ಹಿಂದೂ ಧರ್ಮಕ್ಕೆ ಮತಾಂತರಗೊಂಡ ಅಲಿ ಅಕ್ಬರ್ ಹೆಸರು ಬದಲಾವಣೆ; ನಿರ್ದೇಶಕನ ಹೊಸ ಹೆಸರೇನು?

ಜ.13ರಂದು ಅಲಿ ಅಕ್ಬರ್ ಅವರು ಮತಾಂತರ ಆಗಿದ್ದಾರೆ. ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್​ ವಿಶ್ವನಾಥ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಅಲಿ ಅಕ್ಬರ್ ಹೆಸರು ಬದಲಾವಣೆ; ನಿರ್ದೇಶಕನ ಹೊಸ ಹೆಸರೇನು?
ಹಿಂದೂ ಧರ್ಮಕ್ಕೆ ಮತಾಂತರಗೊಂಡ ಅಲಿ ಅಕ್ಬರ್


ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ (Ali Akbar) ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಕೆಲವೇ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಆ ಮಾತಿನಂತೆಯೇ ಅವರೀಗ ನಡೆದುಕೊಂಡಿದ್ದಾರೆ. ಅಧಿಕೃತವಾಗಿ ಹಿಂದೂ (Hinduism) ಧರ್ಮಕ್ಕೆ ಅವರು ಕನ್ವರ್ಟ್​ ಆಗಿದ್ದಾರೆ. ಕೆಲವು ಮುಸ್ಲಿಮರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರ ಆದ ಬಳಿಕ ಅವರ ಹೆಸರನ್ನೂ ಬದಲಾಯಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮತಾಂತರದ (Conversion) ಸಂದರ್ಭದಲ್ಲಿ ತೆಗೆದ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ನಿರ್ದೇಶಕ ಅಲಿ ಅಕ್ಬರ್ ಅವರ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಮತಾಂತರಕ್ಕೆ ಬಲವಾದ ಕಾರಣ ಇದೆ. ಆ ಬಗ್ಗೆ ಅಲಿ ಅಕ್ಬರ್ ಅವರು ಈ ಮೊದಲೇ ಸ್ಪಷ್ಟವಾಗಿ ಮಾತನಾಡಿದ್ದರು. 

ಜ.13ರಂದು ಈ ಮತಾಂತರ ನಡೆದಿದೆ ಎನ್ನಲಾಗಿದೆ. ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್​ ವಿಶ್ವನಾಥ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಅವರು, ‘ಇತಿಹಾಸ ತಾನಾಗಿಯೇ ಮರುಕಳಿಸುತ್ತದೆ. ಅಲಿ ಅಕ್ಬರ್​ ಈಗ ರಾಮಸಿಂಹನ್’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಅಂದರೆ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ಅಲಿ ಅಕ್ಬರ್​ ಅವರು ರಾಮಸಿಂಹನ್​ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.

​ಮತಾಂತರಕ್ಕೆ ಕಾರಣ ಏನು?

ಅಲಿ ಅಕ್ಬರ್​ ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ಕಾರಣ ಏನೆಂಬುದನ್ನು ಈ ಹಿಂದೆಯೇ ತಿಳಿಸಿದ್ದರು. ‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತೇವೆ. ಇನ್ನೆಂದೂ ನಾವು ಮುಸ್ಲಿಮರಾಗಿ ಮುಂದುವರಿಯುವುದಿಲ್ಲ’ ಎಂದು ಅವರು ಹೇಳಿದ್ದರು. ಮಿಲಿಟರಿ ಅಧಿಕಾರಿ ಬಿಪಿನ್​ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್​ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್​ ಅವರು ಈ ನಿರ್ಧಾರ ತೆಗೆದುಕೊಂಡರು. ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅವರು ತಿಳಿಸಿದ್ದರು.

ಬಿಪಿನ್​ ರಾವತ್​ ಅವರ ಸಾವಿಗೆ ಅಗೌರವ ಸೂಚಿಸಿದ ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ತಮಗೆ ನಂಬಿಕೆ ಉಳಿದಿಲ್ಲ ಎಂದು ಅಲಿ ಅಕ್ಬರ್​ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಫೇಸ್​ಬುಕ್​ನಲ್ಲಿ ಅವರು ಹಂಚಿಕೊಂಡ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಇದನ್ನೂ ಓದಿ:

ಮಗನನ್ನು ಇಸ್ಲಾಂಗೆ ಮತಾಂತರ ಮಾಡಿಸಿದ ಪತ್ನಿಯನ್ನು ಜೈಲಿಗೆ ಕಳಿಸಿದ ಪತಿ; ಮಹಿಳೆಯ ತಾಯಿಯೂ ಅರೆಸ್ಟ್​​

ಮತಾಂತರ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್, ಹಿಂದೂ ದೇಗುಲಗಳನ್ನು ಸ್ವತಂತ್ರ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ

Click on your DTH Provider to Add TV9 Kannada