ಟರ್​ನಿಂದ ಆದಾಯ ಬರುತ್ತಿದ್ದರೆ ತೆರಿಗೆ ಎಷ್ಟು ಪಾವತಿಸಬೇಕು?

ಶಿಲ್ಪಿಗಳು, ಅಕ್ಕಸಾಲಿಗರು, ಚಮ್ಮಾರರು, ಮರಗೆಲಸದವರು, ದೋಣಿ ತಯಾರಕರು, ಬೀಗ ತಯಾರಕರು, ಕಮ್ಮಾರರು, ಕುಂಬಾರರು, ಗಾರೆ ಕೆಲಸದವರು ಮೊದಲಾದವರು ಪಿಎಂ ವಿಶ್ವಕರ್ಮ ಯೋಜನೆಗೆ ಫಲಾನುಭವಿಗಳಾಗಲು ಅರ್ಹರಿರುತ್ತಾರೆ.

ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಅನಾವರಣ
ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?

ಪಿಎಂ ಇ ಬಸ್ ಸೇವಾ ಯೋಜನೆ

ಇದೇ ವೇಳೆ, ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪಿಎಂ ಇಬಸ್ ಸೇವಾ ಯೋಜನೆಗೂ ಹಸಿರು ನಿಶಾನೆ ತೋರಿದೆ. ಈ ಯೋಜನೆ ಅಡಿ ದೇಶಾದ್ಯಂತ 10,000 ಎಲೆಕ್ಟ್ರಿಕ್ ಬಸ್ಸುಗಳು ರಸ್ತೆಗೆ ಇಳಿಯಲಿವೆ.

ಇದನ್ನೂ ಓದಿ: PM Narendra Modi: ಸ್ವಂತ ಸೂರು ಬೇಕೆನ್ನುವವರಿಗೆ ಸರ್ಕಾರದಿಂದ ಹೊಸ ಸ್ಕೀಮ್; ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ

ಕೇಂದ್ರ ಸಚಿವ ಅನುರಾಗ್ ಠಾಕೂರ್ ನೀಡಿದ ಮಾಹಿತಿ ಪ್ರಕಾರ 169 ನಗರಗಳಲ್ಲಿ ಈ 10,000 ಇ ಬಸ್ಸುಗಳ ನಿಯೋಜನೆ ಆಗಲಿದೆ. ಖಾಸಗಿ ಮತ್ತು ಸರ್ಕಾರ ಸಹಭಾಗಿತ್ವ ಮಾದರಿಯಲ್ಲಿ ಜಾರಿಯಾಗುವ ಈ ಯೋಜನೆಯ ಅಂದಾಜು ವೆಚ್ಚ 57,613 ಕೋಟಿ ರೂ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರ 20,000 ಕೋಟಿ ರೂ ಧನಸಹಾಯ ಒದಗಿಸಲಿದೆ.

ಇಬಸ್ ಯೋಜನೆಯಿಂದ 45ರಿಂದ 55 ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Wed, 16 August 23