Allu Arjun Birthday: ಅಲ್ಲು ಅರ್ಜುನ್​​ಗೆ ಜನ್ಮದಿನ; ಅಭಿಮಾನಿಗಳಿಗೆ ಸಿಕ್ತು ಎರಡೆರಡು ಗಿಫ್ಟ್

ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಅಲ್ಲು ಅರ್ಜುನ್ ಬರ್ತ್​​ಡೇನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ.

Allu Arjun Birthday: ಅಲ್ಲು ಅರ್ಜುನ್​​ಗೆ ಜನ್ಮದಿನ; ಅಭಿಮಾನಿಗಳಿಗೆ ಸಿಕ್ತು ಎರಡೆರಡು ಗಿಫ್ಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 08, 2023 | 6:30 AM

ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಇಂದು (ಏಪ್ರಿಲ್ 8) ಜನ್ಮದಿನದ ಸಂಭ್ರಮ. ಅವರಿಗೆ ಈಗ 41 ವರ್ಷ ವಯಸ್ಸು. ಅಲ್ಲು ಅರ್ಜುನ್​ಗೆ ಅಭಿಮಾನಿಗಳು, ಕುಟುಂಬದವರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ಎರಡೆರಡು ಗಿಫ್ಟ್ ಸಿಕ್ಕಿದೆ. ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಅಲ್ಲು ಅರ್ಜುನ್ ಬರ್ತ್​​ಡೇನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಹಾಗಾದರೆ ಅವರ ಅಭಿಮಾನಿಗಳಿಗೆ ಸಿಕ್ಕ ಗಿಫ್ಟ್ ಏನು? ಆ ಬಗ್ಗೆ ಇಲ್ಲಿದೆ ಉತ್ತರ.

‘ಪುಷ್ಪ 2’ ಗ್ಲಿಂಪ್ಸ್ ರಿಲೀಸ್

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಗ್ಲಿಂಪ್ಸ್ ಮಾರ್ಚ್​ 7ರಂದು ರಿಲೀಸ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲು ಅರ್ಜುನ್​ ಬರ್ತ್​ಡೇ ಸಂದರ್ಭದಲ್ಲಿ ‘ಪುಷ್ಪ 2’ ಬಗ್ಗೆ ಅಪ್​ಡೇಟ್ ಸಿಕ್ಕಿರುವುದರಿಂದ ಫ್ಯಾನ್ಸ್ ಖುಷಿಯಾಗಿದ್ದಾರೆ.

‘ಪುಷ್ಪ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಈಗ ಅವರ ಸಂಪೂರ್ಣ ಗಮನ ‘ಪುಷ್ಪ 2’ ಮೇಲಿದೆ. ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ ಅನ್ನೋದಕ್ಕೆ ಮೊದಲ ಗ್ಲಿಂಪ್ಸ್​​ನಿಂದ ಸಾಕ್ಷಿ ಸಿಕ್ಕಿದೆ.

ಇದನ್ನೂ ಓದಿ: Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​

ದೇಶಮುದುರು ರಿ-ರಿಲೀಸ್

ಸ್ಟಾರ್ ನಟರು ಅಭಿನಯಿಸಿದ ಸಿನಿಮಾಗಳನ್ನು ಕೆಲವರು ಥಿಯೇಟರ್​​ನಲ್ಲಿ ಮಿಸ್ ಮಾಡಿಕೊಂಡಿರುತ್ತಾರೆ. ಅಂಥವರಿಗಾಗಿ ಸಿನಿಮಾ ರಿ-ರಿಲೀಸ್ ಮಾಡಲಾಗುತ್ತದೆ. ಈಗ ಅಲ್ಲು ಅರ್ಜುನ್ ಬರ್ತ್​ಡೇ ಪ್ರಯಕ್ತ ಅವರ ನಟನೆಯ ‘ದೇಶಮುದುರು’ ಚಿತ್ರ ರಿ-ರಿಲೀಸ್ ಮಾಡಲಾಗಿದೆ. ಈ ಚಿತ್ರ 2007ರಲ್ಲಿ ತೆರೆಗೆ ಬಂದಿತ್ತು. ರಿ ರಿಲೀಸ್ ಆದ ಚಿತ್ರವನ್ನು ಥಿಯೇಟರ್​ನಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ದೇಶಮುದುರು’ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದರೆ, ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದರು.

ರಿಲೀಸ್ ಆಗಲಿದೆ ಹೊಸ ಸಿನಿಮಾ ಟೈಟಲ್?

ಅಲ್ಲು ಅರ್ಜುನ್ ಅವರು ಹಿಂದಿ ನಿರ್ಮಾಪಕ ಭೂಷಣ್ ಕುಮಾರ್ ಜೊತೆ ಕೈ ಜೋಡಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಟೈಟಲ್ ರಿವೀಲ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ