AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBIನಲ್ಲಿ 5000 ಕ್ಲರ್ಕ್ ಹುದ್ದೆಗಳ ನೇಮಕಾತಿ; ನಿಮಗಾಗಿ ಇಲ್ಲಿದೆ ವೇತನ ಮತ್ತಿತರ ಮಾಹಿತಿ

ದೇಶದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 5000 ಕ್ಲರ್ಕ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ.

SBIನಲ್ಲಿ  5000 ಕ್ಲರ್ಕ್ ಹುದ್ದೆಗಳ ನೇಮಕಾತಿ; ನಿಮಗಾಗಿ ಇಲ್ಲಿದೆ ವೇತನ ಮತ್ತಿತರ ಮಾಹಿತಿ
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಸ್‌ಬಿಐ ಎರಡು ಖಾತೆಗಳನ್ನು ಒದಗಿಸುತ್ತದೆ - ಪೆಹ್ಲಾಕದಮ್ ಮತ್ತು ಪೆಹ್ಲಿಉಡಾನ್. ಇವೆರಡನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಪೆಹ್ಲಾಕದಮ್ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ತೆರೆಯಬಹುದು. ಈ ಉಳಿತಾಯ ಖಾತೆಯು ಪೋಷಕರು ಮತ್ತು ಮಗುವಿನ ಜಂಟಿ ಖಾತೆಯಾಗಿದ್ದು, ಅಲ್ಲಿ ಪೋಷಕರು ಸೆಕೆಂಡರಿ ಖಾತೆದಾರರಾಗಿರುತ್ತಾರೆ ಮತ್ತು ಮಗು ಪ್ರಾಥಮಿಕ ಹೋಲ್ಡರ್ ಆಗಿರುತ್ತದೆ. ಸಾಮಾನ್ಯ ಉಳಿತಾಯ ಖಾತೆಯಂತೆ, ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳಿಲ್ಲ. ಮೊಬೈಲ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳ ವಿತರಣೆಯಂತಹ ವೈಶಿಷ್ಟ್ಯಗಳು ಎರಡರಲ್ಲೂ ಲಭ್ಯವಿವೆ. ಓವರ್ ಡ್ರಾಫ್ಟ್, ಎಟಿಎಂ ಸೌಲಭ್ಯ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ಈ ಖಾತೆಗಳೊಂದಿಗೆ ಸೇರಿಸಲಾಗಿದೆ.
Srinivas Mata
|

Updated on: Apr 27, 2021 | 2:32 PM

Share

SBI clerk notification 2021: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು (SBI) ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿದೆ. ಜೂನಿಯರ್ ಅಸೋಸಿಯೇಟ್ಸ್ ಅಥವಾ ಕ್ಲರ್ಕ್​ಗಳ ಹುದ್ದೆಗೆ ಈ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಪ್ರಕ್ರಿಯೆ ಏಪ್ರಿಲ್ 27ರಿಂದ ಆರಂಭವಾಗುತ್ತದೆ ಮತ್ತು ಮೇ 17, 2021ಕ್ಕೆ ಕೊನೆಯಾಗುತ್ತದೆ. ಅರ್ಹ- ಆಸಕ್ತರು sbi.co.in, bank.sbi/careersನಲ್ಲಿ ಅರ್ಜಿಸಲ್ಲಿಸಬಹುದು. ತಾತ್ಕಾಲಿಕವಾಗಿ ಅಂದುಕೊಂಡಿರುವಂತೆ 2021ರ ಜೂನ್​ನಲ್ಲಿ ಪ್ರಿಲಿಮಿನರಿ ಪರೀಕ್ಷೆ ನಡೆಯಲಿದೆ. ಮುಖ್ಯಪರೀಕ್ಷೆಯು ಜುಲೈ 31ರಂದು ನಡೆಯಲಿದೆ. ಅ.ದಹಾಗೆ ಈ ನೇಮಕಾತಿಯಲ್ಲಿ 5000 (ಐದು ಸಾವಿರ) ಹುದ್ದೆಗಳಿವೆ.

ಈ ಆಯ್ಕೆ ಪ್ರಕ್ರಿಯೆಯು ಮೊದಲಿಗೆ ಪ್ರಾಥಮಿಕ ಮತ್ತು ಮುಖ್ಯಪರೀಕ್ಷೆ ಆನ್​ಲೈನ್​ನಲ್ಲಿ ನಡೆಯುತ್ತದೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಇರುತ್ತದೆ. ಅಭ್ಯರ್ಥಿಯು ಯಾವುದಾದರೂ ಒಂದು ರಾಜ್ಯದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆನ್​ನಲ್ಲಿ ನಡೆಯುವ ಪ್ರಾಥಮಿಕ ಪರೀಕ್ಷೆಯು 100 ಅಂಕಗಳ ಆಬ್ಜೆಕ್ಟಿವ್ ಪರೀಕ್ಷೆಯಾಗಿರುತ್ತದೆ. ಒಂದು ಗಂಟೆಯ ಸಮಯಾವಕಾಶ ಇರುತ್ತದೆ. ಇಂಗ್ಲಿಷ್- 30 ಪ್ರಶ್ನೆಗಳು, ನ್ಯೂಮರಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಎಬಿಲಿಟಿ ತಲಾ 35 ಪ್ರಶ್ನೆಗಳಿರುತ್ತವೆ. ಹೀಗೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ಇರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ ಜೂನಿಯರ್ ಅಸೋಸಿಯೇಟ್ ಅಧಿಸೂಚನೆ 2021: ಅರ್ಹತೆ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ವಯೋಮಿತಿ 20ರಿಂದ 28ರೊಳಗಿರಬೇಕು. ಮೀಸಲಾತಿ ಇರುವ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ಇದೆ. ಏಪ್ರಿಲ್ 1, 2021ಕ್ಕೆ ಅನ್ವಯ ಆಗುವಂತೆ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಅರ್ಜಿ ಹಾಕುವುದು ಹೇಗೆ? ಹಂತ 1: sbi.co.in ವೆಬ್​ಸೈಟ್​ಗೆ ಭೇಟಿ ನೀಡಿ. ಹಂತ 2: Career, ಲೇಟೆಸ್ಟ್ ರಿಕ್ರೂಟ್​ಮೆಂಟ್ ಕಲಂ, ಅದರ ಅಡಿಯಲ್ಲಿ ಬರುವ ಜೂನಿಯರ್ ಅಸಿಸ್ಟೆಂಟ್ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ ಹಂತ 3: ಮಾಹಿತಿ ಬಳಸಿಕೊಂಡು ನೋಂದಾಯಿಸಿ, ಸಲ್ಲಿಸಿ ಹಂತ 4: ಅರ್ಜಿ ತುಂಬಿ, ಶುಲ್ಕ ಪಾವತಿಸಿ ಮತ್ತು ಸಲ್ಲಿಸಿ

ಶುಲ್ಕ ಎಷ್ಟು? 750 ರೂಪಾಯಿ ಶುಲ್ಕವು ಅನ್ವಯ ಆಗುತ್ತದೆ. ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ.

ವೇತನ ಎಷ್ಟು? ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 17,900ರಿಂದ ರೂ. 47,920 ಸ್ಕೇಲ್ ದೊರೆಯುತ್ತದೆ. ಆರಂಭಿಕ ಮೂಲವೇತನ (ಬೇಸಿಕ್ ಪೇ) ರೂ. 19,900. ಅಭ್ಯರ್ಥಿಗಳಿಗೆ ರೂ. 17,900 ಹಾಗೂ ಜತೆಗೆ ಎರಡು ಅಡ್ವಾನ್ಸ್ ಇನ್​ಕ್ರಿಮೆಂಟ್ ದೊರೆಯುತ್ತದೆ. ಒಟ್ಟಾರೆಯಾಗಿ ಕ್ಲರಿಕಲ್ ಹಂತದ ಸಿಬ್ಬಂದಿಗೆ ಮುಂಬೈನಂಥ ಮೆಟ್ರೋ ನಗರದಲ್ಲಿ ತಿಂಗಳಿಗೆ ರೂ. 29,000 ದೊರೆಯುತ್ತದೆ.

ಇದನ್ನೂ ಓದಿ: SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ

(State Bank Of India clerk or junior associate notification 2021, bank call for 5000 posts. Here is the complete details of latest government job)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ