ಹೋಳಿ ಆಡಿ ಕೊಳೆಯಾದ ಬಟ್ಟೆಗಳನ್ನು ಹೀಗೆ ಸ್ವಚ್ಛಗೊಳಿಸಿ
Income Tax Rules for X Users: ಟ್ವಿಟ್ಟರ್ನಿಂದ ಆದಾಯ ಬರುತ್ತಿದ್ದರೆ ತೆರಿಗೆ ಎಷ್ಟು ಪಾವತಿಸಬೇಕು?
ಸೋಷಿಯಲ್ ಮೀಡಿಯಾದಿಂದ ನಾವು ಗಳಿಸುವ ಆದಾಯ ಯಾವ ಪ್ರಮಾಣದ್ದು ಎಂಬುದರ ಮೇಲೆ ತೆರಿಗೆ ಅನ್ವಯ ಆಗುತ್ತದೆ. ನಿಯಮಿತ ಆದಾಯವಾ, ಹೆಚ್ಚುವರಿ ಆದಾಯವಾ, ವೃತ್ತಿಪರ ಆದಾಯವಾ, ಬ್ಯುಸಿನೆಸ್ ಆದಾಯವಾ ಎಂಬುದನ್ನು ಪರಿಗಣಿಸಲಾಗುತ್ತದೆ.
ಸೋಷಿಯಲ್ ಮೀಡಿಯಾದಿಂದ ಈಗ ಯಾರು ಬೇಕಾದರೂ ಆದಾಯ ಮಾಡಿಕೊಳ್ಳಬಹುದು. ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್ ಇತ್ಯಾದಿ ವಿಡಿಯೊ ಪ್ಲಾಟ್ಫಾರ್ಮ್ಗಳಿಂದ ಸಾಕಷ್ಟು ಹಣ ಮಾಡುವವರಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದಲೂ ಲಾಭ ಮಾಡಬಹುದು. ಇತರ ಹಲವು ವಿಡಿಯೋ ಪ್ಲಾಟ್ಫಾರ್ಮ್ಗಳು ಮಾನಿಟೈಸ್ (Monetisation) ಮಾಡುತ್ತವೆ. ಇದಕ್ಕೆ ಟ್ವಿಟ್ಟರ್ ಕೂಡ ಹೊರತಲ್ಲ. ಈಗೀಗ ಟ್ವಿಟ್ಟರ್ ಕೂಡ ತನ್ನ ಬಳಕೆದಾರರೊಂದಿಗೆ ಆದಾಯ ಹಂಚಿಕೊಳ್ಳತೊಡಗಿದೆ. ಟ್ವೀಟ್ಗಳ ರೀಚ್ ಮತ್ತು ಜಾಹೀರಾತು ವೀಕ್ಷಣೆ ಮೇಲೆ ಆದಾಯ ಅವಲಂಬಿತವಾಗುತ್ತದೆ.
ಟ್ಟಿಟ್ಟರ್ನಲ್ಲಿ ನೀವು ಆದಾಯ ಗಳಿಸಬೇಕಾದರೆ ಪ್ರೀಮಿಯಮ್ ಸಬ್ಸ್ಕ್ರೈಬರ್ ಆಗಿರಬೇಕು. ನಿಮ್ಮ ಟ್ವೀಟ್ಗಳೆಲ್ಲವೂ ಸೇರಿ 3 ತಿಂಗಳಲ್ಲಿ 50 ಲಕ್ಷ ಇಂಪ್ರೆಷನ್ ಪಡೆದಿರಬೇಕು. ಈ ಮಾನದಂಡ ಮುಟ್ಟಿದರೆ ಟ್ಟಿಟ್ಟರ್ನಿಂದ ಆದಾಯ ಪಡೆಯಬಹುದು. ಈಗ ನಿಮ್ಮ ಆದಾಯಕ್ಕೆ ತೆರಿಗೆ ಹೇಗೆ ಅನ್ವಯ ಆಗುತ್ತದೆ ಎಂಬುದು ಪ್ರಶ್ನೆ.
ಟ್ವಿಟ್ಟರ್ ಅಥವಾ ಎಕ್ಸ್ನಿಂದ ನೀವು ಗಳಿಸುವ ಆದಾಯವು ನಿಮ್ಮ ಪ್ರಮುಖ ಆದಾಯ ಮೂಲ ಅಲ್ಲವಾಗಿದ್ದು, ಬರೀ ಹೆಚ್ಚುವರಿ ಆದಾಯ ಮಾತ್ರವೇ ಆಗಿದ್ದರೆ ಅದಕ್ಕೆ ‘ಇನ್ಕಮ್ ಫ್ರಂ ಅದರ್ ಸೋರ್ಸಸ್’ ಅಡಿಯಲ್ಲಿ ತೆರಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ
ಒಂದು ವೇಳೆ ಟ್ವಿಟ್ಟರ್ ನಿಮ್ಮ ಪ್ರಮುಖ ಆದಾಯ ಮೂಲವಾಗಿದ್ದರೆ ಆಗ ‘ಪ್ರಾಫಿಟ್ಸ್ ಅಂಡ್ ಗೇಯ್ನ್ಸ್ ಆಫ್ ಬ್ಯುಸಿನೆಸ್ ಆರ್ ಪ್ರೊಫೆಷನ್’ ಅಡಿಯಲ್ಲಿ ತೆರಿಗೆ ಅನ್ವಯ ಆಗುತ್ತದೆ.
ನೀವು ವಿಶೇಷ ಪರಿಣತಿ ಬೇಕಾದ ಕಂಟೆಂಟ್ ಅನ್ನು ಟ್ವೀಟ್ ಮಾಡಿ ಆದಾಯ ಪಡೆಯುತ್ತಿದ್ದರೆ ಅದು ಪ್ರೊಫೆಷನ್ ಇನ್ಕಮ್ ಎಂದು ಪರಿಗಣಿತವಾಗುತ್ತದೆ. ಇಲ್ಲವಾದರೆ ಅದು ಬ್ಯುಸಿನೆಸ್ ಇನ್ಕಮ್ ಎನಿಸುತ್ತದೆ.
ಇದನ್ನೂ ಓದಿ: PM Narendra Modi: ಸ್ವಂತ ಸೂರು ಬೇಕೆನ್ನುವವರಿಗೆ ಸರ್ಕಾರದಿಂದ ಹೊಸ ಸ್ಕೀಮ್; ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ
ಇವು ಟ್ವಿಟ್ಟರ್ ಮಾತ್ರವಲ್ಲ, ಬೇರೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಂದ ನೀವು ಗಳಿಸುವ ಆದಾಯಕ್ಕೆ ಅನ್ವಯ ಆಗುತ್ತವೆ. ಐಟಿಆರ್ ಫೈಲ್ ಮಾಡುವಾಗ ಸೋಷಿಯಲ್ ಮೀಡಿಯಾಗಳ ಮೂಲಕ ಎಷ್ಟು ಆದಾಯ ಲಭ್ಯ ಆಗಿದೆ ಎಂಬುದನ್ನು ತಪ್ಪದೇ ನಮೂದಿಸಬೇಕು. ಅದಕ್ಕೆ ಅನ್ವಯ ಅಗುವ ತೆರಿಗೆಯನ್ನು ಕಟ್ಟಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ