AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಧನೆಗೆ ವಯಸ್ಸಿನ ಹಂಗಿಲ್ಲ: 85ನೇ ವಯಸ್ಸಿನಲ್ಲಿ ಎಂ.ಎ ಪದವಿ ಪಡೆದ ಮಾಜಿ ಸೈನಿಕ ಲಾಲ್ ಚಂದ್!

85ರ ಹರೆಯದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಹರಿಯಾಣದ ಮಾಜಿ ಸೈನಿಕ ಲಾಲ್ ಚಂದ್ ಗೋದಾರರ ಸಾಧನೆ ಅಪೂರ್ವ. ಮೂರು ಯುದ್ಧಗಳಲ್ಲಿ ಭಾಗವಹಿಸಿ, ಕ್ರೀಡಾ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದ ಇವರು, 71ನೇ ವಯಸ್ಸಿನಲ್ಲಿ ಮತ್ತೆ ಓದು ಆರಂಭಿಸಿ, ಈಗ ಪಿಎಚ್‌ಡಿ ಅಥವಾ ಕಾನೂನು ಅಧ್ಯಯನಕ್ಕೆ ಸಿದ್ಧರಾಗಿದ್ದಾರೆ. ಇವರ ಜೀವನವು 'ಕಲಿಯುವ ಮನಸ್ಸಿದ್ದರೆ ವಯಸ್ಸು ಅಡ್ಡಿಯಾಗಲ್ಲ' ಎಂಬುದಕ್ಕೆ ಪ್ರೇರಣೆ.

ಸಾಧನೆಗೆ ವಯಸ್ಸಿನ ಹಂಗಿಲ್ಲ: 85ನೇ ವಯಸ್ಸಿನಲ್ಲಿ ಎಂ.ಎ ಪದವಿ ಪಡೆದ ಮಾಜಿ ಸೈನಿಕ ಲಾಲ್ ಚಂದ್!
ಮಾಜಿ ಸೈನಿಕ ಲಾಲ್ ಚಂದ್ ಗೋದಾರ
ಅಕ್ಷತಾ ವರ್ಕಾಡಿ
|

Updated on: Sep 20, 2026 | 1:51 PM

Share

ಸಾಧನೆಗೆ ವಯಸ್ಸು ಕೇವಲ ಒಂದು ಸಂಖ್ಯೆ, ಸಾಧಿಸುವ ಉತ್ಸಾಹವಿದ್ದರೆ ಯಾವುದೇ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಹರಿಯಾಣದ ಸಿರ್ಸಾದ ಮಾಜಿ ಸೈನಿಕ ಲಾಲ್ ಚಂದ್ ಗೋದಾರ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. 85ನೇ ವಯಸ್ಸಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (IGNOU) ಎಂ.ಎ ಪದವಿ ಪಡೆದಿರುವ ಇವರು, ಒಟ್ಟು 1200 ಅಂಕಗಳಲ್ಲಿ 965 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

71ನೇ ವಯಸ್ಸಿನಲ್ಲಿ ಪುನಃ ಶೈಕ್ಷಣಿಕ ಪಯಣ ಆರಂಭ:

ಚಿಕ್ಕಂದಿನಿಂದಲೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಕಂಡಿದ್ದ ಗೋದಾರ ಅವರಿಗೆ ಕುಟುಂಬದ ಜವಾಬ್ದಾರಿಗಳು ಮತ್ತು ಸೇನಾ ಸೇವೆಯ ಕಾರಣದಿಂದ ಓದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ನಿವೃತ್ತಿಯ ನಂತರ, ತಮ್ಮ 71ನೇ ವಯಸ್ಸಿನಲ್ಲಿ ಧೈರ್ಯ ಮಾಡಿ ಮತ್ತೆ ಪುಸ್ತಕಗಳನ್ನು ಕೈಗೆತ್ತಿಕೊಂಡ ಅವರು, ತಮ್ಮ 76ನೇ ವಯಸ್ಸಿನಲ್ಲಿ ಪದವಿ (ಬ್ಯಾಚುಲರ್ ಡಿಗ್ರಿ) ಪೂರ್ಣಗೊಳಿಸಿದರು. ಅವರ ಈ ಶೈಕ್ಷಣಿಕ ಸಾಧನೆಗೆ ಮೊಮ್ಮಕ್ಕಳು ಪೂರ್ಣ ಬೆಂಬಲ ನೀಡಿದ್ದರು. ಶಿಕ್ಷಣವು ಕೇವಲ ಪದವಿಗಾಗಿ ಅಲ್ಲ, ಅದು ಮನುಷ್ಯನ ಜ್ಞಾನ ಮತ್ತು ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಎಂಬುದು ಅವರ ದೃಢ ನಂಬಿಕೆ.

ಭಾರತೀಯ ಸೇನೆಯಲ್ಲಿ 3 ಪ್ರಮುಖ ಯುದ್ಧಗಳ ಸಾಹಸ:

ಲಾಲ್ ಚಂದ್ ಗೋದಾರ ಅವರು ಭಾರತೀಯ ಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ದೇಶಪ್ರೇಮಿ. 1962ರ ಭಾರತ-ಚೀನಾ ಯುದ್ಧ, 1965 ಹಾಗೂ 1971ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ, 1972ರಿಂದ 2002ರವರೆಗೆ ಹರಿಯಾಣ ಸಾರಿಗೆ ಇಲಾಖೆಯಲ್ಲಿ ಯಾರ್ಡ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ಕ್ರೀಡಾರಂಗದಲ್ಲೂ 200ಕ್ಕೂ ಹೆಚ್ಚು ಪದಕಗಳ ದಾಖಲೆ:

ಕೇವಲ ಶಿಕ್ಷಣ ಮತ್ತು ಸೇನಾ ಸೇವೆಯಷ್ಟೇ ಅಲ್ಲದೆ, ನಿವೃತ್ತಿಯ ನಂತರ ಕ್ರೀಡಾರಂಗದಲ್ಲೂ ಗೋದಾರ ಅವರು ಸಕ್ರಿಯರಾಗಿದ್ದರು. ಮಾಸ್ಟರ್ಸ್ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 200ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು 150 ಚಿನ್ನ, 30 ಬೆಳ್ಳಿ ಮತ್ತು 20 ಕಂಚಿನ ಪದಕಗಳು ಸೇರಿವೆ.

ಮುಂದಿನ ಗುರಿ ಪಿಎಚ್‌ಡಿ ಅಥವಾ ಕಾನೂನು ಅಧ್ಯಯನ:

85ನೇ ವಯಸ್ಸಿನಲ್ಲಿ ಎಂ.ಎ ಮುಗಿಸಿದರೂ ಅವರ ಕಲಿಯುವ ಹಸಿವು ಇಂಗಿಲ್ಲ. ಈಗ ಅವರು ಪಿಎಚ್‌ಡಿ (Ph.D) ಅಥವಾ ಕಾನೂನು (LL.B) ಪದವಿ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಕಲಿಯುವ ಮನಸ್ಸಿದ್ದರೆ ವಯಸ್ಸು ಎಂದಿಗೂ ತಡೆಯಾಗುವುದಿಲ್ಲ ಎಂಬುದಕ್ಕೆ ಲಾಲ್ ಚಂದ್ ಗೋದಾರ ಅವರ ಜೀವನವೇ ದೊಡ್ಡ ಪ್ರೇರಣೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?