Grammy Awards Winners: ಪ್ರತಿಷ್ಠಿತ ಗ್ರ್ಯಾಮಿ ಗೆದ್ದ 12 ಭಾರತೀಯರು ಇವರೇ ನೋಡಿ

ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ 12 ಮಂದಿ ಪ್ರಶಸ್ತಿ ಪಡೆದಿದ್ದಾರೆ. ಪಂಡಿತ್ ರವಿಶಂಕರ್ ಮೊದಲಾದವರ ಹೆಸರು ಇದರಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.

Grammy Awards Winners: ಪ್ರತಿಷ್ಠಿತ ಗ್ರ್ಯಾಮಿ ಗೆದ್ದ 12 ಭಾರತೀಯರು ಇವರೇ ನೋಡಿ
ಗ್ರ್ಯಾಮಿ ಅವಾರ್ಡ್ ವಿನ್ನರ್ಸ್
Follow us
|

Updated on: Feb 06, 2023 | 10:59 AM

65ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Awards)  ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆದಿದೆ. ಬೆಂಗಳೂರು ಮೂಲದ ರಿಕ್ಕಿ ಕೇಜ್ ಅವರು ಮೂರನೇ ಬಾರಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಡಿವೈನ್​ ಟೈಡ್ಸ್​’​​ ಆಲ್ಬಂಗೆ ಪ್ರಶಸ್ತಿ ಸಿಕ್ಕಿದೆ. 2015 ಹಾಗೂ 2022ರಲ್ಲಿ ಅವರಿಗೆ ಈ ಪ್ರಶಸ್ತಿ ಒಲಿದಿತ್ತು. ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ 12 ಮಂದಿ ಪ್ರಶಸ್ತಿ ಪಡೆದಿದ್ದಾರೆ. ಪಂಡಿತ್ ರವಿಶಂಕರ್ ಮೊದಲಾದವರ ಹೆಸರು ಇದರಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.

ಪಂಡಿತ್ ರವಿ ಶಂಕರ್​:

ಪಂಡಿತ್ ರವಿ ಶಂಕರ್ ಸಿತಾರ್ ವಾದಕರು. ಅವರಿಗೆ ಭಾರತ ರತ್ನ ಮೊದಲಾದ ಪ್ರಶಸ್ತಿಗಳು ಸಿಕ್ಕಿವೆ. ಪಂಡಿತ್ ರವಿಶಂಕರ್​ಗೆ ಐದು ಗ್ರ್ಯಾಮಿ ಪ್ರಶಸ್ತಿಗಳು ಲಭಿಸಿವೆ. 2012ರಲ್ಲಿ ಅವರು ನಿಧನ ಹೊಂದಿದರು. ಆಗ ಅವರಿಗೆ 92 ವರ್ಷ ವಯಸ್ಸಾಗಿತ್ತು.

ಜುಬಿನ್ ಮೆಹ್ತಾ

ಭಾರತ ಮೂಲದ ಜುಬಿನ್ ಮೆಹ್ತಾ ಅವರು ಪಾಶ್ಚಾತ್ಯ ಸಂಗೀತ ಸಂಯೋಜಕರು. ಇವರು ಕೂಡ ಐದು ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ. ಅವರು ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದು 1981ರಲ್ಲಿ.

ಟಿಎಚ್​ ವಿನಯಕ್ರಮ್

ಇವರು ಘಟಂ ವಾದಕರು. ಘಟಂ ದೇವರು ಎಂದೇ ಫೇಮಸ್ ಆದವರು. ಇವರು ಗ್ರ್ಯಾಮಿ ಗೆದ್ದಿದ್ದಾರೆ. ಗ್ರ್ಯಾಮಿಯಿಂದ ಬಂದ ಹಣವನ್ನು ಎನ್​ಜಿಒ ಒಂದಕ್ಕೆ ನೀಡಿದ್ದರು.

ಜಾಕಿರ್ ಹುಸೇನ್

ಜಾಕಿರ್ ಹುಸೇನ್ ಅವರ ತಬಲಾ ವಾದನಕ್ಕೆ ಮರುಳಾಗಾದವರೇ ಇಲ್ಲ. ಅವರು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. 2008ರಲ್ಲಿ ಜಾಕಿರ್ ಹುಸೇನ್ ಗ್ರ್ಯಾಮಿ ಗೆದ್ದರು. ‘ಗ್ಲೋಬಲ್ ಡ್ರಂ ಪ್ರಾಜೆಕ್ಟ್​’ಗೆ ಈ ಪ್ರಶಸ್ತಿ ಸಿಕ್ಕಿದೆ.

ಪಂಡಿತ್ ವಿಶ್ವ ಮೋಹನ್ ಭಟ್

ಪಂಡಿತ್ ವಿಶ್ವ ಮೋಹನ್ ಭಟ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಾದ್ಯಗಾರ. ಅವರು ಕೂಡ ಗ್ರ್ಯಾಮಿ ಅವಾರ್ಡ್ ಗೆದ್ದಿದ್ದಾರೆ.

ಎ.ಆರ್​. ರೆಹಮಾನ್​

ಖ್ಯಾತ ಸಂಗೀತ ಸಂಯೋಜಕ ಎ.ಆರ್​.ರೆಹಮಾನ್ ಅವರು ಆಸ್ಕರ್ ಅವಾರ್ಡ್ ಕೂಡ ಗೆದ್ದವರು. ಅವರು ಭಾರತದಲ್ಲಿ ಗೆದ್ದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅವರು 2008ರಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದರು.

ಇವರಿಷ್ಟೇ ಅಲ್ಲದೆ, ಸೌಂಡ ಇಂಜಿನಿಯರ್ ಎಚ್​. ಶ್ರೀಧರ್, ಮಿಕ್ಸ್ ಇಂಜಿನಿಯರ್ ಪಿ.ಎ. ದೀಪಕ್, ನೀಲಾ, ಫಾಲ್ಗುಣಿ ಶಾ ಕೂಡ ಗ್ರ್ಯಾಮಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE