DRDO Recruitment 2022: ರಕ್ಷಣಾ ಸಂಶೋಧನೆ ಸಂಸ್ಥೆಯಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ
DRDO Recruitment 2022: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ ವಿಭಾಗದಿಂದ ECE, EEE, CSE, BE/B.Tech, B.Com ಮತ್ತು B.Sc ಪದವಿಯನ್ನು ಪಡೆದಿರಬೇಕು.
DRDO Recruitment 2022: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಂಶೋಧನಾ ಕೇಂದ್ರ ಇಮಾರತ್‌ನಲ್ಲಿ (ಆರ್‌ಸಿಐ) ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ 150 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು DRDO ನ ಅಧಿಕೃತ ವೆಬ್‌ಸೈಟ್ drdo.gov.in ಅಥವಾ rcilab.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 7. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಒಟ್ಟು ಹುದ್ದೆಗಳ ವಿವರ: ಪದವೀಧರ ಅಪ್ರೆಂಟಿಸ್: 40 ಹುದ್ದೆಗಳು ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್: 60 ಹುದ್ದೆಗಳು ಟ್ರೇಡ್ ಅಪ್ರೆಂಟಿಸ್: 50 ಹುದ್ದೆಗಳು
ಅರ್ಹತಾ ಮಾನದಂಡಗಳು:
ಪದವೀಧರ ಅಪ್ರೆಂಟಿಸ್: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ ವಿಭಾಗದಿಂದ ECE, EEE, CSE, BE/B.Tech, B.Com ಮತ್ತು B.Sc ಪದವಿಯನ್ನು ಪಡೆದಿರಬೇಕು.
ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್: ಅಭ್ಯರ್ಥಿಗಳು ಇಸಿಇ, ಇಇಇ, ಸಿಎಸ್‌ಇ, ಮೆಕ್ಯಾನಿಕಲ್ ಮತ್ತು ಕೆಮಿಕಲ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು.
ಟ್ರೇಡ್ ಅಪ್ರೆಂಟಿಸ್: ಅಭ್ಯರ್ಥಿಗಳು ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ವಿಷಯಗಳಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 1, 2022 ಕ್ಕೆ 18 ವರ್ಷಗಳಿಗಿಂತ ಕಡಿಮೆಯಿರಬಾರದು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅರ್ಹತೆ / ಲಿಖಿತ ಪರೀಕ್ಷೆ / ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 7
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಇದನ್ನೂ ಓದಿ: Dewald Brevis: ಜೆರ್ಸಿ ನಂಬರ್ 17, RCB ಫ್ಯಾನ್: ಯಾರು ಈ ಬೇಬಿ AB?
ಇದನ್ನೂ ಓದಿ: IPL 2022: ಐಪಿಎಲ್ ಸೀಸನ್ 15 ಭಾರತದಲ್ಲೇ, ಆದರೆ 2 ನಗರಗಳಲ್ಲಿ ಎಂಬುದೇ ವಿಶೇಷ..!
ಇದನ್ನೂ ಓದಿ: ICC U-19 World Cup: ಬೀದಿಯಲ್ಲಿ ಕ್ರೆಡಿಟ್ ಕಾರ್ಡ್ ಮಾರಿ ವಿಶ್ವಕಪ್ ಆಡುತ್ತಿರುವ ಕ್ರಿಕೆಟಿಗನ ಕಥೆಯಿದು
(DRDO Apprentice Recruitment 2022 Apply Online for 150 Posts)