Adah Sharma: ಅದಾ ಶರ್ಮಾ ಜನ್ಮದಿನ: ನಟನೆಗಾಗಿ ಶಿಕ್ಷಣ ತೊರೆದಿದ್ದ ನಟಿ
ಅದಾ ಶರ್ಮಾ ಅವರ ಪ್ರಾಣಿ ಪ್ರೀತಿ ಎಷ್ಟಿದೆ ಎಂದರೆ ಅವರು ಮಾಂಸಹಾರ ತಿನ್ನುವುದಿಲ್ಲ. ಅವರು ಯಾವಾಗಲೂ ಸಸ್ಯಾಹಾರ ಸೇವನೆ ಮಾಡುತ್ತಾರೆ. ಅಭಿಮಾನಿಗಳ ಬಳಿಯೂ ಅವರು ಇದೇ ರೀತಿಯ ಮನವಿ ಮಾಡಿಕೊಂಡಿದ್ದರು.
ಅದಾ ಶರ್ಮಾ (Adah Sharma) ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಅವರ ನಟನೆಗೂ ಮೆಚ್ಚುಗೆ ಸಿಕ್ಕಿದೆ. ಇಂದು (ಮೇ 11) ಅವರಿಗೆ ಬರ್ತ್ಡೇ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅದಾ ಶರ್ಮಾ ಬಗ್ಗೆ ಹಲವು ಅಪರೂಪದ ವಿಚಾರಗಳು ಕೂಡ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಅದಾ ಶರ್ಮಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ‘1920’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. ‘ರಣ ವಿಕ್ರಮ’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸಿದರು. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದು. ತೆಲುಗು, ತಮಿಳು ಮೊದಲಾದ ಸಿನಿಮಾಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಅವರ ಕುರಿತ ಐದು ಅಪರೂಪದ ಮಾಹಿತಿ ಇಲ್ಲಿದೆ.
ನಟನೆಗಾಗಿ ಶಿಕ್ಷಣ ಬಿಟ್ಟರು
ಅದಾ ಶರ್ಮಾ ಅವರು ನಟನೆಗಾಗಿ ಶಿಕ್ಷಣವನ್ನೇ ತೊರೆದರು. ಅವರಿಗೆ ಸರ್ಕಸ್ ಆರ್ಟಿಸ್ಟ್ ಆಗಬೇಕು ಎಂದಿತ್ತು. ಆ ಬಳಿಕ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಅವರು ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ನಂತರ ನಟನೆಗೆ ಬಂದರು.
ಡ್ಯಾನ್ಸ್ ಆಸಕ್ತಿ
ಅದಾ ಶರ್ಮಾ ಅವರು ತರಬೇತಿ ಪಡೆದ ಡ್ಯಾನ್ಸರ್. ಮೂರನೇ ವಯಸ್ಸಿಗೆ ಅವರು ಡ್ಯಾನ್ಸ್ ಕಲಿತರು. ನಂತರ ಗೋಪಿ ಕೃಷ್ಣ ಡ್ಯಾನ್ಸ್ ಅಕಾಡೆಮಿ ಸೇರಿದರು. ಅಮೆರಿಕದಲ್ಲಿ ಸಾಲಾ ಟ್ರೇನಿಂಗ್ ಪಡೆದಿದ್ದಾರೆ. ಅವರು ಜಿಮನಾಸ್ಟಿಕ್ನಲ್ಲೂ ತರಬೇತಿ ಹೊಂದಿದ್ದಾರೆ.
ಪ್ರಾಣಿ ಪ್ರಿತಿ
ಅದಾ ಶರ್ಮಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಅವರು ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಾರೆ. ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಅವರು ಅಭಿಮಾನಿಗಳ ಬಳಿ ಕೋರಿದ್ದರು. ದುಬಾರಿ ಪ್ರಾಣಿಗಳನ್ನು ಖರೀದಿ ಮಾಡುವ ಬದಲು ಬೀದಿ ನಾಯಿಗಳನ್ನು ಸಾಕಿ ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: ‘ನಾನು ನಿಮ್ಮ ಹೃದಯದಲ್ಲಿದ್ದೇನೆ’; ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ ಅದಾ ಶರ್ಮಾ
ಸಸ್ಯಾಹಾರಿ
ಅದಾ ಶರ್ಮಾ ಅವರ ಪ್ರಾಣಿ ಪ್ರೀತಿ ಎಷ್ಟಿದೆ ಎಂದರೆ ಅವರು ಮಾಂಸಹಾರ ತಿನ್ನುವುದಿಲ್ಲ. ಅವರು ಯಾವಾಗಲೂ ಸಸ್ಯಾಹಾರ ಸೇವನೆ ಮಾಡುತ್ತಾರೆ. ಅಭಿಮಾನಿಗಳ ಬಳಿಯೂ ಅವರು ಇದೇ ರೀತಿಯ ಮನವಿ ಮಾಡಿಕೊಂಡಿದ್ದರು.
ಹಲವು ರಿಜೆಕ್ಷನ್
ಅದಾ ಶರ್ಮಾ ಅವರು ತಮ್ಮ ಲುಕ್ ಕಾರಣಕ್ಕೆ ಅನೇಕರಿಂದ ಟೀಕೆಗೆ ಒಳಗಾಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರ ನಟನೆಯನ್ನು ಎಲ್ಲರೂ ಮೆಚ್ಚಿ ಅವಕಾಶ ನೀಡೋಕೆ ಆರಂಭಿಸಿದರು. ಅದಾ ಶರ್ಮಾ ಅವರು ಗ್ಲಾಮರ್ ಪಾತ್ರಗಳ ಜೊತೆಗೆ ನಟನೆಗೆ ಹೆಚ್ಚು ತೂಕ ಇರುವ ಪಾತ್ರಗಳನ್ನು ಒಪ್ಪಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.