Abhiramachandra Review: ಮೊದಲ ಪ್ರೇಮಕ್ಕಾಗಿ ಎಮೋಷನಲ್​ ಜರ್ನಿ; ಮಿಕ್ಕಿದ್ದೆಲ್ಲ ಫನ್ನಿ

Abhiramachandra Kannada Movie: ಸಿನಿಮಾದ ಆರಂಭದಿಂದ ಕೊನೆವರೆಗೆ ‘ಅಭಿರಾಮಚಂದ್ರ’ ಕಥೆ ಎಲ್ಲಿಗೆ ಸಾಗಿದರೂ ಕೂಡ ನಿರ್ದೇಶಕರು ಹಾಸ್ಯದ ಸೊಗಡನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಇಡೀ ಸಿನಿಮಾದಲ್ಲಿ ಫನ್​ ಇದೆ. ತ್ರಿಕೋನ ಪ್ರೇಮಕಥೆ ಇರುವುದರಿಂದ ಈ ಪ್ರೀತಿಯ ಹೂವು ಯಾರ ಮುಡಿ ಸೇರುತ್ತದೆ ಎಂಬ ಕೌತುಕ ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

Abhiramachandra Review: ಮೊದಲ ಪ್ರೇಮಕ್ಕಾಗಿ ಎಮೋಷನಲ್​ ಜರ್ನಿ; ಮಿಕ್ಕಿದ್ದೆಲ್ಲ ಫನ್ನಿ
‘ಅಭಿರಾಮಚಂದ್ರ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Oct 06, 2023 | 4:54 PM

ಚಿತ್ರ: ಅಭಿರಾಮಚಂದ್ರ. ನಿರ್ಮಾಣ: ಎಜಿ ಸುರೇಶ್​​, ಮಲ್ಲೇಶ್​. ನಿರ್ದೇಶನ: ನಾಗೇಂದ್ರ ಗಾಣಿಗ. ಪಾತ್ರವರ್ಗ: ರಥ ಕಿರಣ್​, ಸಿದ್ದು ಮೂಲಿಮನೆ, ನಾಟ್ಯರಂಗ, ಶಿವಾನಿ ರೈ, ಪವನ್​ ಬಸ್ರೂರು, ಪ್ರಕಾಶ್​ ತುಮ್ಮಿನಾಡು, ಎಸ್​. ನಾರಾಯಣ್​, ಅರ್ಜುನಾ ಕೊಟ್ಟಿಗೆ ಮುಂತಾದವರು.  ಸ್ಟಾರ್​: 3/5

ಪ್ರತಿಯೊಬ್ಬರ ಜೀವನದಲ್ಲಿ ಹುಟ್ಟುವ ಮೊದಲ ಪ್ರೇಮ ಎಂದಿಗೂ ಸ್ಪೆಷಲ್​. ಮೊದಲ ಪ್ರೇಮದ ಕುರಿತು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಎಷ್ಟೇ ಸಿನಿಮಾಗಳು ಬಂದರೂ ಪ್ರೇಮದ ಕಥೆಗಳಿಗೆ ಕೊನೆ ಎಂಬುದಿಲ್ಲ. ಬಾಲ್ಯದಲ್ಲಿ ಚಿಗುರಿದ ಪ್ರೀತಿ ಕೊನೆವರೆಗೂ ಕಾಡುವಂಥದ್ದು. ಅಂತಹ ಒಂದು ಲವ್​ಸ್ಟೋರಿಯನ್ನೇ ಇಟ್ಟುಕೊಂಡು ‘ಅಭಿರಾಮಚಂದ್ರ’ ಸಿನಿಮಾ ಮೂಡಿಬಂದಿದೆ. ಯುವ ಹೃದಯಗಳಿಗೆ ಇಷ್ಟ ಆಗುವಂತಹ ರೀತಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಒಂದು ತ್ರಿಕೋನ ಪ್ರೇಮಕಥೆ ಈ ಸಿನಿಮಾದಲ್ಲಿದೆ. ಹೊಸ ನಿರ್ದೇಶಕ ನಾಗೇಂದ್ರ ಗಾಣಿಗ ಅವರು ‘ಅಭಿರಾಮಚಂದ್ರ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹೊಸ ಕಲಾವಿದರ ನಟನೆ ಗಮನ ಸೆಳೆಯುವಂತಿದೆ.

ಲವಲವಿಕೆಯ ಫಸ್ಟ್​ ಹಾಫ್​

‘ಅಭಿರಾಮಚಂದ್ರ’ ಸಿನಿಮಾದ ಮೊದಲಾರ್ಧದ ಕಥೆಯನ್ನು ನಿರ್ದೇಶಕ ನಾಗೇಂದ್ರ ಗಾಣಿಗ ಅವರು ಬಹಳ ಲವಲವಿಕೆಯಿಂದ ನಿರೂಪಿಸಿದ್ದಾರೆ. ಮೂವರು ಸ್ನೇಹಿತರು (ಅಭಿ, ರಾಮ, ಚಂದ್ರ) ಒಂದೇ ಮನೆಯಲ್ಲಿ ವಾಸಿಸುತ್ತಾರೆ. ತಿಂಡಿ ತಿನ್ನಲು, ಮನೆ ಬಾಡಿಗೆ ಕಟ್ಟಲೂ ದುಡ್ಡಿಲ್ಲದ ಪರಿಸ್ಥಿತಿ ಅವರದ್ದು. ಆದರೆ ಅವರ ಗೋಳಿನ ಜೀವನವನ್ನು ರೋದನೆ ಎನಿಸುವ ರೀತಿಯಲ್ಲಿ ತೋರಿಸಿಲ್ಲ. ಎಲ್ಲವನ್ನೂ ಹಾಸ್ಯದಲ್ಲೇ ಹೇಳಲಾಗಿದೆ. ಹಾಗಾಗಿ ಫಸ್ಟ್​ ಹಾಫ್​ ಕಥೆಯಲ್ಲಿ ಒಂದು ಬಗೆಯ ಫನ್​ ಇದೆ. ಈ ಮೂವರ ಪೈಕಿ ಅಭಿಯ ಬಾಲ್ಯದ ಪ್ರೇಮದ ನೆರಳು ಮೊದಲಾರ್ಧದಲ್ಲಿ ಆಗಾಗ ಸುಳಿಯುತ್ತದೆ. ಆ ಮೂಲಕ ಕುತೂಹಲ ಮೂಡಿಸುತ್ತದೆ.

ದ್ವಿತೀಯಾರ್ಧದಲ್ಲಿ ಎಮೋಷನ್ಸ್​

ಅಭಿಯ ಪ್ರೇಮಕಥೆಯ ಆಳ-ಅಗಲ ತೆರೆದುಕೊಂಡ ಬಳಿಕ ರಾಮ್​ನ ಲವ್​ ಸ್ಟೋರಿ ಕೂಡ ಪ್ರೇಕ್ಷಕರ ಕಣ್ಣೆದುರಿಗೆ ಅನಾವರಣ ಆಗುತ್ತದೆ. ಆಗ ಎದುರಾಗುವುದೇ ರಿಯಲ್​ ಟ್ವಿಸ್ಟ್​. ಅದರ ನಡುವೆ ಚಂದ್ರನ ಪಬ್ಜಿ ಪ್ರೀತಿ ಸಹ ಬಹಿರಂಗ ಆಗುತ್ತದೆ. ಒಟ್ಟಿನಲ್ಲಿ ಈ ಮೂವರು ಸ್ನೇಹಿತರು ತಮ್ಮ ತಮ್ಮ ಪ್ರೇಯಸಿಯರನ್ನು ಹುಡುಕಿ ಹೊರಟಾಗ ಪ್ರೇಕ್ಷಕರಿಗೆ ಕೂಡ ಒಂದು ಎಮೋಷನಲ್​ ಜರ್ನಿಯಲ್ಲಿ ಭಾಗಿಯಾದ ಅನುಭವ ಆಗುತ್ತದೆ. ಹೊಸ ನಟಿ ಶಿವಾನಿ ರೈ ಅವರು ಸೆಕೆಂಡ್​ ಹಾಫ್​ನ ಮೆರುಗು ಹೆಚ್ಚಿಸಿದ್ದಾರೆ.

Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’

ಹಾಸ್ಯವೇ ಪ್ರಧಾನ

ಸಿನಿಮಾದ ಆರಂಭದಿಂದ ಕೊನೆವರೆಗೆ ‘ಅಭಿರಾಮಚಂದ್ರ’ ಕಥೆ ಎಲ್ಲಿಗೆ ಸಾಗಿದರೂ ಕೂಡ ನಿರ್ದೇಶಕರು ಹಾಸ್ಯದ ಸೊಗಡನ್ನು ಬಿಟ್ಟುಕೊಟ್ಟಿಲ್ಲ. ಕೆಲವು ದೃಶ್ಯಗಳಲ್ಲಿ ಪ್ರೀತಿಯ ತೀವ್ರತೆಯನ್ನು ತೋರಿಸುತ್ತ ಪ್ರೇಕ್ಷಕರನ್ನು ಎಮೋಷನಲ್​ ಆಗಿಸುವ ನಿರ್ದೇಶಕರು ಮರು ಕ್ಷಣವೇ ಹಾಸ್ಯವನ್ನು ಸೇರಿಸಿ ವಾತಾವರಣವನ್ನು ತಿಳಿಗೊಳಿಸುತ್ತಾರೆ. ಕಾಮಿಡಿ ಇರುವ ಎಲ್ಲ ಸನ್ನಿವೇಶಗಳಲ್ಲಿ ನಾಟ್ಯರಂಗ ಅವರು ಗಮನ ಸೆಳೆಯುತ್ತಾರೆ. ಅವರಿಗೆ ಸಿದ್ದು ಮೂಲಿಮನಿ ಕೂಡ ಸಾಥ್​ ನೀಡಿದ್ದಾರೆ. ಸಿದ್ದು ಮೂಲಿಮನಿ ಅವರು ಹಳ್ಳಿ ಹೈದನಾಗಿ ಕಾಣಿಸಿಕೊಳ್ಳುವ ದೃಶ್ಯಗಳು ನಗು ಉಕ್ಕಿಸುತ್ತವೆ. ಪ್ರಕಾಶ್​ ತುಮ್ಮಿನಾಡು ಅವರು ಕೂಡ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ.

Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಭರವಸೆ ಮೂಡಿಸಿದ ಹೊಸಬರು

ರಥ ಕಿರಣ್​ ಮತ್ತು ಶಿವಾನಿ ರೈ ಅವರು ‘ಅಭಿರಾಮಚಂದ್ರ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದಾರೆ. ಬಾಲ್ಯದಲ್ಲೇ ಕಳೆದುಹೋದ ಪ್ರೇಮಕ್ಕಾಗಿ ಯೌವನದಲ್ಲೂ ಹಂಬಲಿಸುವ ಪ್ರೇಮಿಯಾಗಿ ರಥ ಕಿರಣ್​ ಉತ್ತಮವಾಗಿ ನಟಿಸಿದ್ದಾರೆ. ನಟಿ ಶಿವಾನಿ ಅವರು ಈ ಸಿನಿಮಾದ ದ್ವಿತೀಯಾರ್ಧದಲ್ಲಿ ಹೆಚ್ಚು ಸ್ಕ್ರೀನ್​ ಸ್ಪೇಸ್​ ಪಡೆದುಕೊಂಡಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾವ-ಭಾವದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ. ನಟಿ ಅರ್ಚನಾ ಕೊಟ್ಟಿಗೆ ಕೆಲವೇ ಹೊತ್ತು ಮಾತ್ರ ಕಾಣಿಸಿಕೊಳ್ಳುತ್ತಾರೆ. ಕಥಾನಾಯಕನ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡ ಸಚಿನ್​ ಬಸ್ರೂರು ಅಭಿನಯವೂ ಮೆಚ್ಚುವಂತಿದೆ.

ಕುಂದಾಪುರ ಮತ್ತು ಮಂಡ್ಯ ಕನ್ನಡ

‘ಅಭಿರಾಮಚಂದ್ರ’ ಸಿನಿಮಾದ ಒಂದಷ್ಟು ದೃಶ್ಯಗಳು ಕುಂದಾಪುರ ಹಾಗೂ ಮಂಡ್ಯದಲ್ಲಿ ಸಾಗುತ್ತದೆ. ಆ ದೃಶ್ಯಗಳಲ್ಲಿ ಆಯಾ ಪ್ರದೇಶದ ಭಾಷೆಯನ್ನೇ ಅಚ್ಚುಕಟ್ಟಾಗಿ ಬಳಸಲಾಗಿದೆ. ಯಾವುದೇ ನಾಟಕೀಯತೆ ಇಲ್ಲದೇ ಪ್ರಾದೇಶಿಕ ಸೊಗಡಿನಲ್ಲೇ ಸಂಭಾಷಣೆಗಳನ್ನು ಬರೆಯಲಾಗಿದೆ. ಅದಕ್ಕೆ ಕಲಾವಿದರು ಕೂಡ ತುಂಬ ಚೆನ್ನಾಗಿ ಜೀವ ತುಂಬಿದ್ದಾರೆ. ರವಿ ಬಸ್ರೂರು ಅವರು ಈ ಸಿನಿಮಾದ ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದಲ್ಲಿ ಹೆಚ್ಚು ಇಷ್ಟ ಆಗುತ್ತಾರೆ. ಛಾಯಾಗ್ರಾಹಕ ಸಂದೀಪ್​ ವಲ್ಲುರಿ ಕೆಲಸ ಅಚ್ಚುಕಟ್ಟಾಗಿದೆ.

The Vaccine War Review: ಕೊವಿಡ್​ಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳ ಏಕಪಕ್ಷೀಯ ಸಂವಾದ

ಮೈನಸ್​ ಏನು?

ಈ ಸಿನಿಮಾದ ಕಥೆ ತೆರೆದುಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಪ್ರತಿ ಪಾತ್ರಗಳ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ವಿವರಿಸುವುದಕ್ಕೆ ಮೊದಲಾರ್ಧದಲ್ಲಿ ಹೆಚ್ಚು ದೃಶ್ಯಗಳನ್ನು ಮೀಸಲಿಡಲಾಗಿದೆ. ರಿಯಲ್​ ಕಹಾನಿ ಏನು ಎಂಬ ಕೌತುಕ ಮೂಡುವ ವೇಳೆಗೆ ಮೊದಲಾರ್ಧ ಮುಗಿದಿರುತ್ತದೆ. ಕಥಾನಾಯಕನ ಬಾಲ್ಯದ ಪ್ರೇಮಕಥೆಯಲ್ಲಿ ತೀವ್ರತೆಯ ಕೊರತೆ ಕಾಣಿಸುತ್ತದೆ. ಬಹುತೇಕ ದೃಶ್ಯಗಳಲ್ಲಿ ಧೂಮಪಾನ, ಮಧ್ಯಪಾನ, ಮಾದಕ ವಸ್ತು ಬಳಕೆ ತೋರಿಸಲಾಗಿರುವುದು ಕಥೆಗೆ ಹೆಚ್ಚೇನೂ ಪೂರಕವಾಗಿಲ್ಲ. ಕೆಲವು ಕಡೆಗಳಲ್ಲಿ ಲಾಜಿಕ್​ ಕಾಣೆಯಾಗಿರುವುದು ಅನುಭವಕ್ಕೆ ಬರುತ್ತದೆ. ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ ‘ಅಭಿರಾಮಚಂದ್ರ’ ಒಂದೊಳ್ಳೆಯ ಅನುಭವ ನೀಡುವ ಚಿತ್ರವಾಗಿ ಇಷ್ಟವಾಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು