ಬಾಲಿವುಡ್ ನಿರ್ಮಾಪಕರನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಅಲ್ಲು ಅರ್ಜುನ್; ‘ಶಹಜಾದಾ’ ಚಿತ್ರಕ್ಕೆ ಲಾಭ
ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಹಿಂದಿ ವರ್ಷನ್ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು. ಇದು ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಹಿನ್ನಡೆ ತಂದಿತ್ತು.
ಬಾಲಿವುಡ್ನ ಗೋಲ್ಡ್ಮೈನ್ ನಿರ್ಮಾಣ ಸಂಸ್ಥೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರವನ್ನು (Pushpa Movie) ಹಿಂದಿಯಲ್ಲಿ ರಿಲೀಸ್ ಮಾಡಿ ಒಳ್ಳೆಯ ಲಾಭ ಕಂಡಿತ್ತು. ಈ ಸಿನಿಮಾ ಬಾಲಿವುಡ್ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿತ್ತು. ಈಗ ‘ಅಲ ವೈಕುಂಠಪುರಮುಲೋ’ (Ala Vaikunthapurramuloo) ಸಿನಿಮಾನ ಥಿಯೇಟರ್ನಲ್ಲಿ ರಿಲೀಸ್ ಮಾಡಲು ಗೋಲ್ಡ್ಮೈನ್ ಪ್ಲ್ಯಾನ್ ಮಾಡಿದ್ದರು. ಬಳಿಕ ಅದು ಕ್ಯಾನ್ಸಲ್ ಆಗಿತ್ತು. ಈ ಚಿತ್ರವನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ, ಈಗ ಅದು ಕೂಡ ರದ್ದಾಗಿದೆ. ಇದಕ್ಕೆ ಅಲ್ಲು ಅರ್ಜುನ್ ಕಾರಣ ಎನ್ನಲಾಗಿದೆ.
‘ಅಲ ವೈಕುಂಠಪುರಮುಲೋ’ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಹಿಂದಿ ಮಂದಿ ಅದನ್ನು ‘ಶಹಜಾದಾ’ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರಕ್ಕೆ ಹಿಂದಿಯಲ್ಲಿ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಹಿಂದಿ ವರ್ಷನ್ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು. ಇದು ಕಾರ್ತಿಕ್ ಆರ್ಯನ್ ಚಿತ್ರಕ್ಕೆ ಹಿನ್ನಡೆ ತಂದಿತ್ತು.
ಆದರೆ, ಇದನ್ನು ಅಲ್ಲು ಅರ್ಜುನ್ ಅವರು ತಡೆದಿದ್ದಾರೆ. ‘ಅಲ ವೈಕುಂಠಪುರಮುಲೋ’ ರಿಲೀಸ್ ಮಾಡಲು ಮುಂದಾದ ಗೋಲ್ಡ್ಮೈನ್ ಕಂಪನಿಯವರ ಜತೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ‘ಶೆಹಜಾದ’ ತಂಡದವರು ಈ ಬಗ್ಗೆ ಅಲ್ಲು ಅರ್ಜುನ್ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಅವರೇ ಮಾತುಕತೆಗೆ ಇಳಿದಿದ್ದಾರೆ. ಈ ಮಾತುಕತೆ ಯಶಸ್ವಿ ಆಗಿದೆ.
ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್ನಲ್ಲಿ ಅಲ್ಲು ಅರ್ಜುನ್-ರಾಮ್ ಚರಣ್ ಮಧ್ಯೆ ಫೈಟ್?
‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಒಳ್ಳೆಯ ಕಮಾಯಿ ಮಾಡಿದೆ. ಇದರ ಜತೆ ‘ಶಹಜಾದ’ ಬರುತ್ತಿದೆ. ಈ ಸಂದರ್ಭದಲ್ಲಿ ‘ಅಲ ವೈಕುಂಠಪುರಮುಲೋ’ ಸಿನಿಮಾದ ಹಿಂದಿ ವರ್ಷನ್ ರಿಲೀಸ್ ಮಾಡಿದರೆ ಹೆಚ್ಚು ವೀಕ್ಷಣೆ ಪಡೆಯಬಹುದು ಅನ್ನೋದು ಗೋಲ್ಡ್ಮೈನ್ ಅವರ ಆಲೋಚನೆ ಆಗಿತ್ತು. ಆದರೆ, ಈಗ ಅದು ವಿಫಲ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ