Air India Recruitment 2023: ಏರ್ ಇಂಡಿಯಾದಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ; ನೋಡಿ ವಿವರ
Flight Jobs For PUC Passed Out Candidates: ಏರ್ ಇಂಡಿಯಾ ವಿಮಾನಗಳ ಕ್ಯಾಬಿನ್ ಕ್ರಿವ್ನಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕನಿಷ್ಠ ಪಿಯುಸಿ ಪಾಸಾಗಿರಬೇಕು. ಗರಿಷ್ಠ ವಯಸ್ಸು 35 ವರ್ಷ ಇದೆ. 11 ನಗರಗಳಲ್ಲಿ ಮಾರ್ಚ್ 3ರಿಂದ 24ರವರೆಗೆ ನೇರ ಸಂದರ್ಶನ ಇದೆ.
ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಯ (ಪರಿಚಾರಿಕೆಯರು – Cabin Crew) ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂಬೈ, ದೆಹಲಿ, ಚೆನ್ನೈ, ಜೈಪುರ್, ಹೈದರಾಬಾದ್, ಕೋಲ್ಕತಾ, ಗುವಾಹಟಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋ ನಗರಗಳಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತಿದೆ. ಈ ವಿಚಾರವನ್ನು ಏರ್ ಇಂಡಿಯಾ ಟ್ವಿಟ್ಟರ್ನಲ್ಲಿ ಪ್ರಕಟಿಸಿದೆ. ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಮಾರ್ಚ್ 3ರಿಂದ 24ರವರೆಗೆ ನಿರ್ದಿಷ್ಟ ದಿನಗಳಂದು ಸಂದರ್ಶನಗಳಿವೆ. ಕೆಲಸಕ್ಕೆ ಬೇಕಾದ ಅರ್ಹತೆ, ಸಂದರ್ಶನ ಸ್ಥಳ, ಸಮಯ ಇತ್ಯಾದಿ ವಿವರ ಇಲ್ಲಿ ಮುಂದಿವೆ.
ಏರ್ ಇಂಡಿಯಾದಲ್ಲಿ ಉದ್ಯೋಗಾವಕಾಶ:
ಒಟ್ಟು ಹುದ್ದೆಗಳು: ನಿರ್ದಿಷ್ಟಪಡಿಸಿಲ್ಲ
ಸಂಬಳ: ನಿರ್ದಿಷ್ಟಪಡಿಸಿಲ್ಲ
ಉದ್ಯೋಗಸ್ಥಳ: ನಿರ್ದಿಷ್ಟಪಡಿಸಿಲ್ಲ
ಸಂದರ್ಶನ ಸ್ಥಳಗಳು: ದೆಹಲಿ, ಮುಂಬೈ, ಜೈಪುರ್, ಚೆನ್ನೈ, ಹೈದರಾಬಾದ್, ಕೋಲ್ಕತಾ, ಗುವಾಹಟಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋ
ಅರ್ಹತೆ:
- ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ 12ನೇ ತರಗತಿಯಾದರೂ ಪಾಸಾಗಿರಬೇಕು.
- ಮಹಿಳಾ ಅಭ್ಯರ್ಥಿಗಳು ಕನಿಷ್ಠ 155 ಸೆಂಟಿಮೀಟರ್ (5 ಅಡಿ 1 ಇಂಚು), ಎತ್ತರಕ್ಕೆ ತಕ್ಕಂತಹ ಸೂಕ್ತ ತೂಕದ ಕಾಯದವರಾಗಿರಬೇಕು.
- ವಯಸ್ಸು: ಹೊಸಬರು 18-27 ವರ್ಷದವರಾಗಿರಬೇಕು. ಅನುಭವಿಗಳು 35 ವರ್ಷದ ವಯಸ್ಸಿನವರೆಗೆ ಅವಕಾಶ.
- ಬಿಎಂಐ (ಬಾಡಿ ಮಾಸ್ ಇಂಡೆಕ್ಸ್): 18ರಿಂದ 22 ಇರಬೇಕು.
- ಭಾರತದ ಪಾಸ್ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
- ಯೂನಿಫಾರ್ಮ್ ತೊಟ್ಟಾಗ ಮೇಲೆ ಎದ್ದು ಕಾಣುವಂತಹ ಟಾಟ್ಟೂಗಳು ಇರಬಾರದು.
- ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪರಿಣಿತರಿರಬೇಕು
- ದೃಷ್ಟಿ 6/6 ಇರಬೇಕು
ಇದನ್ನೂ ಓದಿ: SBI Recruitment 2023: ಎಸ್ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂದರ್ಶನ ಸ್ಥಳಗಳು ಮತ್ತು ಸಮಯ (2023)
- ಮುಂಬೈ: ಮಾರ್ಚ್ 3- ಬೆಳಗ್ಗೆ 9:30ರಿಂದ 12:30
- ದೆಹಲಿ: ಮಾರ್ಚ್ 6, 13 ಮತ್ತು 20- ಬೆಳಗ್ಗೆ 9:30ರಿಂದ 12:30
- ಜೈಪುರ್: ಮಾರ್ಚ್ 7- ಬೆಳಗ್ಗೆ 9:30ರಿಂದ 12:30
- ಚೆನ್ನೈ: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
- ಹೈದರಾಬಾದ್: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
- ಕೋಲ್ಕತಾ: ಮಾರ್ಚ್ 14- ಬೆಳಗ್ಗೆ 9:30ರಿಂದ 12:30
- ಗುವಾಹತಿ: ಮಾರ್ಚ್ 16- ಬೆಳಗ್ಗೆ 9:30ರಿಂದ 12:30
- ಅಹ್ಮದಾಬಾದ್: ಮಾರ್ಚ್ 17- ಬೆಳಗ್ಗೆ 9:30ರಿಂದ 12:30
- ಇಂದೋರ್: ಮಾರ್ಚ್ 21- ಬೆಳಗ್ಗೆ 9:30ರಿಂದ 12:30
- ಮುಂಬೈ: ಮಾರ್ಚ್ 23- ಬೆಳಗ್ಗೆ 9:30ರಿಂದ 12:30
- ಪುಣೆ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30
- ಲಕ್ನೋ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30
ಹುದ್ದೆಯ ಜವಾಬ್ದಾರಿಗಳು
- ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾಗಿ ನೇಮಕವಾದಲ್ಲಿ ಈ ಕೆಳಕಾಣಿಸಿದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.
- ವಿಮಾನ ಟೇಕಾಫ್ ಆಗುವ ಮುನ್ನ ಸುರಕ್ಷತಾ ಉಪಕರಣಗಳು ಸರಿ ಇವೆಯೇ ಎಂದು ಪರಿಶೀಲಿಸಬೇಕು. ಬಳಿಕ ಅತಿಥಿಗಳಿಗೆ (ಪ್ರಯಾಣಿಕರು) ಈ ಉಪಕರಣಗಳನ್ನು ಬಳಸುವ ವಿಧಾನಗಳನ್ನು ತೋರಿಸಿಕೊಡಬೇಕಾಗುತ್ತದೆ.
- ತುರ್ತು ಸಂದರ್ಭಗಳಲ್ಲಿ ಫಸ್ಟ್ ಏಡ್, ರಕ್ಷಣೆ, ಇನ್ಫ್ಲೈಟ್ ಸರ್ವಿಸ್ ಡ್ಯೂಟಿ ಇತ್ಯಾದಿಯನ್ನು ಮಾಡಬೇಕಾಗುತ್ತದೆ.
- ಅತಿಥಿಗಳನ್ನು ಸ್ವಾಗತಿಸುವುದು, ಅವರು ಸೀಟುಗಳತ್ತ ಹೋಗಲು ನಿರ್ದೇಶನ ನೀಡುವುದು, ಲಗೇಜು ಇಡಲು ಸಹಾಯ ಮಾಡುವುದು ಇತ್ಯಾದಿ ಕಾರ್ಯ
- ಫ್ಲೈಟ್ ಸಂದರ್ಭದಲ್ಲಿ ಅನೌನ್ಸ್ಮೆಂಟ್ ಇದ್ದರೆ ಮಾಡುವುದು, ಪ್ರಯಾಣಿಕರ ಪ್ರಶ್ನೆಗಳಿಗೆ, ಗೊಂದಲಗಳಿಗೆ ಸಮಾಧಾನ ನೀಡುವುದು.
- ವಿಮಾನ ಹೊರಡುವ ಮುಂಚಿನ ಮೀಟಿಂಗ್ಗಳನ್ನು ಕಡ್ಡಾಯವಾಗಿ ಅಟೆಂಡ್ ಮಾಡಬೇಕು. ಫ್ಲೈಟ್ ಘಟನೆಗಳ ಬಗ್ಗೆ ವರದಿ ಸಿದ್ಧಪಡಿಸಬೇಕು.
ಆಸಕ್ತ ಅಭ್ಯರ್ಥಿಗಳು ಮತ್ತು ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಬಹುದು. ಸಂದರ್ಶನ ಸ್ಥಳದ ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿಗೆ ಏರ್ ಇಂಡಿಯಾದ ಈ ವೆಬ್ ಲಿಂಕ್ ಸಂಪರ್ಕಿಸಿ
ಇನ್ನಷ್ಟು ಉದ್ಯೋಗ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Fri, 3 March 23