AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hiriyuru Election Results: ಹಿರಿಯೂರು ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾ ಹಣಿ

Hiriyur Assembly Election Result 2023 Live Counting Updates: ಹಿಡಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ನಡುವೆ ನೇರ ಹಣಾ ಹಣಿ ಏರ್ಪಟ್ಟಿದೆ.

Hiriyuru Election Results: ಹಿರಿಯೂರು ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾ ಹಣಿ
ಹಿರಿಯೂರು ವಿಧಾನಸಭೆ ಚುನಾವಣೆ ಫಲಿತಾಂಶ
Rakesh Nayak Manchi
Rakesh Nayak Manchi|

Updated on: May 13, 2023 | 3:02 AM

Share

Hiriyuru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಈ ಪೈಕಿ ಹಿರಿಯೂರು ಕ್ಷೇತ್ರ ಕೂಡ ಒಂದು. 2018ರಲ್ಲಿ ಮೊದಲಬಾರಿ ಬಿಜೆಪಿಯಿಂದ ಸ್ಪರ್ಧಿಸಿ 12,857 ಮತಗಳ ಅಂತರದಿಂದ ಗೆದ್ದಿರುವ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಕಣದಲ್ಲಿದ್ದು, ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ನಿಂದ ಡಿ ಸುಧಾಕರ್, ಜೆಡಿಎಸ್​ನಿಂದ ರವೀಂದ್ರಪ್ಪ ಹಾಗೂ ಆಮ್ ಆದ್ಮಿ ಪಕ್ಷದಿಂದ ಕೆಟಿ ತಿಪ್ಪೇಸ್ವಾಮಿ ಕಣದಲ್ಲಿದ್ದಾರೆ.

ಗೊಲ್ಲರು, ಒಕ್ಕಲಿಗರು ಮತ್ತು ಇತರೆ ಪ್ರಮುಖ ಸಮುದಾಯದ ಜನರು ಇಲ್ಲಿ ನಿರ್ಣಾಯಕವಾಗಿದ್ದಾರೆ. ಆದರೆ, 2008ರಲ್ಲಿ ಪಕ್ಕದ ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಚಳ್ಳಕೆರೆ ಕಾಂಗ್ರೆಸ್ ಶಾಸಕರಾಗಿದ್ದ ಡಿ.ಸುಧಾಕರ್ ಹಿರಿಯೂರಿಗೆ ಲಗ್ಗೆಯಿಟ್ಟಿದ್ದರು. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ಗೆದ್ದು ಬಿಜೆಪಿ ಬೆಂಬಲಿಸಿ ಸಚಿವರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು. ಆದರೆ, ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧೆಯೊಡ್ಡಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಅಲ್ಪ ಮತಗಳಿಂದ ಸೋಲುಂಡಿದ್ದರು. ಬಳಿಕ ಕೆಲ ವರ್ಷದಲ್ಲೇ ಎ.ಕೃಷ್ಣಪ್ಪ ವಿಧಿವಶರಾಗಿದ್ದರು.

ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಆಗಿದ್ದ ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ 2018ರಲ್ಲಿ ಹಿರಿಯೂರಿನಿಂದ ಬಿಜೆಪಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಪ್ರಬಲ ಸಮುದಾಯಗಳಾದ ಗೊಲ್ಲ ಮತ್ತು ಒಕ್ಕಲಿಗ ಸಮುದಾಯ ದೂರವಿಟ್ಟು ಜೈನ ಸಮುದಾಯದ ಡಿ.ಸುಧಾಕರ್ ಅವರನ್ನು 2008 ಮತ್ತು 2013ರಲ್ಲಿ ಗೆಲ್ಲಿಸಿದ್ದ ಜನ 2018ರಲ್ಲಿ ಗೊಲ್ಲ ಸಮುದಾಯದ ಪೂರ್ಣಿಮಾ ಗೆಲ್ಲಿಸಿದ್ದರು. ಇದೀಗ ಪೂರ್ಣಿಮಾ ಮತ್ತೊಮ್ಮೆ ಕಮಲ ಪಕ್ಷದಿಂದ ಕಣಕ್ಕಳಿದಿದ್ದಾರೆ.

ಮಾಜಿ ಸಚಿವ ಡಿ.ಸುಧಾಕರ್ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದು, ಟಿಕೆಟ್ ಗೆಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಹಾಗೂ ಕಾಂಗ್ರೆಸ್ ಅಬ್ಯರ್ಥಿ ಡಿ.ಸುಧಾಕರ್ ನಡುವೆ ನೇರ ಹಣಾ ಹಣಿ ಏರ್ಪಟ್ಟಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ