ಹೆಂಡತಿ ಮುಂದೆ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ; ಮನೆಯಲ್ಲೇ ಸುಟ್ಟು ಕರಕಲಾದ ಗಂಡ!
ಪ್ರಿಯಕರನ ಕಾಟ ತಾಳಲಾರದೆ ಆತನ ಹೆಂಡತಿ ಜೊತೆಗೇ ಸೇರಿ ತನ್ನ ಪ್ರಿಯಕರನನ್ನು ಯುವತಿಯೊಬ್ಬಳು ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯ ಪತ್ನಿ ಮತ್ತು ಪ್ರೇಯಸಿ ಒಟ್ಟಾಗಿ ಇಟಾವಾದ ರಾಘವೇಂದ್ರ ಯಾದವ್ ಎಂಬಾತನನ್ನು ಕೊಲೆ ಮಾಡಿ, ಮನೆಯಲ್ಲೇ ಸುಟ್ಟು ಹಾಕಿದ್ದಾರೆ. ಅಷ್ಟಕ್ಕೂ ಇಬ್ಬರೂ ಸೇರಿ ಆತನನ್ನು ಕೊಲೆ ಮಾಡಲು ಕಾರಣವೇನೆಂಬುದರ ಮಾಹಿತಿ ಇಲ್ಲಿದೆ.
ಇಟಾವಾ: ಉತ್ತರ ಪ್ರದೇಶದ ಇಟಾವಾದ ರಾಘವೇಂದ್ರ ಯಾದವ್ ಎಂಬಾತನನ್ನು ಆತನ ಪತ್ನಿ ಮತ್ತು ಪ್ರೇಯಸಿ ಸೇರಿ ಕೊಂದಿದ್ದಾರೆ. ಇಬ್ಬರೂ ಒಟ್ಟಾಗಿ ಪಿತೂರಿ ನಡೆಸಿ ಆತನ ಕತೆ ಮುಗಿಸಿದ್ದಾರೆ. ಉತ್ತರ ಪ್ರದೇಶದ ಇಟಾವಾದ ರಾಘವೇಂದ್ರ ಯಾದವ್ ಈಗಾಗಲೇ ಮದುವೆಯಾಗಿದ್ದ. ಆದರೆ ಆತ ಇನ್ನೊಬ್ಬ ಹುಡುಗಿಯ ಜೊತೆ ಸಂಬಂಧವನ್ನು ಬೆಳೆಸಿಕೊಂಡಿದ್ದ. ರಾಘವೇಂದ್ರ ತನ್ನ ಪ್ರೇಯಸಿಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದ ಮತ್ತು ಆ ಫೋಟೋಗಳನ್ನು ಇಟ್ಟುಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದ. ಮತ್ತೊಂದೆಡೆ, ಆತ ಮನೆಯಲ್ಲಿ ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದ. ಆದರೆ ಈ ಎರಡೂ ಕೃತ್ಯಗಳು ತನ್ನ ಸಾವಿಗೆ ಕಾರಣವಾಗುತ್ತವೆ ಎಂದು ಅವನಿಗೆ ತಿಳಿದಿರಲಿಲ್ಲ.
ಈ ರಾಘವೇಂದ್ರ ಯಾದವ್ ಮೃತದೇಹವು 2 ದಿನಗಳ ಹಿಂದೆ ಇಟಾವಾದ ಹಾಸಿಗೆಯ ಮೇಲೆ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೃತ ರಾಘವೇಂದ್ರ ಯಾದವ್ ಎಂಬಾತ ದೆಹಲಿಯ ಜಿಂದಾಲ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಕೊಲೆ ಎಂದು ತಿಳಿದುಬಂದಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ರಾಘವೇಂದ್ರ ಯಾದವ್ನನ್ನು ಆತನ ಪತ್ನಿ ಮತ್ತು ಪ್ರೇಯಸಿ ಒಟ್ಟಿಗೆ ಕೊಲೆ ಮಾಡಿದ್ದಾರೆ ಎಂಬ ಅಂಶ ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.
ಇದನ್ನೂ ಓದಿ: ಹುಬ್ಬಳ್ಳಿ: ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ
ರಾಘವೇಂದ್ರ ಯಾದವನ ಪತ್ನಿ ಮತ್ತು ಪ್ರೇಯಸಿ ಇಬ್ಬರೂ ಆತನ ವರ್ತನೆಯಿಂದ ಬೇಸತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ತನ್ನ ಪತ್ನಿಯನ್ನು ಹೊಡೆಯುತ್ತಿದ್ದ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಪ್ರೇಯಸಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅಲ್ಲದೆ, ಮನೆಗೆ ಪ್ರೇಯಸಿಯನ್ನು ಕರೆದುಕೊಂಡು ಬಂದು ಹೆಂಡತಿ ಎದುರಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದರಿಂದ ಆತನ ಪ್ರೇಯಸಿ ಮತ್ತು ಹೆಂಡತಿ ಇಬ್ಬರೂ ಬೇಸತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರೂ ಪ್ಲಾನ್ ಮಾಡಿ ರಾಘವೇಂದ್ರನನ್ನು ಕೊಲ್ಲಲು ನಿರ್ಧರಿಸಿದರು.
ರಾಘವೇಂದ್ರ ಯಾದವ್ ತನ್ನ ಮನೆಗೆ ಪ್ರೇಯಸಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಆಕೆಯನ್ನು ಮನೆಗೆ ಕರೆಸಿದ್ದರು. ಆ ಸಮಯದಲ್ಲಿ, ಅವರ ಪತ್ನಿ ಕಿರಣ್ ಮತ್ತು ಗೆಳತಿ ಮೊದಲು ಆತನ ಆಹಾರದಲ್ಲಿ ಮಾದಕ ದ್ರವ್ಯವನ್ನು ಬೆರೆಸಿ ಅವನಿಗೆ ತಿನ್ನಿಸಿದರು. ನಂತರ, ಅವರು ಆತನ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಗಾಯಗೊಳಿಸಿದರು.
ಇದನ್ನೂ ಓದಿ: ಪ್ರೇಯಸಿಯ ಪತಿ, ತಂದೆಯನ್ನು ಕೊಲ್ಲಲು ಸುಪಾರಿ, ಕೊಲೆಯಾದವರೇ ಬೇರೆ
ಇದರ ನಂತರ, ಶಾರ್ಟ್ ಸರ್ಕ್ಯೂಟ್ ಅಪಘಾತವನ್ನು ತೋರಿಸಲು ಅವರು ಹಾಸಿಗೆಯ ಮೇಲಿನ ಹೊದಿಕೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಈ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಮತ್ತು ತನಿಖೆಯಲ್ಲಿ ಇದು ಕೊಲೆ ಎಂದು ಬಹಿರಂಗವಾಗಿದ್ದು, ಪೊಲೀಸ್ ವಿಚಾರಣೆಯ ಸಮಯದಲ್ಲಿ ಆತನ ಪತ್ನಿ ಕಿರಣ್ ಕೊಲೆಯನ್ನು ಒಪ್ಪಿಕೊಂಡರು. ಆದರೆ ಮೃತನ ಪ್ರೇಯಸಿ ಪರಾರಿಯಾಗಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 pm, Tue, 14 January 25