‘ಕನ್ನಡ ಚಿತ್ರರಂಗ ಈಗ ಮೇಲಕ್ಕೇರುತ್ತಿದೆ’; ಹೊಗಳಿದ ಎಆರ್ ರೆಹಮಾನ್
ಆಸ್ಕರ್ ವಿಜೇತ ಎಆರ್ ರೆಹಮಾನ್ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ. ಸ್ಯಾಂಡಲ್‌ವುಡ್ ಪ್ರಗತಿಯಲ್ಲಿದ್ದು, ಉನ್ನತ ಹಂತಕ್ಕೆ ಏರುತ್ತಿದೆ ಎಂದಿದ್ದಾರೆ. ಕೆಜಿಎಫ್, ಕಾಂತಾರ ಚಿತ್ರಗಳಂತಹ ಜಾಗತಿಕ ಯಶಸ್ಸು ಕನ್ನಡ ಸಿನಿಮಾಗಳ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ರೆಹಮಾನ್ ಅವರ ಮಾತುಗಳು ಕನ್ನಡ ಚಿತ್ರರಂಗದ ಪ್ರಸ್ತುತ ಬೆಳವಣಿಗೆ ಮತ್ತು ಪರಭಾಷಾ ವಲಯದಲ್ಲಿ ಅದರ ಹೆಚ್ಚಿದ ಮನ್ನಣೆಯನ್ನು ಎತ್ತಿ ಹಿಡಿಯುತ್ತವೆ.

ಎಆರ್ ರೆಹಮಾನ್ ಅವರು ಭಾರತ ಚಿತ್ರರಂಗದ ಬೇಡಿಕೆಯ ಮ್ಯೂಸಿಕ್ ಕಂಪೋಸರ್. ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಅವರಿಗೆ ಆಸ್ಕರ್ ಕೂಡ ಸಿಕ್ಕಿದೆ.ಇದು ಅವರು ಮಾಡಿದ ವಿಶೇಷ ಸಾಧನೆಗಳಲ್ಲಿ ಒಂದು. ಅವರು ಕನ್ನಡ ಚಿತ್ರರಂಗದ ಬಗ್ಗೆ ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಅವರು ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.
ರೆಹಮಾನ್ ಅವರು ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಿಗೆ ಹೆಚ್ಚಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಲಿವುಡ್ನಲ್ಲೂ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಬೇರೆ ಭಾಷೆಯ ಸಿನಿಮಾಗಳ ಹಾಡನ್ನು ಕನ್ನಡದಲ್ಲಿ ಮರು ಬಳಕೆ ಮಾಡಿಕೊಳ್ಳಲಾಗಿದೆ. ವಿನೋದ್ ರಾಜ್ ಅವರ ‘ಡ್ಯಾನ್ಸ್ ರಾಜ ಡ್ಯಾನ್ಸ್’ ಸಿನಿಮಾಗೆ ವಿಜಯ್ ಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ್ದರು. ರೆಹಮಾನ್ ಅವರು ಕೀಬೋರ್ಡ್ನಲ್ಲಿ ಸಹಾಯ ಮಾಡಿದ್ದರು.
ರೆಹಮಾನ್ ಅವರಿಗೆ ಮೊದಲಿನಿಂದಲೂ ಕನ್ನಡ ಚಿತ್ರರಂಗದ ಪರಿಚಯ ಇದೆ. ಹೀಗಾಗಿ, ಅವರು ಚಿತ್ರರಂಗವನ್ನು ಗಮನಿಸುತ್ತಿದ್ದಾರೆ. ‘ಕನ್ನಡ ಚಿತ್ರರಂಗ ರಾಕಿಂಗ್ ಹಂತದಲ್ಲಿದೆ. ಮೇಲಕ್ಕೆ ಏರುತ್ತಿದೆ’ ಎಂದು ರೆಹಮಾನ್ ಅವರು ಹಾಡಿ ಹೊಗಳಿದ್ದಾರೆ. ಇದು ಅವರು ಯಾವಾಗ ಹೇಳಿದ್ದು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ.
Kannada Industry is now Rocking, Now they just leaped…💥👀 – @arrahman #Kannada #Sandalwood #KFI pic.twitter.com/ncUDzLxuHo
— Filmy Kannada (@Filmy_Kannada_) November 27, 2025
ರೆಹಮಾನ್ ಕೈಯಲ್ಲಿ 12ಕ್ಕೂ ಅಧಿಕ ಸಿನಿಮಾಗಳಿವೆ. ಈ ಪೈಕಿ ‘ಪೆದ್ದಿ’ ಮುಖ್ಯವಾದುದು. ರಾಮ್ ಚರಣ್-ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಚಿಕಿರಿ.. ಚಿಕಿರಿ’ ಹಾಡು ಸಾಕಷ್ಟು ಗಮನ ಸೆಳೆದಿದೆ. ಹಿಂದಿಯ ‘ರಾಮಾಯಣ’ ಚಿತ್ರಕ್ಕೂ ಅವರದ್ದೇ ಸಂಗೀತ ಸಂಯೋಜನೆ ಇದೆ. ಇದರಲ್ಲಿ ಯಶ್ ನಟಿಸಿದ್ದಾರೆ. ಅವರು ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: ಬಾಲ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ವಿವರಿಸಿದ ಎಆರ್ ರೆಹಮಾನ್
ಕನ್ನಡದ ‘ಕೆಜಿಎಫ್’, ‘ಕೆಜಿಎಫ್ 2’, ‘777 ಚಾರ್ಲಿ’, ‘ಕಾಂತಾರ’, ‘ಸು ಫ್ರಮ್ ಸೋ’ ಸೇರಿದಂತೆ ಅನೇಕ ಸಿನಿಮಾಗಳು ಪರಭಾಷೆಯವರನ್ನು ಆಕರ್ಷಿಸಿದೆ. ಈ ಚಿತ್ರಗಳನ್ನು ಪರಭಾಷೆಯವರು ಕೂಡ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:40 am, Sat, 29 November 25




