AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

Sarvam AI, the Bengaluru based startup and its new products: ಭಾರತದ ಅತಿದೊಡ್ಡ ಎಐ ಸ್ಟಾರ್ಟಪ್ ಎನಿಸಿದ ಸರ್ವಮ್ ಎಐ ಇತ್ತೀಚೆಗೆ ಎರಡು ಹೊಸ ಮಾಡಲ್​ಗಳನ್ನು ಪರಿಚಯಿಸಿದೆ. ಭಾರತೀಯ ಭಾಷೆಗಳಲ್ಲಿ ಅದು ರೂಪಿಸಿರುವ ಡಾಕ್ಯುಮೆಂಟೇಶನ್ ಮತ್ತು ಟೆಕ್ಸ್ಟ್ ಟು ಸ್ಪೀಚ್ ಸೇವೆಯ ಟೂಲ್​ಗಳು ಗಮನ ಸೆಳೆಯುತ್ತಿವೆ. ಅಪ್ಪಟ ಭಾರತೀಯರ ಶೈಲಿಯಲ್ಲಿ ಮಾತುಗಾರಿಕೆಯನ್ನು ಇದರಲ್ಲಿ ಕಾಣಬಹುದು.

ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?
ಸರ್ವಮ್ ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 10, 2026 | 1:18 PM

Share

ಬೆಂಗಳೂರು, ಫೆಬ್ರುವರಿ 10: ಭಾರತೀಯ ಭಾಷೆಗಳಲ್ಲಿ ಎಐ ಸೇವೆ ಒದಗಿಸಬೇಕು ಮತ್ತು ಜಾಗತಿಕ ಎಐ ಮಾಡಲ್​ಗಳಿಗೆ ಯಾವುದರಲ್ಲೂ ಕಡಿಮೆ ಇರಬಾರದು, ಎನ್ನುವ ಸರ್ಕಾರದ ಆಶಯದಂತೆ ಸರ್ವಮ್ ಎಐ (Sarvam AI) ರೂಪುಗೊಳ್ಳುತ್ತಿದೆ. 2023ರಲ್ಲಿ ಶುರುವಾದ ಸರ್ವಮ್ ಎಐ ತನ್ನ ವಿವಿಧ ಲ್ಯಾಂಗ್ವೇಜ್ ಸೇವೆಗಳಿಂದ ಗಮನ ಸೆಳೆಯತೊಡಗಿದೆ. ವರ್ಷದ ಹಿಂದೆ ಎಐ ಮಾಡಲ್​ಗಳನ್ನು ಬಿಡುಗಡೆ ಮಾಡಿದ್ದ ಸರ್ವಮ್ ಇದೀಗ ಎರಡು ಹೊಸ ಪ್ರಾಡಕ್ಟ್ಸ್ ಲಾಂಚ್ ಮಾಡಿದೆ. ಸರ್ವಮ್ ವಿಷನ್ ಮತ್ತು ಬುಲ್​ಬುಲ್ ವಿ3 ಮಾಡಲ್​ಗಳು ಬಿಡುಗಡೆ ಆಗಿವೆ.

ಈ ಎರಡೂ ಮಾಡಲ್​ಗಳು ಚ್ಯಾಟ್​ಜಿಪಿಟಿ ಮತ್ತು ಜೆಮಿನಿಯ ಅಡ್ವಾನ್ಸ್ಡ್ ವರ್ಷನ್​ಗಳಿಗೆ ಪೈಪೋಟಿ ನೀಡುವಷ್ಟು ಉತ್ತಮ ಪ್ರದರ್ಶನ ತೋರುತ್ತಿವೆ. ಸರ್ವಮ್ ವಿಷನ್ ಮಾಡಲ್ ಭಾರತೀಯ ಭಾಷೆಗಳ ಡಾಕ್ಯುಮೆಂಟ್​ಗಳನ್ನು ಸಂಸ್ಕರಿಸಬಲ್ಲುದು. ಬುಲ್​ಬುಲ್ ವಿ3 ಮಾಡಲ್ ಪಠ್ಯವನ್ನು ಮಾತಿಗೆ ಪರಿವರ್ತಿಸಬಲ್ಲುದು. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಇದರ ಸೇವೆ ಇದೆ. ಇದರ ಕನ್ನಡ ಸೇವೆ ಪರಿಶೀಲಿಸಿದಾಗ, ಅಪ್ಪಟ ಕನ್ನಡಿಗರ ಶೈಲಿಯಲ್ಲಿ ಓದಿದ ರೀತಿ ಭಾಸವಾಗಿದ್ದು ಹೌದು. ಈ ವಿಚಾರದಲ್ಲಿ ಚ್ಯಾಟ್​ಜಿಟಿಪಿ, ಗೂಗಲ್ ಜೆಮಿನಿ, ಡೀಪ್​ಸೀಕ್ ಇತ್ಯಾದಿ ಯಾವ ಮಾಡಲ್​ಗಳು ಸಾಟಿ ಇಲ್ಲ ಎನ್ನಲಾಗತ್ತಿದೆ.

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಸರ್ವಮ್ ಎಐ ಹಿಂದಿದ್ದಾರೆ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್

ಐಐಟಿ ಎಂಜಿನಿಯರುಗಳಾದ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಸರ್ವಮ್ ಎಐ ಅನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಇದರ ಕಚೇರಿ ಇರುವುದು. ಐಐಟಿ ಡೆಲ್ಲಿಯಲ್ಲಿ ಬಿಟೆಕ್, ಅಮೆರಿಕದ ಕಾರ್ನೇಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡಿದ್ದಾರೆ.

ವಿವೇಕ್ ರಾಘವನ್ ಅವರು ಆಧಾರ್ ಪ್ರಾಜೆಕ್ಟ್​ನಲ್ಲೂ ಭಾಗಿಯಾಗಿದ್ದಾರೆ. 2010ರಲ್ಲಿ ಆಧಾರ್ ಪ್ರೋಗ್ರಾಮ್​ನಲ್ಲಿ ಚೀಫ್ ಬಯೋಮೆಟ್ರಿಕ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ್ದಾರೆ. ಆಧಾರ್​ನ ಬಯೋಮೆಟ್ರಿಕ್ ಸಿಸ್ಟಂಗಳನ್ನು ಸಮರ್ಪಕವಾಗಿ ರೂಪಿಸುವುದರ ಹಿಂದೆ ಅವರ ಶ್ರಮ ಇದೆ.

ಇದನ್ನೂ ಓದಿ: ಹೊಸ ಇಪಿಎಫ್​ಒ ಆ್ಯಪ್​ನಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾಗೆ ಅವಕಾಶ?

ಪ್ರತ್ಯುಶ್ ಕುಮಾರ್ ಬಗ್ಗೆ…

2014ರಲ್ಲಿ ಪಿಎಚ್​​ಡಿ ಮಾಡಿರುವ ಪ್ರತ್ಯುಶ್ ಕುಮಾರ್ ಅವರು ಐಬಿಎಂನಲ್ಲಿ ಕೆಲಸ ಮಾಡಿದ್ದಾರೆ. ಒನ್ ಫೋರ್ತ್ ಲ್ಯಾಬ್ಸ್, ಎಐ4ಭಾರತ್ ಕಂಪನಿಗಳ ಸಹ-ಸಂಸ್ಥಾಪಕರಾಗಿದ್ದಾರೆ. ಆನ್ಲೈನ್ ಶಿಕ್ಷಣ ಒದಗಿಸುವ ಪಧ್​ಎಐ ಅನ್ನೂ ಆರಂಭಿಸಿದ ಅನುಭವ ಅವರಿಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್