AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wagon Manufacturing: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ

Titagarh Rail systems contract from Defence Ministry: ಪಶ್ಚಿಮ ಬಂಗಾಳ ಮೂಲದ ತೀತಾಗಡ್ ರೈಲ್ ಸಿಸ್ಟಮ್ಸ್ ಸಂಸ್ಥೆ 250 ರೈಲ್ ವ್ಯಾಗನ್​ಗಳನ್ನು ತಯಾರಿಸಿಕೊಡಲು 173 ಕೋಟಿ ರೂ ಮೊತ್ತದ ಗುತ್ತಿಗೆ ಪಡೆದುಕೊಂಡಿದೆ. ಕೇಂದ್ರ ರಕ್ಷಣಾ ಸಚಿವಾಲಯದೊಂದಿಗೆ ಮಾಡಿಕೊಳ್ಳಲಾಗಿರುವ ಈ ಒಪ್ಪಂದದ ಪ್ರಕಾರ 36 ತಿಂಗಳಲ್ಲಿ ಈ 250 ವ್ಯಾಗನ್​ಗಳನ್ನು ಸರಬರಾಜು ಮಾಡಬೇಕು. ಕಳೆದ ತಿಂಗಳು (ಜನರಿ) ದೆಹಲಿಯ ಆಂಬರ್ ಕಂಪನಿ ಜೊತೆ ಕೈ ಜೋಡಿಸಿರುವ ತೀತಾಗಡ್, ರೈಲ್ವೆ ಸಬ್​ಸಿಸ್ಟಂ ಮತ್ತು ಕಾಂಪೊನೆಂಟ್​ಗಳನ್ನು ಜಂಟಿಯಾಗಿ ತಯಾರಿಸುತ್ತಿದೆ.

Wagon Manufacturing: ವಿಶೇಷ ವ್ಯಾಗನ್ ಬೋಗಿಗಳ ತಯಾರಿಕೆಗೆ ತೀತಾಗಡ್ ರೈಲ್ ಜೊತೆ ರಕ್ಷಣಾ ಸಚಿವಾಲಯದ ಒಪ್ಪಂದ
ತೀತಾಗಡ್ ರೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2024 | 3:39 PM

Share

ನವದೆಹಲಿ, ಫೆಬ್ರುವರಿ 18: ಭಾರತದ ಅತಿದೊಡ್ಡ ಖಾಸಗಿ ವಲಯದ ರೈಲ್ವೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿರುವ ತೀತಾಗಡ್ ರೈಲ್ ಸಿಸ್ಟಮ್ಸ್​ಗೆ (Titagarh Rail Systems Ltd) ಈಗ ರಕ್ಷಣಾ ಸಚಿವಾಲಯದ ಒಪ್ಪಂದ ಸಿಕ್ಕಿದೆ. 250 ವಿಶೇಷ ವ್ಯಾಗನ್ ಬೋಗಿಗಳನ್ನು ತಯಾರಿಸಿ ಕೊಡಲು ತೀತಾಗಡ್ 170 ಕೋಟಿ ರೂ ಮೊತ್ತದ ಈ ಒಪ್ಪಂದ ಪಡೆದಿದೆ. 36 ತಿಂಗಳ ಒಳಗೆ ಈ ವ್ಯಾಗನ್​ಗಳನ್ನು ತಯಾರಿಸಿ ಕೊಡಬೇಕೆಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಫೆಬ್ರುವರಿ 17, ಶನಿವಾರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 12 ತಿಂಗಳ ಬಳಿಕ ಒಪ್ಪಂದ ಚಾಲನೆಗೊಳ್ಳಲಿದೆ. ಅದಾಗಿ 36 ತಿಂಗಳೊಳಗೆ ವ್ಯಾಗನ್ ತಯಾರಿಕೆ ಪೂರ್ಣಗೊಂಡು, ಎಲ್ಲಾ 250 ಬೋಗಿಗಳನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ.

ತೀತಾಗಡ್ ರೈಲ್ವೆ ಸಿಸ್ಟಮ್ಸ್ ವ್ಯಾಗನ್ ಮತ್ತು ರೈಲು ಬೋಗಿಗಳನ್ನು ತಯಾರಿಸುವ ಕಂಪನಿಯಾಗಿದೆ. ವ್ಯಾಗನ್ ಎಂದರೆ ರೈಲುಗಳಲ್ಲಿ ಸರಕು ಸಾಗಣೆಗೆ ಬಳಸುವ ಬೋಗಿಗಳು. ಪ್ಯಾಸೆಂಜರ್ ವಾಹನಗಳಲ್ಲಿ ಪ್ರಯಾಣಿಕರನ್ನು ಬೋಗಿಗಳಲ್ಲಿ ಸಾಗಿಸಲಾಗುತ್ತದೆ. ಸರಕು ಸಾಗಣೆ ರೈಲುಗಳಲ್ಲಿ ಸರಕುಗಳನ್ನು ಸಾಗಿಸಲು ವ್ಯಾಗನ್ ಬಳಸಲಾಗುತ್ತದೆ.

ಇದನ್ನೂ ಓದಿ: ಮುಂಬೈನಲ್ಲಿ ಅಮಿತಾಭ್ ಬಚ್ಚನ್ ಕಚೇರಿ ಸ್ಥಳ ಬಾಡಿಗೆಗೆ ಪಡೆದ ವಾರ್ನರ್ ಸಂಸ್ಥೆ; ಇದರ ಬಾಡಿಗೆ ದರ ಇತ್ಯಾದಿ ವಿವರ

ಐರೋಪ್ಯ ಮಾರುಕಟ್ಟೆ ಮೇಲೆ ತೀತಾಗಡ್ ಕಣ್ಣು

ಕೋಲ್ಕತಾ ಮೂಲದ ತೀತಾಗಡ್ ರೈಲ್ ಸಿಸ್ಟಮ್ಸ್ ಸಂಸ್ಥೆ ಕೇವಲ ಬೋಗಿ ಮತ್ತು ವ್ಯಾಗನ್​ಗಳ ತಯಾರಿಕೆ ಮಾತ್ರವಲ್ಲ, ರೈಲುಗಳ ಬೇರೆ ಬಿಡಿಭಾಗ ಮತ್ತು ಸಬ್​ಸಿಸ್ಟಮ್​ಗಳ ತಯಾರಿಕೆಗೂ ಇಳಿದಿದೆ. ಇದಕ್ಕಾಗಿ ದೆಹಲಿಯ ಆಂಬರ್ ಗ್ರೂಪ್ ಜೊತೆ ಕೈಜೋಡಿಸಿದೆ. ಈ ಎರಡೂ ಕಂಪನಿಗಳು ಸೇರಿ ಎಸ್​​ಪಿವಿ ವಾಹನಗಳನ್ನು ತಯಾರಿಸಿವೆ. ಇದನ್ನು ಭಾರತ ಮಾತ್ರವಲ್ಲದೆ ಯೂರೋಪಿಯನ್ ಮಾರುಕಟ್ಟೆಗೂ ವಿಸ್ತರಿಸಲು ಬಳಸಲಾಗುತ್ತಿದೆ.

ಮಲ್ಟಿಬ್ಯಾಗರ್ ಆಗಿರುವ ತೀತಾಗಡ್ ರೈಲ್​ನ ಷೇರು

ತೀತಾಗಡ್ ರೈಲ್ ಸಿಸ್ಟಂನ ನಿವ್ಳ ಲಾಭ ಬಹಳಷ್ಟು ಹೆಚ್ಚಾಗಿದೆ. ಅಂತೆಯೇ ಅದರ ಷೇರಿಗೂ ಬಲು ಬೇಡಿಕೆ ಇದೆ. ಕಳೆದ ಒಂದು ವರ್ಷದಿಂದ ಅದರ ಷೇರುಬೆಲೆ ಶೇ. 104.04ರಷ್ಟು ಏರಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 432 ರೂಗೆ ಅದರ ಷೇರು ಬೆಲೆ ಇಳಿದಿದ್ದರೂ ಒಂದು ತಿಂಗಳ ಹಿಂದೆ (ಜನವರಿ) ದಾಖಲೆಯ 1248 ರೂಗೆ ಏರಿತ್ತು. ಈಗ ಅದರ ಷೇರುಬೆಲೆ 953.70 ರೂನಲ್ಲಿದೆ.

ಇದನ್ನೂ ಓದಿ: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ

ಈಗ ಡಿಫೆನ್ಸ್ ಮಿನಿಸ್ಟ್ರಿ ಒಪ್ಪಂದ ಸಿಕ್ಕಿರುವ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾಗುವ ಷೇರುಪೇಟೆ ವಹಿವಾಟಿನಲ್ಲಿ ತೀತಾಗಡ್ ರೈಲ್ ಸಿಸ್ಟಮ್ಸ್​ನ ಷೇರುಬೆಲೆ ಮತ್ತೆ 1,000 ರೂ ಗಡಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ