‘ದ್ವಿಪಾತ್ರ’ ಚಿತ್ರದಲ್ಲಿ ವಿಚಿತ್ರ ಸೈಕೋ ಕಿಲ್ಲರ್​ ಕಹಾನಿ; ಗಮನ ಸೆಳೆದ ಹೊಸ ಸಿನಿಮಾ ಟ್ರೇಲರ್​

Dwipatra Kannada Movie: ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ‘ದ್ವಿಪಾತ್ರ’ ಸಿನಿಮಾ ಮಾಡಲಾಗಿದೆ. ಡಬಲ್ ಡಿಎನ್‌ಎ ಕುರಿತ ಕಥಾಹಂದರ ಇದರಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ದ್ವಿಪಾತ್ರ’ ಚಿತ್ರದಲ್ಲಿ ವಿಚಿತ್ರ ಸೈಕೋ ಕಿಲ್ಲರ್​ ಕಹಾನಿ; ಗಮನ ಸೆಳೆದ ಹೊಸ ಸಿನಿಮಾ ಟ್ರೇಲರ್​
‘ದ್ವಿಪಾತ್ರ’ ಸಿನಿಮಾ ತಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Dec 04, 2022 | 6:41 PM

ಕಿರುತೆರೆಯಲ್ಲಿ ನಟ ಚಂದು ಗೌಡ (Chandu Gowda) ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅವರು ಬಣ್ಣ ಹಚ್ಚಿರುವ ಹೊಸ ಸಿನಿಮಾ ‘ದ್ವಿಪಾತ್ರ’ (Dwipatra Movie) ಮೇಲೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿದೆ. ಚಂದು ಗೌಡ ಜೊತೆ ಸತ್ಯ ಅವರು ಹೀರೋ ಆಗಿ ನಟಿಸಿದ್ದಾರೆ. ಮಾಳವಿಕಾ ಅವಿನಾಶ್​, ಪಾಯಲ್​ ಚೆಂಗಪ್ಪ, ಅವಿನಾಶ್​, ಸುಚೇಂದ್ರ ಪ್ರಸಾದ್​, ಅಶ್ವತ್ಥ್​ ನೀನಾಸಂ, ಸ್ನೇಹಾ ಹೆಗಡೆ, ಪ್ರಶಾಂತ್​ ಸಿದ್ಧಿ, ರಘು ವೈನ್​ ಸ್ಟೋರ್​ ಮುಂತಾದವರು ಬಣ್ಣ ಹಚ್ಚಿದ್ದಾರೆ. ‘ದ್ವಿಪಾತ್ರ’ ಚಿತ್ರಕ್ಕೆ ಶ್ರೀವತ್ಸ ಆರ್​. ನಿರ್ದೇಶನ ಮಾಡಿದ್ದಾರೆ. ಇದೊಂದು ಮರ್ಡರ್​ ಮಿಸ್ಟರಿ ಸಿನಿಮಾ. ಸಸ್ಪೆನ್ಸ್​-ಥ್ರಿಲ್ಲರ್​ ಶೈಲಿಯಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಸೈಕೋ ಸೀರಿಯಲ್​ ಕಿಲ್ಲರ್​ (Serial Killer) ಕಹಾನಿ ಹೈಲೈಟ್​ ಆಗಿರಲಿದೆ.

ನಿರ್ದೇಶಕ ಶ್ರೀವತ್ಸ ಅವರು ಮೂಲತಃ ಚಾರ್ಟರ್ಡ್​ ಅಕೌಂಟೆಂಟ್​ ಆಗಿದ್ದವರು. ಸಿನಿಮಾ ಮೇಲಿನ ಆಸಕ್ತಿಯಿಂದ ನಿರ್ದೇಶಕನ ಕ್ಯಾಪ್​ ಧರಿಸಿದ್ದಾರೆ. ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ‘ದ್ವಿಪಾತ್ರ’ ಸಿನಿಮಾ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಸಿನಿಮಾ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡರು. ‘ಡಬಲ್ ಡಿಎನ್‌ಎ ಮನುಷ್ಯನಿಗಿದ್ದರೆ ಏನಾಗುತ್ತೆ? ಆತನೊಬ್ಬ ಸೈಕೋ ಕಿಲ್ಲರ್ ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. 4 ಪಾತ್ರಗಳು ಪ್ರಮುಖವಾಗಿವೆ. ಹಿನ್ನೆಲೆ ಸಂಗೀತ ಕೂಡ ಈ ಚಿತ್ರದ ದೊಡ್ಡ ಶಕ್ತಿ. ಸಿನಿಮಾದ ನಿರೂಪಣೆ ತುಂಬ ಫಾಸ್ಟ್​ ಆಗಿದೆ’ ಎಂದು ಅವರು ಹೇಳಿದ್ದಾರೆ.

ತನಿಖಾಧಿಕಾರಿ ಪಾತ್ರಕ್ಕೆ ಚಂದು ಗೌಡ ಬಣ್ಣ ಹಚ್ಚಿದ್ದಾರೆ. ಈ ಕಥೆಯ ಮೇಲೆ ಅವರಿಗೆ ಸಖತ್​ ಭರವಸೆ ಇದೆ. ಅವರಿಗೆ ಜೋಡಿಯಾಗಿ ಸ್ನೇಹಾ ಹೆಗಡೆ ಅಭಿನಯಿಸಿದ್ದಾರೆ. ‘ಅಮೃತಾಂಜನ್​’ ಕಿರುಚಿತ್ರದ ಮೂಲಕ ಫೇಮಸ್​ ಆದ ನಟಿ ಪಾಯಲ್​ ಚೆಂಗಪ್ಪ ಅವರು ಈ ಸಿನಿಮಾದಲ್ಲಿ ಡಿಟೆಕ್ಟೀವ್​ ಪಾತ್ರ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಅವರಿಗೆ ‘ದ್ವಿಪಾತ್ರ’ ಚಿತ್ರದಲ್ಲಿ ಗಂಭೀರವಾದ ಪಾತ್ರ ಸಿಕ್ಕಿದೆ.

ಇದನ್ನೂ ಓದಿ
Image
Keerthy Suresh: ತಮಿಳಿನಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೊದಲ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ; ಪೋಸ್ಟರ್​ ರಿಲೀಸ್​
Image
Kichcha Sudeep: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುದೀಪ್​-ಪ್ರಿಯಾ ದಂಪತಿ
Image
Chandu Gowda: ‘ಈ ಚಿತ್ರಕ್ಕೆ ತುಂಬ ಹೋಮ್​ ವರ್ಕ್​ ಮಾಡಲಾಗಿದೆ’: ‘ದ್ವಿಪಾತ್ರ’ ಬಗ್ಗೆ ಮಾಹಿತಿ ತೆರೆದಿಟ್ಟ ಚಂದು ಗೌಡ
Image
Payal Chengappa: ‘ದ್ವಿಪಾತ್ರ’ ಚಿತ್ರದಲ್ಲಿ ಕಾಮಿಡಿ ಬಿಟ್ಟು ಸೀರಿಯಸ್​ ಆದ ‘ಅಮೃತಾಂಜನ್​’ ನಟಿ ಪಾಯಲ್​ ಚೆಂಗಪ್ಪ

ಸತ್ಯಾಶ್ರಯ, ಹೆಬ್ಬಗೋಡಿ ಮಧುಸೂದನ್​, ಜಯಶ್ರೀ ಅವರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಮರ್​ ಗೌಡ ಛಾಯಾಗ್ರಹಣ, ಮಂಜು ಆರ್​. ಸಂಕಲನ ಮಾಡಿದ್ದಾರೆ. ‘ದ್ವಿಪಾತ್ರ’ ಚಿತ್ರದ ಕೆಲಸಗಳೆಲ್ಲ ಪೂರ್ಣಗೊಂಡಿವೆ. ಶೀಘ್ರದಲ್ಲೇ ಸೆನ್ಸಾರ್​ ಪ್ರಮಾಣಪತ್ರ ಸಿಗಲಿದೆ. ಆ ಬಳಿಕ ಬಿಡುಗಡೆ ದಿನಾಂಕ ಘೋಷಿಸಲಾಗುವುದು. ಎಲ್ಲ ಪಾತ್ರಗಳಿಗೆ ಡಬಲ್​ ಶೇಡ್​ ಇರುವುದರಿಂದ ‘ದ್ವಿಪಾತ್ರ’ ಎಂದು ಶೀರ್ಷಿಕೆ ಇಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ