AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲೇ ಕಾಣದ ನಿರ್ದೇಶಕನ ಮೇಲೆ ಆಲಿಯಾಗೆ ಅಸಮಾಧಾನ? ಅನ್​ಫಾಲೋ ಮಾಡಿ, ಪೋಸ್ಟ್ ಡಿಲೀಟ್ ಮಾಡಿದ್ರಾ ನಟಿ?

Alia Bhatt | SS Rajamouli: ನಿರ್ದೇಶಕ ರಾಜಮೌಳಿ ಹೆಸರಿಗೆ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆಯಾಗಿದೆ. ಅವರ ಜತೆ ಕೆಲಸ ಮಾಡಲು ತಾರೆಯರು ತುದಿಗಾಲಲ್ಲಿ ನಿಲ್ಲುತ್ತಾರೆ. ಆದರೆ ‘ಆರ್​ಆರ್​ಆರ್​’ ನಾಯಕಿ ಅಲಿಯಾ ಭಟ್​ಗೆ ರಾಜಮೌಳಿ ಮೇಲೆ ಅಸಮಾಧಾನ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಏನಿದು ಸಮಾಚಾರ? ಇಲ್ಲಿದೆ ನೋಡಿ.

ಸೋಲೇ ಕಾಣದ ನಿರ್ದೇಶಕನ ಮೇಲೆ ಆಲಿಯಾಗೆ ಅಸಮಾಧಾನ? ಅನ್​ಫಾಲೋ ಮಾಡಿ, ಪೋಸ್ಟ್ ಡಿಲೀಟ್ ಮಾಡಿದ್ರಾ ನಟಿ?
ಆಲಿಯಾ ಭಟ್, ರಾಜಮೌಳಿ (ಸಂಗ್ರಹ ಚಿತ್ರ)
TV9 Web
| Edited By: |

Updated on: Mar 29, 2022 | 12:55 PM

Share

ಎಸ್​​.ಎಸ್​.ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ವಿಶ್ವಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಚಿತ್ರಕ್ಕೆ ವ್ಯಾಪಕವಾಗಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಲ್ಲದೇ, ಜನರು ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿರುವ ಚಿತ್ರ ಎಲ್ಲಾ ಭಾಷೆಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರಿಂದ ಚಿತ್ರತಂಡ ಖುಷಿಯಾಗಿದೆ. ನಿರ್ದೇಶಕ ರಾಜಮೌಳಿ (SS Rajamouli) ಹಲವು ವರ್ಷ ಪ್ರಯತ್ನ ಹಾಕಿ ಮಾಡಿದ ಚಿತ್ರಗಳು ಅವರ ಕೈಹಿಡಿಯುತ್ತಿವೆ. ಸೋಲೇ ಕಾಣದ ನಿರ್ದೇಶಕ ಎಂಬ ಅವರ ಖ್ಯಾತಿ ಮುಂದುವರೆದಿದೆ. ಆದರೆ ಈ ನಡುವೆ ಚಿತ್ರತಂಡದ ಬಗ್ಗೆ ಗುಸುಗುಸು ಒಂದು ಹರಿದಾಡಿದೆ. ಅದು ಆಲಿಯಾ (Alia Bhatt) ಮುನಿಸಿಗೆ ಸಂಬಂಧಿಸಿದ್ದು! ಹೌದು. ‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಾರೆ ಎಂದು ಘೋಷಣೆಯಾದ ನಂತರ ಉತ್ತರ ಭಾರತದಲ್ಲಿ ಚಿತ್ರಕ್ಕೆ ಮೈಲೇಜ್ ಹೆಚ್ಚಿತ್ತು. ‘ಬಾಹುಬಲಿ’ಯಿಂದ ‘ಆರ್​ಆರ್​ಆರ್​’ ಬಗ್ಗೆ ವಿಶೇಷ ನಿರೀಕ್ಷೆಗಳಿದ್ದರೂ ಕೂಡ ಅಜಯ್ ದೇವಗನ್ ಹಾಗೂ ಆಲಿಯಾ ಚಿತ್ರವನ್ನು ಹಿಂದಿ ಭಾಷಿಕರಿಗೆ ಹತ್ತಿರವಾಗಿಸಿದ್ದರು.

ಆದರೆ ‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ. ದೀರ್ಘ ಅವಧಿಯ ಚಿತ್ರದಲ್ಲಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೆಲವೇ ನಿಮಿಷಗಳು. ಚಿತ್ರವನ್ನು ನೋಡಿದ ಆಲಿಯಾಗೆ ಇದರಿಂದ ಅಸಮಾಧಾನವಾಗಿದೆ ಎನ್ನಲಾಗಿದೆ. ಆಲಿಯಾ ತಮ್ಮ ಇನ್​ಸ್ಟಾಗ್ರಾಂನಿಂದ ‘ಆರ್​ಆರ್​ಆರ್​’ ಕುರಿತ ಕೆಲವು ಪೋಸ್ಟ್​ಗಳನ್ನೂ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದಲ್ಲದೇ ಆಲಿಯಾ ನಿರ್ದೇಶಕ ರಾಜಮೌಳಿಯನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದೂ ವರದಿಯಾಗಿದೆ. ಈ ನಡುವೆ ಆಲಿಯಾ ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್​ರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಚಿತ್ರದ ನಿರ್ದೇಶಕ ರಾಜಮೌಳಿ ಹೆಸರೇ ಇಲ್ಲದಿರುವುದು ಅಭಿಮಾನಿಗಳಿಗೆ ಅಚ್ಚರಿ ತರಿಸಿದೆ.

ಗಾಸಿಪ್​ಗೆ ತುಪ್ಪ ಸುರಿದ ಆಲಿಯಾ ನಡೆ:

ಆಲಿಯಾ ಭಟ್ ನಡೆಗಳು ಕೂಡ ಈ ವಿಚಾರಕ್ಕೆ ಸಾಕಷ್ಟು ತುಪ್ಪ ಸುರಿದಿದೆ. ಚಿತ್ರದ ರಿಲೀಸ್​ಗೂ ಮುನ್ನ ಆಲಿಯಾ ಚಿತ್ರತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದರು. ಆದರೆ ಚಿತ್ರದ ರಿಲೀಸ್ ನಂತರ ಪ್ರಚಾರ ಕಾರ್ಯದಲ್ಲಿ ಆಲಿಯಾ ತೊಡಗಿಸಿಕೊಳ್ಳುತ್ತಿಲ್ಲ. ರಿಲೀಸ್ ನಂತರ ನಡೆದ ದೊಡ್ಡ ಕಾರ್ಯಕ್ರಮವೊಂದರಲ್ಲಿ ಮಾತ್ರ ಆಲಿಯಾ ಹಾಜರಿದ್ದರು. ಅದರ ಹೊರತಾಗಿ ಅವರು ಮತ್ತೆಲ್ಲೂ ಕಾಣಿಸಿಕೊಂಡಿಲ್ಲ.

ಆಲಿಯಾ ಇನ್​ಸ್ಟಾಗ್ರಾಂ ಫೀಡ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಪ್ರಚಾರ ಹಾಗೂ ಆ ಚಿತ್ರದ ಕುರಿತ ಪೋಸ್ಟ್​ಗಳು ಹೆಚ್ಚಿವೆ. ‘ಆರ್​ಆರ್​ಆರ್​’ ಬಗ್ಗೆ ಇರುವುದು ತೀರಾ ಬೆರಳಣಿಕೆಯಷ್ಟು. ನೇರವಾಗಿ ಭಾಗಿಯಾಗಲು ಕಷ್ಟಸಾಧ್ಯವಾದರೆ ಸಾಮಾಜಿಕ ಜಾಲತಾಣಗಳಲ್ಲಾದರೂ ಸಕ್ರಿಯರಾಗಿ ಪ್ರಚಾರ ಮಾಡಬಹುದಲ್ಲ ಎನ್ನುವುದು ಅಭಿಮಾನಿಗಳ ಪ್ರಶ್ನೆ.

ಪೋಸ್ಟ್ ಹಂಚಿಕೊಳ್ಳದ ಹೊರತಾಗಿಯೂ ಆಲಿಯಾ ತಮ್ಮ ಸ್ಟೋರಿಯಲ್ಲಿ ಆಗೊಂದು ಈಗೊಂದು ‘ಆರ್​ಆರ್​ಆರ್​’ ಕುರಿತ ಮಾಹಿತಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ‘ಆರ್​ಆರ್​ಆರ್​’ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆಲಿಯಾ ಮುನಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿದ್ದರೂ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಕಷ್ಟ ಎಂದೂ ಹೇಳಲಾಗುತ್ತಿದೆ. ಕಾರಣ, ಆಲಿಯಾ ‘ಬ್ರಹ್ಮಾಸ್ತ್ರ’ದ ಚಿತ್ರೀಕರಣ ಅಂತಿಮ ಹಂತದಲ್ಲಿತ್ತು. ಇದರಿಂದ ಅವರು ಬ್ಯುಸಿಯಾಗಿರಬಹುದು ಎಂದೂ ಹೇಳಲಾಗುತ್ತಿದೆ. ಕೆಲವು ವಿಮರ್ಶಕರ ಪ್ರಕಾರ, ಆಲಿಯಾ ಬಾಲಿವುಡ್​ನಲ್ಲಿ ಪಾತ್ರ ಪೋಷಣೆಯಿಂದ ಗುರುತಿಸಿಕೊಂಡವರು. ಮಹಿಳಾ ಪ್ರಧಾನ ಚಿತ್ರಗಳಲ್ಲೂ ಅವರು ಕಾಣಿಸಿಕೊಂಡಿದ್ದು, ಅವು ಹಿಟ್ ಕೂಡ ಆಗಿವೆ. ‘ಆರ್​ಆರ್​ಆರ್​’ನಲ್ಲಿ ರಾಜಮೌಳಿ ಆಲಿಯಾ ಪಾತ್ರವನ್ನು ಸಶಕ್ತವಾಗಿ ಕಟ್ಟಿಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಆಲಿಯಾ ನಡೆ ಕೆಲವೊಂದು ಅನುಮಾನ ಹುಟ್ಟಿಸಿರೋದು ಸುಳ್ಳಲ್ಲ. ಇದೇ ಕಾರಣದಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಈ ನಡುವೆ ‘ಆರ್​ಆರ್​ಆರ್​’ ಚಿತ್ರದ ಕಲೆಕ್ಷನ್ 500 ಕೋಟಿ ರೂ ದಾಟಿದೆ. ಚಿತ್ರದ ಹಿಂದಿ ಅವತರಣಿಕೆಯ ಗಳಿಕೆಯ 100 ಕೋಟಿ ಕ್ಲಬ್ ಆಸುಪಾಸಿನಲ್ಲಿದೆ.

ಇದನ್ನೂ ಓದಿ:

Ranjani Raghavan: ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚುವ ‘ಕನ್ನಡತಿ’; ರಂಜನಿ ರಾಘವನ್​ಗೆ ಹುಟ್ಟುಹಬ್ಬದ ಸಂಭ್ರಮ

Vikrant Rona Teaser: ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ ಘೋಷಣೆ; ಯುಗಾದಿ ಕಿಚ್ಚನ ಅಭಿಮಾನಿಗಳಿಗೆ ಮತ್ತಷ್ಟು ವಿಶೇಷ!

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು