AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಒಂದೇ ವಾಕ್ಯದಲ್ಲಿ ಟ್ರೋಲ್​​ಗಳ ಬಾಯಿ ಮುಚ್ಚಿಸಿದ ನಟಿ ಸಮಂತಾ

ಬಿಡುವಿನ ಸಮಯದಲ್ಲಿ ಸಮಂತಾ ಟ್ರೋಲ್​​ಗಳಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಟೀಕೆ ಮಾಡುವವರ ಬಾಯಿಮುಚ್ಚಿಸುತ್ತಿದ್ದಾರೆ.

Samantha: ಒಂದೇ ವಾಕ್ಯದಲ್ಲಿ ಟ್ರೋಲ್​​ಗಳ ಬಾಯಿ ಮುಚ್ಚಿಸಿದ ನಟಿ ಸಮಂತಾ
ಸಮಂತಾ
TV9 Web
| Edited By: |

Updated on: Jan 03, 2023 | 12:19 PM

Share

ನಟಿ ಸಮಂತಾ (Samantha) ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. Myositis ಹೆಸರಿನ ಅಪರೂಪದ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ಈ ಕಾಯಿಲೆ ಬಂದರೆ ಸ್ನಾಯು ಸೆಳೆತ ಶುರುವಾಗುತ್ತದೆ. ಸಮಂತಾ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಸಮಂತಾ ಟ್ರೋಲ್​​ಗಳಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಟೀಕೆ ಮಾಡುವವರ ಬಾಯಿಮುಚ್ಚಿಸುತ್ತಿದ್ದಾರೆ.

ದೀಪನ್ ಎಂಬುವವರು ಥಿಯೇಟರ್ ಒಂದರ ಫೋಟೋ ಹಂಚಿಕೊಂಡಿದ್ದರು. ಮಹಿಳಾ ಪ್ರಧಾನ ಸಿನಿಮಾಗಳ ಪೋಸ್ಟರ್​​ಗಳು ಥಿಯೇಟರ್​​ನಲ್ಲಿದ್ದವು. ಈ ಬಗ್ಗೆ ದೀಪನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟ್ವೀಟ್​ನ ಶೇರ್​ ಮಾಡಿಕೊಂಡಿದ್ದ ಸಮಂತಾ ‘ಮಹಿಳೆಯರು ಬೆಳೆಯುತ್ತಿದ್ದಾರೆ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಅನಾಮಧೇಯ ವ್ಯಕ್ತಿಯೋರ್ವ ಉತ್ತರ ನೀಡಿದ್ದ. ‘ಕೆಳಗೆ ಬೀಳುವುದಕ್ಕಾಗಿ ಮಹಿಳೆಯರು ಬೆಳೆಯುತ್ತಾರೆ’ ಎಂದು ಬರೆದುಕೊಂಡಿದ್ದ.

ಈ ಟ್ವೀಟ್​​ನ ಸಮಂತಾ ರೀಟ್ವೀಟ್ ಮಾಡಿದ್ದಾರೆ. ‘ಆ ಬಳಿಕ ಮತ್ತೆ ಎದ್ದು ನಿಲ್ಲುವುದು ಸಂತಸದ ವಿಚಾರ’ ಎಂದು ಸಮಂತಾ ಬರೆದುಕೊಂಡಿದ್ದಾರೆ. ಈ ಮೂಲಕ ಟ್ರೋಲ್​​ಗಳ ಬಾಯಿಮುಚ್ಚಿಸಿದ್ದಾರೆ.

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಫೆಬ್ರವರಿ 17ಕ್ಕೆ ‘ಶಾಕುಂತಲಂ’ ಸಿನಿಮಾ ರಿಲೀಸ್

ನಟಿ ಸಮಂತಾ ಅವರು ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡು ಬಹಳ ಸಮಯ ಕಳೆದಿದೆ. ಪೌರಾಣಿಕ ಕಥಾಹಂದರ ಇರುವ ಈ ಚಿತ್ರವನ್ನು ಸಮಂತಾ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳ ವಲಯದಲ್ಲಿ ಹೈಪ್​ ಸೃಷ್ಟಿ ಆಗಿತ್ತು. ಆದರೆ, ಚಿತ್ರತಂಡದಿಂದ ರಿಲೀಸ್ ದಿನಾಂಕ ಹೊರ ಬಿದ್ದಿರಲಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಈಗ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಆಗಿದೆ. ಹೊಸ ಪೋಸ್ಟರ್ ರಿಲೀಸ್ ಮಾಡಿ ಈ ವಿಚಾರ ಬಹಿರಂಗ ಮಾಡಲಾಗಿದೆ.

ಇದನ್ನೂ ಓದಿ: ಸಮಂತಾ ಬಗ್ಗೆ ಹುಟ್ಟಿಕೊಂಡಿತು ಮತ್ತಷ್ಟು ವದಂತಿ; ಬೇಸರದಲ್ಲೇ ಸ್ಪಷ್ಟನೆ ನೀಡಿದ ತಂಡ

ಹೊಸ ಪೋಸ್ಟರ್​ನಲ್ಲಿ ಸಮಂತಾ ಲುಕ್ ಗಮನ ಸೆಳೆದಿದೆ. ಈ ಚಿತ್ರ ಫೆಬ್ರವರಿ 17ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರ 3ಡಿಯಲ್ಲೂ ಮೂಡಿ ಬರುತ್ತಿದೆ ಅನ್ನೋದು ವಿಶೇಷ. ಪೌರಾಣಿಕ ಹಿನ್ನೆಲೆ ಜತೆಗೆ 3ಡಿ ವರ್ಷನ್​​ ಕೂಡ ಇರುವುದರಿಂದ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ನೀಲಿಮಾ ಗುಣ ಅವರ ನಿರ್ಮಾಣದಲ್ಲಿ ‘ಶಾಕುಂತಲಂ’ ಮೂಡಿಬರುತ್ತಿದೆ. ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾಳೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ