ಮುಂಚೆಯೇ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಮಹೇಶ್ ಬಾಬು-ರಾಜಮೌಳಿ: ಯಾವುದು ಆ ಸಿನಿಮಾ?

Rajamouli-Mahesh Babu: ಮಹೇಶ್​ ಬಾಬುಗೆ ಮೊದಲ ಬಾರಿಗೆ ರಾಜಮೌಳಿ ಆಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರು ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ.

ಮುಂಚೆಯೇ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಮಹೇಶ್ ಬಾಬು-ರಾಜಮೌಳಿ: ಯಾವುದು ಆ ಸಿನಿಮಾ?
ರಾಜಮೌಳಿ-ಮಹೇಶ್
Follow us
ಮಂಜುನಾಥ ಸಿ.
|

Updated on: Jul 26, 2023 | 10:36 PM

ಎಸ್​ಎಸ್ ರಾಜಮೌಳಿ (SS Rajamouli) ತಮ್ಮ ಸಿನಿಮಾಗಳ ನಾಯಕ ನಟರನ್ನು ರಿಪೀಟ್ ಮಾಡುವುದು ಬಹಳ ಕಡಿಮೆ. ಜೂ ಎನ್​ಟಿಆರ್ (Jr NTR) ಹಾಗೂ ರಾಮ್​ ಚರಣ್​ಗೆ (Ram Charan) ಮಾತ್ರವೇ ಆ ಅದೃಷ್ಟ ಲಭಿಸಿದೆ ಈ ವರೆಗೆ. ಜೂ ಎನ್​ಟಿಆರ್-ರಾಮ್ ಚರಣ್ ತೇಜ ಅವರನ್ನು ಹಾಕಿಕೊಂಡು ರಾಜಮೌಳಿ ನಿರ್ದೇಶಿಸಿದ ‘ಆರ್​ಆರ್​ಆರ್’ ಭಾರಿ ದೊಡ್ಡ ಹಿಟ್ ಆಗಿದ್ದು, ಆಸ್ಕರ್​ ಸಹ ಪಡೆದುಕೊಂಡಿದೆ. ಇದೀಗ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲವಾದರೂ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಗರಿಗೆದರಿವೆ. ಮಹೇಶ್ ಬಾಬುಗೆ (Mahesh Babu) ರಾಜಮೌಳಿ ಸಿನಿಮಾ ನಿರ್ದೇಶಿಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಆದರೆ ಅಸಲಿಗೆ ಎರಡು ದಶಕಕ್ಕೆ ಮುನ್ನಾ ಈ ಇಬ್ಬರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಎಂಬ ಮಾಹಿತಿಯನ್ನು ರಾಜಮೌಳಿ ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ.

ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಮಹೇಶ್ ಬಾಬು ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದು ‘ರಾಜಕುಮಾರುಡು’ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿದ್ದು ತೆಲುಗಿನ ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್. 1999ರಲ್ಲಿ ಈ ಸಿನಿಮಾ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಅಂದಹಾಗೆ ಇದೇ ಸಿನಿಮಾಕ್ಕಾಗಿ ಎಸ್​ಎಸ್ ರಾಜಮೌಳಿ ಸಹ ಕೆಲಸ ಮಾಡಿದ್ದರು.

ರಾಘವೇಂದ್ರ ರಾವ್​ ಅವರಿಗೆ ಎಸ್​ಎಸ್ ರಾಜಮೌಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮಹೇಶ್ ಬಾಬು ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ‘ರಾಜಕುಮಾರುಡು’ ಸಿನಿಮಾಕ್ಕೂ ಎಸ್​ಎಸ್ ರಾಜಮೌಳಿ ಅಸಿಸ್ಟೆಂಟ್ ಆಗಿದ್ದರು. ಈ ವಿಷಯವನ್ನು ಈ ಹಿಂದೆ ಸ್ವತಃ ರಾಘವೇಂದ್ರ ರಾವ್ ಹೇಳಿಕೊಂಡಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಅಂದರೆ 2001 ರಲ್ಲಿ ರಾಜಮೌಳಿ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾದರು ಜೂ ಎನ್​ಟಿಆರ್ ನಟನೆಯ ‘ಸ್ಟುಡೆಂಟ್ ನಂಬರ್ 1’ ಸಿನಿಮಾ ಮೂಲಕ.

ಇದನ್ನೂ ಓದಿ:ಪ್ರಭಾಸ್ ನಟನೆಯ ‘ಕಲ್ಕಿ 2898-ಎಡಿ’ ಚಿತ್ರದ ಬಗ್ಗೆ ರಾಜಮೌಳಿಗೆ ಮೂಡಿದೇ ಒಂದೇ ಪ್ರಶ್ನೆ; ಓಪನ್ ಆಗಿ ಕೇಳಿದ ನಿರ್ದೇಶಕ

‘ರಾಜಕುಮಾರುಡು’ ಸಿನಿಮಾ ಬಿಡುಗಡೆ ಆಗಿ ಸುಮಾರು 25 ವರ್ಷಗಳ ಬಳಿಕ ಮತ್ತೆ ರಾಜಮೌಳಿ ಹಾಗೂ ಮಹೇಶ್ ಬಾಬು ಒಂದಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಹೇಶ್ ಬಾಬುಗೆ ರಾಜಮೌಳಿ ಆಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ. ಕವ್​ಬಾಯ್ ಲುಕ್ ಉಳ್ಳ ಮಹೇಶ್ ಬಾಬು ಅವರಿಗಾಗಿ ಹಾಲಿವುಡ್​ನ ಇಂಡಿಯಾನಾ ಜೋನ್ಸ್ ಮಾದರಿಯ ಥ್ರಿಲ್ಲರ್ ಕತೆಯನ್ನು ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಹೊಸೆದಿದ್ದಾರೆ. ಚಿತ್ರಕತೆಯನ್ನು ರಾಜಮೌಳಿ ಬರೆದಿದ್ದಾರೆ. ಸಿನಿಮಾವು ಅರಣ್ಯದಲ್ಲಿ ನಡೆವ ಸಾಹಸಯಾತ್ರೆ ಕುರಿತಾದದ್ದಾಗಿರಲಿದೆ.

ಸಿನಿಮಾದ ಚಿತ್ರೀಕರಣಕ್ಕಾಗಿ ರಾಜಮೌಳಿ ತಯಾರಾಗುತ್ತಿದ್ದು, ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾ ಮುಕ್ತಾಯವಾಗಲೆಂದು ಕಾಯುತ್ತಿದ್ದಾರೆ. ಸಿನಿಮಾವನ್ನು ವಿಶೇಷ ತಂತ್ರಜ್ಞಾನಗಳನ್ನು ಬಳಸಿ ಚಿತ್ರೀಕರಣ ಮಾಡಲು ರಾಜಮೌಳಿ ಸಜ್ಜಾಗಿದ್ದು, ಇದೇ ಕಾರಣಕ್ಕೆ ಹಾಲಿವುಡ್​ನ ಹಲವು ಸಂಸ್ಥೆಗಳೊಟ್ಟಿಗೆ ಚರ್ಚಿಸಿ ಒಪ್ಪಂದ ಸಹ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ