AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿಗಾಗಿ ದಂಪತಿ ಮಧ್ಯೆ ಗಲಾಟೆ: ಮದ್ವೆಯಾದ ಹತ್ತೇ ತಿಂಗಳಿಗೆ ತಂಗಿ ಗಂಡನನ್ನೇ ಕೊಂದ ಬಾಮೈದ

ಕಾರು ಖರೀದಿಸಲು ಹಣಕಾಸಿನ ವಿಚಾರವಾಗಿ ನಡೆದ ಗಲಾಟೆ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿದೆ. ಅಳಿಯನಿಂದಲೇ ಭಾವನ ಕೊಲೆ ನಡೆದಿರುವಂತಹ ಘಟನೆ ಆಂಧ್ರದ ಇಂದೂಪುರದಲ್ಲಿ ನಡೆದಿದೆ. ಸದ್ಯ ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಳಿಯ ಸೇರಿದಂತೆ ಆತನ ಗ್ಯಾಂಗ್​ ​ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರಿಗಾಗಿ ದಂಪತಿ ಮಧ್ಯೆ ಗಲಾಟೆ: ಮದ್ವೆಯಾದ ಹತ್ತೇ ತಿಂಗಳಿಗೆ ತಂಗಿ ಗಂಡನನ್ನೇ ಕೊಂದ ಬಾಮೈದ
ವಿನಯ್ ಕುಮಾರ್, ರಾಜುImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on: Apr 06, 2026 | 3:14 PM

Share

ಆನೇಕಲ್​, ಏಪ್ರಿಲ್​ 06: ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ (murder) ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ಕೊಲೆ ಮಾಡಲಾಗಿದ್ದು,  ರಾಜು, ವೇಣು, ಶ್ರೇಯಸ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್ ಕುಮಾರ್​, ಕಳೆದ 10 ತಿಂಗಳ ಹಿಂದೆ ಕುಟುಂಬಸ್ತರೇ ನೋಡಿ ಮೇಘನಾ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮದುವೆ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ.

ಕೊಲೆ ಮಾಡಿದ ಬೈಕ್​ ಸಮೇತ ಕಾಲುವೆಗೆ ಎಸೆದ ದುಷ್ಟರು

ಕಳೆದ 15 ದಿನಗಳಿಂದ ಕಾರು ಖರೀದಿ ವಿಚಾರವಾಗಿ ಮೇಘನಾ ಹಾಗೂ ವಿನಯ್ ನಡುವೆ ಗಲಾಟೆ ಶುರುವಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ವಿನಯ್​​ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.

ಇದನ್ನೂ ಓದಿ: ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಇನ್ನು ಬೈಕ್ ಜಿಪಿಆರ್​​ಎಸ್​​ನಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಬೆಳಿಗ್ಗೆ ವಿನಯ್ ಪೊಷಕರಿಗೆ ಮಾಹಿತಿ ನಿಡಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ವಿನಯ್ ಹುಟ್ಟೂರು ಅಪ್ಪೆ ಹಳ್ಳಿ ಅನಂತಪುರ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ವರದಿ: ಮಂಜುನಾಥ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More