ನಿಮ್ಮ ಪಿಎಫ್ ಖಾತೆಗೆ ಕಂಪನಿಯಿಂದ ಹಣ ಜಮೆ ಆಗಿಲ್ಲವಾ? ಹೀಗೆ ಮಾಡಿ

EPF Tips: ಸಂಬಳದಿಂದ ಪಿಎಫ್ ಹಣ ಕಡಿತಗೊಳಿಸಿದ್ದರೂ ಕೆಲವೊಮ್ಮೆ ಪಿಎಫ್ ಖಾತೆಗೆ ಹಣ ಜಮೆ ಆಗಿರುವುದಿಲ್ಲ. ಕಂಪನಿ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿದ್ದರೆ ಅದು ಅಪರಾಧ ಆಗುತ್ತದೆ. ನೀವು ಇಪಿಎಫ್​ಒಗೆ ದೂರು ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ನಿಮ್ಮ ಪಿಎಫ್ ಖಾತೆಗೆ ಕಂಪನಿಯಿಂದ ಹಣ ಜಮೆ ಆಗಿಲ್ಲವಾ? ಹೀಗೆ ಮಾಡಿ
ಇಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2023 | 5:20 PM

ಇಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಗೂ ಲಭ್ಯ ಇರುವ ನಿವೃತ್ತಿ ಯೋಜನೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಬಹಳ ಉಪಯುಕ್ತವಾಗಿರುವ ಈ ಸ್ಕೀಮ್​ನಲ್ಲಿ (EPF Scheme) ಪ್ರತಿ ಉದ್ಯೋಗಿಗೂ ಪ್ರತ್ಯೇಕವಾಗಿ ಇಪಿಎಫ್ ಖಾತೆ ತೆರೆಯಲಾಗುತ್ತದೆ. ಉದ್ಯೋಗಿಯ ಮೂಲವೇತನದ (Basic Salary) ಶೇ. 12ರಷ್ಟು ಭಾಗವನ್ನು ಪಿಎಫ್ ಖಾತೆಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ತುಂಬುತ್ತದೆ. ಇಪಿಎಫ್​ಒ ಸಂಸ್ಥೆ ವರ್ಷಕ್ಕೊಮ್ಮೆ ಸರ್ಕಾರ ನಿಗದಿ ಮಾಡಿದಷ್ಟು ಬಡ್ಡಿಹಣವನ್ನು ಪಿಎಫ್ ಖಾತೆಯ ಹಣಕ್ಕೆ ಸೇರಿಸಿಕೊಡುತ್ತದೆ. ಹೀಗೆ ಉದ್ಯೋಗಿ ನಿವೃತ್ತಿ ಆಗುವವರೆಗೂ ಇಪಿಎಫ್ ಹಣ ಬೆಳೆಯುತ್ತಾ ಹೋಗುತ್ತದೆ.

ಪಿಎಫ್ ಖಾತೆಗೆ ಹಣ ತುಂಬಿಲ್ಲದೇ ಹೋದರೆ?

ನಿಮ್ಮ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಹಣ ಭರ್ತಿಯಾಗುತ್ತಾ ಇರುತ್ತದೆ. ಕೆಲವೊಮ್ಮೆ ಹಣ ಜಮೆ ಆಗದೇ ಇರಬಹುದು. ನಿಮ್ಮ ಸ್ಯಾಲರಿ ಸ್ಲಿಪ್​ನಲ್ಲಿ ಅಥವಾ ಸಂಬಳ ಚೀಟಿಯಲ್ಲಿ ಇಪಿಎಫ್ ಹಣ ಮುರಿದುಕೊಳ್ಳಲಾಗಿದ್ದರೂ ಖಾತೆಗೆ ಹಣ ಹೋಗಿರುವುದಿಲ್ಲ. ಇಂಥ ಘಟನೆಗಳು ಒಮ್ಮೊಮ್ಮೆ ಆಗಬಹುದು. ನಿಮ್ಮ ಸಂಬಳದಿಂದ ಕಡಿತಗೊಂಡಾಗ್ಯೂ ಪಿಎಫ್ ಖಾತೆಗೆ ಹಣ ಜಮೆ ಆಗದೇ ಇದ್ದಲ್ಲಿ ಏನು ಮಾಡಬೇಕು? ಇದರ ಮೇಲೆ ಕ್ರಮ ಕೈಗೊಳ್ಳಲು ನಿಮ್ಮ ಮುಂದೆ ಕೆಲವಾರು ಆಯ್ಕೆಗಳಿವೆ.

ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ

  • ಮೊದಲಿಗೆ ನೀವು ಇಪಿಎಫ್​ಒ ಅಥವಾ ಯುಎಎನ್ ವೆಬ್​​ಸೈಟ್​ಗೆ ಹೋಗಿ ಲಾಗಿನ್ ಆಗಿ ಇಪಿಎಫ್ ಬ್ಯಾಲನ್ಸ್ ಅನ್ನು ಪರಿಶೀಲಿಸಿ.
  • ಇಲ್ಲಿ ನಿಮ್ಮ ಇಪಿಎಫ್ ಖಾತೆಗೆ ಹಣ ಜಮೆ ಆಗಿರುವುದನ್ನು ತೋರಿಸದೇ ಇದ್ದಲ್ಲಿ ಕಂಪನಿಯ ಫೈನಾನ್ಸ್ ಅಥವಾ ಹೆಚ್​ಆರ್ ವಿಭಾಗದವರನ್ನು ಸಂಪರ್ಕಿಸಿ.
  • ಕಂಪನಿಯವರು ಉದ್ಯೋಗಿಯ ಸಂಬಳದಲ್ಲಿ ಮುರಿದುಕೊಂಡ ಪಿಎಫ್ ಹಣವನ್ನು ಖಾತೆಗೆ ಹಾಕಲೇಬೇಕು ಎಂಬ ಕಡ್ಡಾಯ ನಿಯಮ ಇದೆ. ಒಂದು ವೇಳೆ ಕಂಪನಿಯಿಂದ ಈ ಲೋಪವಾಗಿದ್ದರೆ ಅದು ಅಪರಾಧ ಆಗುತ್ತದೆ. ನೀವು ಇಪಿಎಫ್​ಒ ಸಂಸ್ಥೆಯ ಬಳಿ ದೂರು ದಾಖಲಿಸಬಹುದು.

ಇದನ್ನೂ ಓದಿ: PM Narendra Modi: ಸ್ವಂತ ಸೂರು ಬೇಕೆನ್ನುವವರಿಗೆ ಸರ್ಕಾರದಿಂದ ಹೊಸ ಸ್ಕೀಮ್; ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಬಳಿ ನೀವು ದೂರು ನೀಡುವುದಿದ್ದರೆ ಅದಕ್ಕೆಂದು ಇಪಿಎಫ್ ಗ್ರೀವೆನ್ಸ್ ಪೋರ್ಟಲ್ (epfigms.gov.in/) ಇದೆ. ಇಲ್ಲಿ ನಿಮ್ಮ ಸಮಸ್ಯೆಯನ್ನು ದಾಖಲಿಸಿದರೆ ಇಪಿಎಫ್​ಒ ಸಂಸ್ಥೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ.

ಕಂಪನಿ ಕಡೆಯಿಂದ ಹಣ ವರ್ಗಾವಣೆ ಆಗದೇ ಇದ್ದು, ಅಥವಾ ಸಾಫ್ಟ್​ವೇರ್ ಪರಿಷ್ಕರಣೆ ಕಾರಣ ಹಣ ಕ್ರೆಡಿಟ್ ಆಗದೇ ಇದ್ದು ಇಪಿಎಫ್ ಖಾತೆಗೆ ಹಣ ಜಮೆ ಆಗುವುದು ವಿಳಂಬವಾದರೆ ಚಿಂಪ ಪಡಬೇಕಿಲ್ಲ. ಸರ್ಕಾರ ಅಥವಾ ಇಪಿಎಫ್​ಒ ಸಂಸ್ಥೆಯಿಂದ ಬಡ್ಡಿ ಹಣ ವರ್ಷಕ್ಕೊಮ್ಮೆ ಎಲ್ಲಾ ಹಣಕ್ಕೂ ಸೇರಿಸಿ ತುಂಬಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್