AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್!

ಬೆಂಗಳೂರು ಸೈಬರ್ ಪೊಲೀಸರು ನಟಿ ರುಕ್ಮಿಣಿ ವಸಂತ್ ಅವರ AI ಡೀಪ್‌ಫೇಕ್ ಫೋಟೋ-ವಿಡಿಯೋ ಸೃಷ್ಟಿಸಿದ ಮೂವರು ಸುಶಿಕ್ಷಿತ ಆರೋಪಿಗಳನ್ನು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್, ನರ್ಸಿಂಗ್ ಪದವೀಧರ, CA ಕಂಪನಿ ಉದ್ಯೋಗಿಗಳಾದ ಇವರು ಹಣ, ವೀಕ್ಷಣೆ ಅಥವಾ ವಿಕೃತ ಸಂತೋಷಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಂತಹ ಸೈಬರ್ ಅಪರಾಧದಲ್ಲಿ ಸುಶಿಕ್ಷಿತರು ಭಾಗಿಯಾಗಿರುವುದು ಸಮಾಜದಲ್ಲಿ ಆತಂಕ ಮೂಡಿಸಿದೆ.

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಪ್ರಕರಣ: ಸಿಕ್ಕಿಬಿದ್ದ ಹೈಟೆಕ್ ಕಿಲಾಡಿಗಳ ಹಿನ್ನೆಲೆ ನೋಡಿ ಪೊಲೀಸರೇ ಶಾಕ್!
AI ಡೀಪ್‌ಫೇಕ್ ಫೋಟೋ-ವಿಡಿಯೋ ಸೃಷ್ಟಿಸಿದ ಮೂವರು ಸುಶಿಕ್ಷಿತ ಆರೋಪಿಗಳು
Shivaprasad B
| Edited By: |

Updated on:Jun 20, 2026 | 12:04 PM

Share

ಬೆಂಗಳೂರು, ಜೂ.20: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿ ವೈರಲ್ ಮಾಡಿದ್ದ ಸೈಬರ್ ಅಪರಾಧಿಗಳನ್ನು ಬೆಂಗಳೂರಿನ ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದು, ಆರೋಪಿಗಳ ಆಘಾತಕಾರಿ ಹಿನ್ನೆಲೆ ಈಗ ಬೆಳಕಿಗೆ ಬಂದಿದೆ. ಬಂಧಿತರೆಲ್ಲರೂ ಸುಶಿಕ್ಷಿತರು ಮತ್ತು ಸಮಾಜದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವರಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಗಲಕೋಟೆ ನಿವಾಸಿ ರವಿಕುಮಾರ್ (24), ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ರಂಜಿತ್ ಕುಮಾರ್ (25) ಮತ್ತು ಮೂಲತಃ ತೀರ್ಥಹಳ್ಳಿಯವರಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ ಚಂದ್ರಕಾಂತ್ (33) ಎಂದು ಗುರುತಿಸಲಾಗಿದೆ. ಒಬ್ಬರ ಹಿನ್ನಲೆ ನೋಡಿ ಪೊಲೀಸರಿಗೆ ಶಾಕ್ ಆಗಿದೆ. ಈ ಪ್ರಕರಣದ ಮೊದಲ ಆರೋಪಿ ರವಿ ಕುಮಾರ್ ಬಿಎಸ್‌ಸಿ ನರ್ಸಿಂಗ್ ಮುಗಿಸಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಇತ್ತೀಚೆಗಷ್ಟೇ ಯೂಟ್ಯೂಬ್‌ನಿಂದ ಮೊದಲ ಗಳಿಕೆ (ಹಣ) ಪಡೆದಿದ್ದ ಈತನಿಗೆ ಸುಲಭವಾಗಿ ಹಣ ಸಂಪಾದಿಸುವ ಆಸೆ ಹುಟ್ಟಿತ್ತು. ಅಂದಿನಿಂದ ವೀಕ್ಷಣೆ (Views) ಹೆಚ್ಚಿಸಿಕೊಳ್ಳಲು ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲು ಶುರು ಮಾಡಿದ್ದನು ಎಂದು ಹೇಳಲಾಗಿದೆ.

ಇನ್ನು ಎರಡನೇ ಆರೋಪಿ ರಂಜಿತ್ ಕುಮಾರ್, ವಾರ್ಷಿಕ 20 ಲಕ್ಷ ರೂಪಾಯಿ ಭಾರಿ ಸಂಬಳದ ಪ್ಯಾಕೇಜ್ ಹೊಂದಿದ್ದ ಈತ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ತಂತ್ರಜ್ಞಾನದ ಜ್ಞಾನವಿದ್ದ ಈತ ಕೇವಲ ‘ಫನ್’ (ವಿನೋದ) ಮತ್ತು ಮಜಾ ಮಾಡಲು ಎಲ್ಲಾ ಪ್ರಮುಖ ನಟಿಯರ ಎಐ ಡೀಪ್‌ಫೇಕ್ ವಿಡಿಯೋಗಳನ್ನು ತಯಾರಿಸುತ್ತಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಚಂದ್ರಕಾಂತ್ ಈತ ಬೆಂಗಳೂರಿನ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್ (CA) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದನು. ಕೇವಲ ವಿಕೃತ ಸಂತೋಷ ಮತ್ತು ಮಜಾ ತೆಗೆದುಕೊಳ್ಳಲು ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮಾಡುತ್ತಿದ್ದಾಗಿ ಈತನೂ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಎಐ ವಿಡಿಯೋ ಪ್ರಕರಣ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ

ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಹೈ-ಎಂಡ್ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಎಐ ಆಪ್ ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸಿ ನಟಿಯರ ಮುಖವನ್ನು ಅಶ್ಲೀಲ ವಿಡಿಯೋಗಳಿಗೆ ಎಡಿಟ್ ಮಾಡುತ್ತಿದ್ದರು. ಸದ್ಯ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸೈಬರ್ ಕಮಾಂಡ್ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸುಶಿಕ್ಷಿತರೇ ಇಂತಹ ಸೈಬರ್ ವಿಕೃತಿಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sat, 20 June 26

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?