ಕನ್ನಡದಲ್ಲೂ ಬರಲಿದೆ ಸಂಗೀತ ಮಾಂತ್ರಿಕ ಇಳಯರಾಜನ ಕಥೆ; ಧನುಷ್ ಹೀರೋ
ಇಳಯರಾಜ ಬಯೋಪಿಕ್ನ ಮೊದಲ ಪೋಸ್ಟರ್ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ. ಕಮಲ್ ಹಾಸನ್, ವೆಟ್ರಿ ಮಾರನ್ ಮೊದಲಾದ ದಿಗ್ಗಜರು ಭಾಗಿ ಆಗಿದ್ದರು. ಈ ಚಿತ್ರಕ್ಕೆ ‘ಇಳಯರಾಜ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಅರುಣ್ ಮಾದೇಶ್ವರನ್ ನಿರ್ದೇಶನ ಮಾಡುತ್ತಿದ್ದಾರೆ.
ಸಂಗೀತ ಸಂಯೋಜಕ, ಗಾಯಕ ಹಾಗೂ ಗಾಯಕ ಇಳಯಾರಜ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರು ಅನೇಕ ಹಾಡುಗಳಿಗೆ ಜೀವ ತುಂಬಿದ್ದಾರೆ. ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಕೇಳುಗರು ಕಳೆದು ಹೋಗುವ ರೀತಿಯಲ್ಲಿ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಈಗ ಅವರ ಕುರಿತು ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಧನುಷ್ (Dhanush) ಅವರು ಇಳಯರಾಜ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಗಮನ ಸೆಳೆದಿದೆ. ತಮಿಳಿನ ಜೊತೆ ಕನ್ನಡದಲ್ಲೂ ಸಿನಿಮಾ ಬರಲಿದೆ.
ಇಳಯರಾಜ ಅವರ ಬಯೋಪಿಕ್ನ ಮೊದಲ ಪೋಸ್ಟರ್ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿದೆ. ಕಮಲ್ ಹಾಸನ್, ವೆಟ್ರಿ ಮಾರನ್ ಮೊದಲಾದ ದಿಗ್ಗಜರು ಭಾಗಿ ಆಗಿದ್ದರು. ಈ ಚಿತ್ರಕ್ಕೆ ‘ಇಳಯರಾಜ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಅರುಣ್ ಮಾದೇಶ್ವರನ್ ನಿರ್ದೇಶನ ಮಾಡುತ್ತಿದ್ದಾರೆ. ನೀರವ್ ಶಾ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಶೇಷ ಎಂದರೆ ಇಳಯರಾಜ ಅವರೇ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಬಯೋಪಿಕ್ಗಳಲ್ಲಿ ನಟಿಸೋದು ಎಂದರೆ ಅಷ್ಟು ಸುಲಭವಲ್ಲ. ಆದರೆ, ಧನುಷ್ ಅವರು ಈ ಸವಾಲನ್ನು ಸ್ವೀಕರಿಸಿದ್ದಾರೆ. ಇಳಯರಾಜ ಅವರು ಚೆನ್ನೈಗೆ ಬಂದ ದಿನಗಳನ್ನು ತೋರಿಸುವ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಹಳೆಯ ಚೆನ್ನೈನ ಫೋಟೋ ಗಮನ ಸೆಳೆದಿದೆ. ಧನುಷ್ ಅವರು ಈ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ.
‘ನಾನು ಇಳಯರಾಜ ಅವರ ಅಭಿಮಾನಿ. ಅವರ ಸಂಗೀತ ಎಲ್ಲರಿಗೂ ಹೊಂದುತ್ತದೆ. ಅವರ ಸಂಗೀತ ನನ್ನ ನಟನೆಯ ಟೀಚರ್. ನಟಿಸುವುದಕ್ಕೂ ಮೊದಲು ಅವರ ಹಾಡು ಅಥವಾ ಬಿಜಿಎಂನ ಕೇಳುತ್ತೇನೆ. ಹೇಗೆ ನಟಿಸಬೇಕು ಎಂಬುದನ್ನು ಅವರ ಸಂಗೀತ ಹೇಳುತ್ತದೆ. ನಾನು ನಟಿಸೋದೇ ಹಾಗೆ. ಇದೊಂದು ದೊಡ್ಡ ಚಾಲೆಂಜ್ ಹಾಗೂ ಜವಾಬ್ದಾರಿ ಎಂದು ಅನೇಕರು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನಿಸುತ್ತಿಲ್ಲ. ಮ್ಯೂಸಿಕ್ ನನಗೆ ಗೈಡ್ ಮಾಡುತ್ತದೆ ಎನ್ನುವ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್
ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಈ ಬಯೋಪಿಕ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಹೇಗೆ ಮೂಡಿ ಬರುತ್ತದೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ