AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಗಾಗಿ ಪಾಗಲ್​ ಪ್ರೇಮಿಯಾದ ರೌಡಿ ಶೀಟರ್​, ಒಬ್ಬಳೇ ಸಿಕ್ಕಾಗ ಏನ್​ ಮಾಡ್ದಾ ಗೊತ್ತಾ?

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್​ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ಯುವತಿಗಾಗಿ ಪಾಗಲ್​ ಪ್ರೇಮಿಯಾದ ಅಭಿಷೇಕ್ ಗೌಡ ರಾಜಾಜಿನಗರ ಏರಿಯಾದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್​. ಕಳೆದ ಕೆಲವು ವರ್ಷಗಳಿಂದ ನರ್ಮದಾಳನ್ನ ಡೀಪಾಗಿ ಲವ್​ ಮಾಡ್ತಿದ್ದನಂತೆ. ಆದರೆ ಇತ್ತೀಚೆಗೆ, ಯುವತಿ ತನ್ನ ಸಂಬಂಧಿಕನ ಜೊತೆ ಸಲಿಗೆಯಿಂದ ವರ್ತಿಸುತ್ತಿದ್ದಳಂತೆ. ಇದರಿಂದ ಸಿಟ್ಟಾದ ಅಭಿ ಈ ಬಗ್ಗೆ ಪ್ರಶ್ನಿಸಲು […]

ಯುವತಿಗಾಗಿ ಪಾಗಲ್​ ಪ್ರೇಮಿಯಾದ ರೌಡಿ ಶೀಟರ್​, ಒಬ್ಬಳೇ ಸಿಕ್ಕಾಗ ಏನ್​ ಮಾಡ್ದಾ ಗೊತ್ತಾ?
KUSHAL V
| Edited By: ಸಾಧು ಶ್ರೀನಾಥ್​|

Updated on:Jul 14, 2020 | 6:07 PM

Share

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನಿಂದ ದೂರವಾಗ್ತಿದ್ದಾಳೆ ಅಂತಾ ಸಿಟ್ಟಾದ ರೌಡಿ ಶೀಟರ್​ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಿರಿನಗರ ಬಳಿಯಿರುವ ದ್ವಾರಕಾನಗರದಲ್ಲಿ ನಡೆದಿದೆ. 19 ವರ್ಷದ ಯುವತಿ ನರ್ಮದಾ ಮೃತ ದುರ್ದೈವಿ. ಯುವತಿಗಾಗಿ ಪಾಗಲ್​ ಪ್ರೇಮಿಯಾದ ಅಭಿಷೇಕ್ ಗೌಡ ರಾಜಾಜಿನಗರ ಏರಿಯಾದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್​.

ಕಳೆದ ಕೆಲವು ವರ್ಷಗಳಿಂದ ನರ್ಮದಾಳನ್ನ ಡೀಪಾಗಿ ಲವ್​ ಮಾಡ್ತಿದ್ದನಂತೆ. ಆದರೆ ಇತ್ತೀಚೆಗೆ, ಯುವತಿ ತನ್ನ ಸಂಬಂಧಿಕನ ಜೊತೆ ಸಲಿಗೆಯಿಂದ ವರ್ತಿಸುತ್ತಿದ್ದಳಂತೆ. ಇದರಿಂದ ಸಿಟ್ಟಾದ ಅಭಿ ಈ ಬಗ್ಗೆ ಪ್ರಶ್ನಿಸಲು ನಿನ್ನೆ ನರ್ಮದಾಳನ್ನು ತನ್ನ ರೂಂಗೆ ಕರೆದೊಯ್ದಿದ್ದ. ಈ ವಿಚಾರವಾಗಿ ಅವಳ ಜೊತೆ ಜಗಳ ಆರಂಭಿಸಿದ್ದ ಆರೋಪಿ, ನಂತರ ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಚಾಕುವಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತು ಹಾಗೂ ಹೊಟ್ಟೆಗೆ ಇರಿದು ಕೊಲೆಗೈದಿದ್ದಾನೆ. ಕೃತ್ಯವೆಸಗಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಪೊಲೀಸರು ಆರೋಪಿಯನ್ನ ಹಿಡಿಯಲು ಬಲೆ ಬೀಸಿದರು. ಕೊನೆಗೆ ರಾಜಾಜಿನಗರದ ಪೊಲೀಸರ ನೆರವಿನಿಂದ ಅಭಿಷೇಕ್ ಗೌಡನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published On - 6:01 pm, Tue, 14 July 20

Follow Us
KUSHAL V
KUSHAL V
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್