AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದನ್ನು ನೋಡಿ ಕಲಿಯಿರಿ’; ‘ಹನುಮಾನ್’ ಉದಾಹರಣೆ ಕೊಟ್ಟು ‘ಆದಿಪುರುಷ್’ ನಿರ್ದೇಶಕನ ಟ್ರೋಲ್

ದೊಡ್ಡ ಬಜೆಟ್​ನಲ್ಲಿ ‘ಆದಿಪುರುಷ್’ ಸಿನಿಮಾ ನಿರ್ಮಾಣ ಆಗಿತ್ತು. ಆದರೆ, ಮೇಕಿಂಗ್ ಉತ್ತಮವಾಗಿರಲಿಲ್ಲ. ‘ಹನುಮಾನ್’ ಸಿನಿಮಾ ನೋಡಿದ ಅನೇಕರು ‘ಈ ಚಿತ್ರ ನೋಡಿ ಕಲಿಯಿರಿ’ ಎಂದು ಓಂ ರಾವತ್​ಗೆ ಬುದ್ಧಿವಾದ ಹೇಳಿದ್ದಾರೆ.

‘ಇದನ್ನು ನೋಡಿ ಕಲಿಯಿರಿ’; ‘ಹನುಮಾನ್’ ಉದಾಹರಣೆ ಕೊಟ್ಟು ‘ಆದಿಪುರುಷ್’ ನಿರ್ದೇಶಕನ ಟ್ರೋಲ್
ಹನುಮಾನ್-ಆದಿಪುರುಷ್
ರಾಜೇಶ್ ದುಗ್ಗುಮನೆ
|

Updated on:Jan 13, 2024 | 8:31 AM

Share

ಕಳೆದ ವರ್ಷ ರಿಲೀಸ್ ಆದ ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾ ಡಿಸಾಸ್ಟರ್ ಆಯಿತು. ಈ ಚಿತ್ರದ ಬಳಿಕ ತೆರೆಗೆ ಬಂದ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಗೆದ್ದು ಬೀಗಿತು. ಆದರೂ ಪ್ರೇಕ್ಷಕರೂ ‘ಆದಿಪುರುಷ್’ ತಂಡ ಮಾಡಿದ ತಪ್ಪನ್ನು ಮರೆತಿಲ್ಲ. ಸಮಯ ಸಿಕ್ಕಾಗಲೆಲ್ಲ ಈ ಅವಕಾಶ ಬಳಕೆ ಮಾಡಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಈಗ ‘ಹನುಮಾನ್’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಈ ಚಿತ್ರದ ಕಥೆ, ಮೇಕಿಂಗ್, ವಿಎಫ್​ಎಕ್ಸ್ ಗಮನ ಸೆಳೆದಿದೆ. ಹೀಗಾಗಿ, ಪ್ರೇಕ್ಷಕರು ‘ಆದಿಪುರುಷ್’ ನಿರ್ದೇಶಕ ಓಂ ರಾವತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ತೆಜ ಸಜ್ಜಾ ಅವರು ‘ಹನುಮಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಎದುರು ರಿಲೀಸ್ ಆಗಿ ಈ ಚಿತ್ರ ಗೆದ್ದು ಬೀಗಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಆದಿಪುರುಷ್’ ತಂಡ ಮಾಡಿದ ಡಿಸಾಸ್ಟರ್ ನೆನಪಾಗಿದೆ. ಈ ಬಗ್ಗೆ ಟ್ರೋಲ್ ಮಾಡುವ ಕೆಲಸ ಆಗುತ್ತಿದೆ.

ಎಲ್ಲಾ ರೀತಿಯಲ್ಲೂ ‘ಆದಿಪುರುಷ್’ ಚಿತ್ರವನ್ನು ‘ಹನುಮಾನ್​’ ಹಿಂದಿಕ್ಕಿದೆ ಎಂದು ಫ್ಯಾನ್ಸ್ ಅಭಿಪ್ರಾಯ ಹೊರಾಹಾಕುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ‘ಆದಿಪುರುಷ್’ ನಿರ್ಮಾಣ ಆಗಿತ್ತು. ಆದರೆ, ಬಜೆಟ್ ಸರಿಯಾಗಿ ಬಳಕೆ ಆಗಿಲ್ಲ. ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಿತ್ತು. ಹೀಗಾಗಿ ‘ಹನುಮಾನ್’ ನೋಡಿದ ಅನೇಕರು ‘ಈ ಚಿತ್ರ ನೋಡಿ ಕಲಿಯಿರಿ’ ಎಂದು ಓಂ ರಾವತ್​ಗೆ ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ: ರಾಮ್​ ಗೋಪಾಲ್​ ವರ್ಮಾ ಕಂಡಂತೆ ರಾಜಮೌಳಿ; ಸಿನಿ ಮಾಂತ್ರಿಕನ ಬಗ್ಗೆ ಆರ್​ಜಿವಿ ಬರೆದ ವಿಶೇಷ ಲೇಖನ..

ಪ್ರಶಾಂತ್ ವರ್ಮ ಅವರು ‘ಹನುಮಾನ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಣ್ಣ ಬಜೆಟ್​ನಲ್ಲಿ ಒಳ್ಳೆಯ ಗ್ರಾಫಿಕ್ಸ್ ಮಾಡಿದ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಹನುಮಂತನ ಸ್ಫೂರ್ತಿಯಾಗಿ ಇಟ್ಟುಕೊಂಡು ‘ಹನುಮಾನ್’ ಚಿತ್ರದ ಕಥೆ ಸಿದ್ಧವಾಗಿದೆ. ಇದನ್ನು ಕಟ್ಟಿಕೊಟ್ಟ ರೀತಿ ಎಲ್ಲರಿಗೂ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:27 am, Sat, 13 January 24

ಇಂದು ಈ ರಾಶಿಯವರಿಗೆ ಡಬಲ್ ಅದೃಷ್ಟ!
ಇಂದು ಈ ರಾಶಿಯವರಿಗೆ ಡಬಲ್ ಅದೃಷ್ಟ!
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ