AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಯ ರಜನೀ ಅಭಿಮಾನ ನೋಡಿ ವಾವ್ ಎಂದ ನೆಟ್ಟಿಗರು, ಯುವತಿ ಮಾಡಿದ್ದೇನು?

Rajinikanth: ರಜನೀಕಾಂತ್ ಅವರಿಗೆ ಕೊಟ್ಯಂತರ ಅಭಿಮಾನಿಗಳಿದ್ದಾರೆ. ಇಲ್ಲೊಬ್ಬ ಮಹಿಳಾ ಅಭಿಮಾನಿ, ರಜನೀಕಾಂತ್ ಅವರ ನಿಜ ಜೀವನದಲ್ಲಿ ನಡೆದ ಘಟನೆಯನ್ನೇ ರೀ ಕ್ರಿಯೇಟ್ ಮಾಡಿದ್ದಾರೆ. ಆ ಯುವತಿಯ ರಜನೀಕಾಂತ್ ಪ್ರೇಮಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಅಷ್ಟಕ್ಕೂ ಆ ಯುವತಿ ಮಾಡಿದ್ದೇನು? ಇಲ್ಲಿದೆ ಪೂರ್ಣ ಮಾಹಿತಿ...

ಯುವತಿಯ ರಜನೀ ಅಭಿಮಾನ ನೋಡಿ ವಾವ್ ಎಂದ ನೆಟ್ಟಿಗರು, ಯುವತಿ ಮಾಡಿದ್ದೇನು?
Rajinikanth
ಮಂಜುನಾಥ ಸಿ.
|

Updated on: Jul 24, 2025 | 9:09 AM

Share

ರಜನೀಕಾಂತ್ (Rajinikanth), ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ನಟ ಎಂದರೆ ಅದು ರಜನೀಕಾಂತ್. ಅವರಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ಬಾಲಿವುಡ್ ಸ್ಟಾರ್ ನಟರುಗಳಿಗೂ ಇಲ್ಲ. ರಜನೀಕಾಂತ್​ಗೆ ಈಗ ವಯಸ್ಸಾಗಿದೆ ಹಾಗೆಂದು ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ವಯಸ್ಸಾದಷ್ಟೂ ಅವರ ಸ್ಟಾರ್​ಡಮ್ ಹೆಚ್ಚುತ್ತಲೇ ಇದೆ. ಅಭಿಮಾನಿಗಳು ಒಂದಲ್ಲ ಒಂದು ರೀತಿ ತಮ್ಮ ಅಭಿಮಾನ ತೋರಿಸುತ್ತಲೇ ಇದ್ದಾರೆ. ಯುವತಿಯೊಬ್ಬರು ರಜನೀ ಮೇಲಿನ ಅಭಿಮಾನವನ್ನು ತೋರಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆ ಮಹಿಳೆ ಮಾಡಿದ್ದೇನು?

ರಮ್ಯಾ ರಾಮನ್ ಹೆಸರಿನ ಯುವತಿ ಟ್ವಿಟ್ಟರ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗಷ್ಟೆ ಬಿಎಂಡಬ್ಲು ಬ್ರಾಂಡಿನ ಐಶಾರಾಮಿ ಕಾರು ಖರೀದಿ ಮಾಡಿದರಂತೆ. ಆ ಕಾರಿಗೆ ಹಾಕಿಸಿರುವ ನಂಬರ್​​ನದ್ದು ಬಲು ವಿಶೇಷ. ರಜನೀಕಾಂತ್ ಅವರು ತಮ್ಮ ಮೊದಲ ಕಾರಿಗೆ ಹಾಕಿಸಿದ್ದ ಸಂಖ್ಯೆಯೆನ್ನೇ ಆ ಯುವತಿ ಈಗ ತಮ್ಮ ಹೊಸ ಕಾರಿಗೆ ಹಾಕಿಸಿದ್ದಾರೆ. ಅದಕ್ಕೆ ಕಾರಣವೂ ಇದೆ.

ರಜನೀಕಾಂತ್ ಅವರು ಚಿತ್ರರಂಗದಲ್ಲಿ ಅವಮಾನ ಎದುರಿಸಿ ತಮ್ಮ ಮೊದಲ ಕಾರು ಖರೀದಿ ಮಾಡಿದ್ದರು. ಅದೂ ಇಟಾಲಿಯನ್ ಫಿಯೇಟ್ ವಿದೇಶಿ ಕಾರು ಖರೀದಿ ಮಾಡಿದ್ದರು. ಆ ಕಾರಿಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಡ್ರೈವರ್ ಆಗಿ ಇರಿಸಿಕೊಂಡಿದ್ದರು. ಅವಮಾನ ಎದುರಿಸಿ ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದ ಕುಂಬಂಪಾಕಂ ರಸ್ತೆಯಲ್ಲಿ ತಮ್ಮ ಹೊಸ ಕಾರಿನಲ್ಲಿ ಜುಮ್ಮೆಂದು ಸುತ್ತಿದ್ದರು. ಆ ಘಟನೆಯನ್ನು ಅವರು ‘ದರ್ಬಾರ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅದೇ ಘಟನೆಯನ್ನು ಸ್ಪೂರ್ತಿಯಾಗಿ ಪಡೆದ ಯುವತಿ ರಮ್ಯಾ, ಬಿಎಂಡಬ್ಲು ಕಾರನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ರಜನೀಕಾಂತ್ ಅವರ ಮೊದಲ ಕಾರಿಗೆ ಇದ್ದ 5004 ಸಂಖ್ಯೆಯನ್ನೇ ಹಾಕಿಸಿದ್ದಾರೆ.

ಇದನ್ನೂ ಓದಿ:ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು ರಜನೀಕಾಂತ್ ನಟನೆಯ ಕೂಲಿ

ಕಾರು ಖರೀದಿಸಿದ ಕೂಡಲೇ ಪೋಯಸ್ ಗಾರ್ಡನ್​​ನಲ್ಲಿರುವ ರಜನೀಕಾಂತ್ ಅವರ ಮನೆಯ ಬಳಿ ಹೋಗಿ, ಕಾರಿನ ಕೀ ಅನ್ನು ಮನೆಯ ಗೇಟಿನ ಬಳಿ ಇರುವ ದೇವರ ವಿಗ್ರಹದ ಮುಂದಿಟ್ಟು, ಬಳಿಕ ಕಾರನ್ನು, ರಜನೀ ತಮ್ಮ ಮೊದಲ ಕಾರನ್ನು ಡ್ರೈವ್ ಮಾಡಿದ್ದ ಕುಂಬಂಪಾಕಂ ರಸ್ತೆಗೆ ತೆಗೆದುಕೊಂಡು ಹೋಗಿ ಅಲ್ಲಿ ಓಡಿಸಿದ್ದಾರೆ.

ಅಷ್ಟು ಮಾತ್ರವೇ ಅಲ್ಲ, ಇತ್ತೀಚೆಗಷ್ಟೆ ರಜನೀಕಾಂತ್​ಗೆ ಬಿಎಂಡಬ್ಲು ಎಕ್ಸ್​7 ಕಾರನ್ನು ನೀಡಿದ್ದ ಏಜೆನ್ಸಿಯನ್ನು ಹುಡುಕಿ, ಯಾರು ರಜನೀ ಅವರಿಗೆ ಎಕ್ಸ್​7 ಕಾರು ಡೆಲಿವರಿ ಮಾಡಿದರೋ ಅದೇ ಏಜೆಂಟರನ್ನು ಕಾಡಿ ಬೇಡಿ ಅವರಿಂದಲೇ ರಮ್ಯಾ ತಮ್ಮ ಹೊಸ ಬಿಎಂಡಬ್ಲು 530ಎಲ್​ಐ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರಂತೆ. ರಮ್ಯಾ ಅವರು ತಮ್ಮ ಕಾರಿನ ಫೋಟೊ, ರಜನೀಕಾಂತ್ ಅವರ ಮೊದಲ ಕಾರಿನ ಚಿತ್ರದ ಜೊತೆಗೆ ತಮ್ಮ ಅಭಿಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವತಿಯ ರಜನೀ ಅಭಿಮಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ