AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ; ವಿವಾದ ಸೃಷ್ಟಿಸಿದ ವಿಡಿಯೊ

"ಬಿಜೆಪಿ ಚುನಾವಣಾ ಆಯೋಗವನ್ನು ಮಗುವಿನ ಆಟದ ವಸ್ತುವನ್ನಾಗಿ ಮಾಡಿದೆ. ಭೋಪಾಲ್‌ನಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ವಿನಯ್ ಮೆಹರ್ ಅವರು ತಮ್ಮ ಅಪ್ರಾಪ್ತ ಮಗನ ಮೂಲಕ ಮತ ಹಾಕಿದರು. ವಿನಯ್ ಮೆಹರ್ ಅವರು ಮತದಾನ ಮಾಡಿದ ಸಮಯದ ವಿಡಿಯೊವನ್ನು ಸಹ ಮಾಡಿದ್ದಾರೆ. ವಿನಯ್ ಮೆಹರ್ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ." ಇದಕ್ಕೆ ಯಾವುದಾದರೂ ಯಾವುದಾದರೂ ಕ್ರಮ ತೆಗೊಂಡಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ; ವಿವಾದ ಸೃಷ್ಟಿಸಿದ ವಿಡಿಯೊ
ಬಾಲಕ ಮತದಾನ ಮಾಡುತ್ತಿರುವುದು
ರಶ್ಮಿ ಕಲ್ಲಕಟ್ಟ
|

Updated on: May 09, 2024 | 8:01 PM

Share

ದೆಹಲಿ ಮೇ 08: ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ ಬೆರಾಸಿಯಾದಲ್ಲಿ ಲೋಕಸಭೆ ಚುನಾವಣೆ (Lok Sabha Election) ವೇಳೆ ಅಪ್ರಾಪ್ತ ಬಾಲಕನೊಬ್ಬ ಮತ ಚಲಾಯಿಸುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು ವಿವಾದ ಸೃಷ್ಟಿಸಿದೆ. ವರದಿಗಳ ಪ್ರಕಾರ, ಈ ಬಾಲಕ ಬಿಜೆಪಿಯ (BJP) ಪಂಚಾಯತ್ ನಾಯಕ ವಿನಯ್ ಮೆಹರ್ ಅವರ ಪುತ್ರನಾಗಿದ್ದು, ಮಂಗಳವಾರ ಮತದಾನದ ವೇಳೆ ತನ್ನ ತಂದೆಯ ಪರವಾಗಿ ಮತ ಚಲಾಯಿಸಿದ್ದಾನೆ. ಈತ ಇವಿಎಂ ಬಟನ್ ಒತ್ತಿ ಮತ ಚಲಾವಣೆ ಮಾಡುತ್ತಿರುವುದುನ್ನು ಆತನ ಅಪ್ಪನೇ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

4 ಸೆಕೆಂಡುಗಳ ವಿಡಿಯೊವನ್ನು ಬಿಜೆಪಿ ನಾಯಕರ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರರು ಈ ವಿಷಯವನ್ನು ಟೀಕಿಸಿ ಮುಂದೆ ಬಂದಿದ್ದಾರೆ. ಬೂತ್‌ನಲ್ಲಿರುವ ಬಾಲಕ ಮತ್ತು ತಂದೆ ಕಮಲಕ್ಕೆ ಅಥವಾ ಬಿಜೆಪಿಯ ಚಿಹ್ನೆಗೆ ಲಿಂಕ್ ಮಾಡಲಾದ ಇವಿಎಂನಲ್ಲಿ ಬಟನ್ ಅನ್ನು ಒತ್ತುತ್ತಿರುವುದು ವಿಡಿಯೊದಲ್ಲಿದೆ. ಕ್ಯಾಮರಾ ನಂತರ VVPAT ಅಥವಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಮೆಷಿನ್ ಮೂಲಕ ಮತವನ್ನು ನೋಂದಾಯಿಸಲಾಗಿದೆ ಎಂದು ತೋರಿಸಲು ಪ್ಯಾನ್ ಮಾಡುತ್ತದೆ, ಅದರ ನಂತರ ಮೆಹರ್ ಅವರು “ಸರಿ. ಅಷ್ಟು ಸಾಕು” ಎಂದು ಹೇಳುವುದು ಕೇಳಿಸುತ್ತದೆ.

ಬಾಲಕ ಮತದಾನ ಮಾಡುತ್ತಿರುವ ವಿಡಿಯೊ

ಅಂದಹಾಗೆ ಮೊಬೈಲ್ ಫೋನ್ ಅನ್ನು ಮತಗಟ್ಟೆಗೆ ಹೇಗೆ ಅನುಮತಿಸಲಾಯಿತು? ಬಾಲಕನಿಗೆ ತನ್ನ ತಂದೆಯೊಂದಿಗೆ ಮತಗಟ್ಟೆಗೆ ಹೋಗಲು ಹೇಗೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆಯನ್ನು ಈ ವಿಡಿಯೊ ಹುಟ್ಟುಹಾಕಿದೆ.

“ಬಿಜೆಪಿ ಚುನಾವಣಾ ಆಯೋಗವನ್ನು ಮಗುವಿನ ಆಟದ ವಸ್ತುವನ್ನಾಗಿ ಮಾಡಿದೆ. ಭೋಪಾಲ್‌ನಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ವಿನಯ್ ಮೆಹರ್ ಅವರು ತಮ್ಮ ಅಪ್ರಾಪ್ತ ಮಗನ ಮೂಲಕ ಮತ ಹಾಕಿದರು. ವಿನಯ್ ಮೆಹರ್ ಅವರು ಮತದಾನ ಮಾಡಿದ ಸಮಯದ ವಿಡಿಯೊವನ್ನು ಸಹ ಮಾಡಿದ್ದಾರೆ. ವಿನಯ್ ಮೆಹರ್ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.” ಇದಕ್ಕೆ ಯಾವುದಾದರೂ ಯಾವುದಾದರೂ ಕ್ರಮ ತೆಗೊಂಡಿದ್ದೀರಾ ?” ಎಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಕಚೇರಿಯಲ ಮಾಧ್ಯಮ ಸಲಹೆಗಾರ ಎಂದು ಎಕ್ಸ್ ಹ್ಯಾಂಡಲ್ ವಿವರಿಸಿರುವ ಪಿಯೂಷ್ ಬಾಬೆಲೆ ಅವರು ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊಗೆ ಚುನಾವಣಾ ಆಯೋಗ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಡಿಯೊವನ್ನು ಜಿಲ್ಲಾ ಅಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ನೋಡಿದ್ದು ತನಿಖೆಗೆ ಆದೇಶಿಸಿದ್ದಾರೆ. ಮತಗಟ್ಟೆ ಅಧಿಕಾರಿ ಸಂದೀಪ್ ಸೈನಿ ಅವರನ್ನು ಅಮಾನತುಗೊಳಿಸಲಾಗಿದ್ದು, ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಘಟನೆ ನಡೆದ ಬೆರಾಸಿಯಾ ಅಸೆಂಬ್ಲಿ ವಿಭಾಗವು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇದು ಭೋಪಾಲ್ ಲೋಕಸಭಾ ಸ್ಥಾನವನ್ನು ಒಳಗೊಂಡಿರುವ ಎಂಟು ಕ್ಷೇತ್ರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Amit Shah: ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು; ಅಮಿತ್ ಶಾ ಘೋಷಣೆ

ಬೆರಾಸಿಯಾ ಕ್ಷೇತ್ರವನ್ನು ಬಿಜೆಪಿಯ ವಿಷ್ಣು ಖತ್ರೆ ಹೊಂದಿದ್ದಾರೆ, ಆದರೆ ಲೋಕಸಭೆ ಸ್ಥಾನವನ್ನು ಪಕ್ಷದ ಪ್ರಜ್ಞಾ ಠಾಕೂರ್ ಹೊಂದಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಅವರನ್ನು ಸೋಲಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ