ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್ ಕಂಪ್ಲೀಟ್: ಯಾವಾಗ ಚಿತ್ರ ರಿಲೀಸ್?
ನಟ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಭಿಯನದ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇಡೀ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದೆ.
ಸ್ಯಾಂಡಲ್ವುಡ್ನ ಭರವಸೆಯ ನಟ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಇತ್ತೀಚೆಗೆ ತಮ್ಮ ಹುಟ್ಟು ಹಬ್ಬದಂದು ‘ಬ್ಯಾಡ್ ಮ್ಯಾನರ್ಸ್’ (Bad Manners) ಚಿತ್ರದ ಟೀಸರ್ ರಿಲೀಸ್ ಮಾಡಿದ್ದರು. ಆ್ಯಕ್ಷನ್ ಫ್ಯಾಕ್ಡ್ ಚಿತ್ರವಾದ ‘ಬ್ಯಾಡ್ ಮ್ಯಾನರ್ಸ್’ ಟೀಸರ್ ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ‘ಬ್ಯಾಡ್ ಮ್ಯಾನರ್ಸ್’ ಚಿತ್ರವನ್ನು ಸೂರಿ ಅವರು ನಿರ್ದೇಶನ ಮಾಡಿದ್ದು, ಅಭಿಷೇಕ್ ಅಂಬರೀಷ್ ಖಡಕ್ ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ನಟಿಯರಾದ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ಕೂಡ ಇದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.
ನಿರ್ದೇಶಕ ಸೂರಿ ಅವರು ಸ್ಯಾಂಡಲ್ವುಡ್ನಲ್ಲಿ ಸುಕ್ಕಾ ಸೂರಿ ಎಂದೇ ಫೇಮಸ್ ಆದವರು. ‘ದುನಿಯಾ’, ‘ಟಗರು’, ‘ಪಾಪ್‌ಕಾರ್ನ್ ಮಂಕಿ ಟೈಗರ್’ ಎಂಬ ವಿಶಿಷ್ಟ ರೀತಿಯ ವಿಭಿನ್ನ ಕಥಾ ಹಂದರ್ ಇರುವಂತಹ ಚಿತ್ರಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾದವರು. ಈಗ ಆ್ಯಕ್ಷನ್ ಫ್ಯಾಕ್ಡ್ ಹೊಂದಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಮೂಲಕ ಕನ್ನಡದ ಜನತೆಗೆ ಮತ್ತಷ್ಟು ಹತ್ತಿರವಾಗಲು ಬರುತ್ತಿದ್ದಾರೆ. ಈ ಚಿತ್ರ 2023 ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Keerthy Suresh: ತಮಿಳಿನಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಮೊದಲ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ; ಪೋಸ್ಟರ್ ರಿಲೀಸ್
‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇಡೀ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ನಟ ಅಭಿಷೇಕ್ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಆದರೆ ‘ಅಮರ್’ ಚಿತ್ರ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಹಾಗಾಗಿ ಎರಡನೇ ಚಿತ್ರ ‘ಬ್ಯಾಡ್ ಮ್ಯಾನರ್ಸ್’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಟ ಅಭಿಷೇಕ್ ಅವರಿಗೆ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಯಶಸ್ಸು ತುಂಬಾ ಮುಖ್ಯವಾಗಿಲಿದೆ.
ಇದನ್ನೂ ಓದಿ: Kichcha Sudeep: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುದೀಪ್-ಪ್ರಿಯಾ ದಂಪತಿ
‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಶೇಖರ್ ಎಸ್ ಅವರ ಛಾಯಾಗ್ರಣವಿದೆ. ಅಭಿ ಷೇಕ್ ‘ಹೆಬ್ಬುಲಿ’, ‘ಪೈಲ್ವಾನ್’ ಚಿತ್ರಗಳ ನಿರ್ದೇಶಕ ಕೃಷ್ಣ ಅವರೊಂದಿಗೆ ಕೈ ಜೊಡಿಸಲಿದ್ದಾರೆ. ಈ ಚಿತ್ರಕ್ಕೆ ‘ಕಾಳಿ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ನವೆಂಬರ್ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಬಳಿಕ ನಿರ್ದೇಶಕ ಮಹೇಶ್ ಕುಮಾರ ಅವರೊಂದಿಗೆ ಕೂಡ ಅಭಿಷೇಕ್ ಚಿತ್ರ ಮಾಡಲಿದ್ದು, ಈ ಚಿತ್ರದ ಶೂಟಿಂಗ್ ಜನವರಿಯಲ್ಲಿ ಆರಂಭಗೊಳ್ಳುವ ಸಾಧ್ಯತೆಯಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.