ಅಲ್ಲು ಅರ್ಜುನ್ ಬಗ್ಗೆ ಸಿಕ್ತು ಬಿಗ್ ಅಪ್​ಡೇಟ್; ಈ ಬಾರಿ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬ

ಅಲ್ಲು ಅರ್ಜುನ್ ಅವರಿಗೆ ಪ್ರಖ್ಯಾತ ಫಿಟ್ನೆಸ್ ಟ್ರೇನರ್ ಲಾಯ್ಡ್ ಸ್ಟೀವನ್ಸ್ ಅವರು ವರ್ಕೌಟ್ ಮಾಡಿಸುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿರುವ ಫೋಟೋ ವೈರಲ್ ಆಗಿದೆ. ಅಟ್ಲಿ ಜೊತೆಗಿನ ಹೊಸ ಸಿನಿಮಾಗಾಗಿ ಅಲ್ಲು ಅರ್ಜುನ್ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಮಹೇಶ್ ಬಾಬು, ಜೂನಿಯರ್ ಎನ್​ಟಿಆರ್ ಮುಂತಾದವರಿಗೆ ಲಾಯ್ಡ್ ಸ್ಟೀವನ್ಸ್ ಟ್ರೇನಿಂಗ್ ನೀಡಿದ್ದರು.

ಅಲ್ಲು ಅರ್ಜುನ್ ಬಗ್ಗೆ ಸಿಕ್ತು ಬಿಗ್ ಅಪ್​ಡೇಟ್; ಈ ಬಾರಿ ಅಭಿಮಾನಿಗಳಿಗೆ ನಿಜಕ್ಕೂ ಹಬ್ಬ
Allu Arjun, Lloyd Stevens

Updated on: May 04, 2025 | 7:10 AM

ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲಂತಹ ಕಲಾವಿದ ಅಲ್ಲು ಅರ್ಜುನ್. ಈಗಾಗಲೇ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆ ಅವರದ್ದು. ನಟನೆ ಮಾತ್ರವಲ್ಲದೇ ಬಾಡಿ ಟ್ರಾನ್ಸ್​ಫಾರ್ಮೇಷನ್​ನಲ್ಲೂ ಅಲ್ಲು ಅರ್ಜುನ್ (Allu Arjun) ಹಿಂದೆ ಬಿಳುವವರಲ್ಲ. ಸಿಕ್ಸ್ ಪ್ಯಾಕ್ ಮಾಡಿದ ಮೊದಲ ದಕ್ಷಿಣ ಭಾರತದ ಹೀರೋ ಎಂಬ ಖ್ಯಾತಿ ಕೂಡ ಅವರಿಗೆ ಇದೆ. ಈ ವಿಚಾರದಲ್ಲಿ ಅವರು ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಅದಕ್ಕಾಗಿ ಪ್ರಖ್ಯಾತ ಫಿಟ್ನೆಸ್ ಟ್ರೇನರ್ ಲಾಯ್ಡ್ ಸ್ಟೀವನ್ಸ್ (Lloyd Stevens) ಅವರನ್ನು ಅಲ್ಲು ಅರ್ಜುನ್​ ನೇಮಿಸಿಕೊಂಡಿದ್ದಾರೆ.

ಲಾಯ್ಡ್ ಸ್ಟೀವನ್ಸ್ ಅವರಿಗೆ ತುಂಬ ಅನುಭವ ಇದೆ. ಮಹೇಶ್ ಬಾಬು, ಜೂನಿಯರ್ ಎನ್​ಟಿಆರ್ ಮುಂತಾದ ನಟರಿಗೆ ಅವರು ಟ್ರೇನಿಂಗ್ ನೀಡಿದ್ದಾರೆ. ಜೂನಿಯರ್ ಎನ್​ಟಿಆರ್​ ಅವರು ‘ಆರ್​ಆರ್​ಆರ್​’ ಸಿನಿಮಾದಲ್ಲಿ ಕಟ್ಟುಮಸ್ತಾಗಿ ಕಾಣಲು ಲಾಯ್ಡ್ ಸ್ಟೀವನ್ಸ್ ಅವರ ತರಬೇತಿಯೇ ಕಾರಣ. ಈಗ ಅಲ್ಲು ಅರ್ಜುನ್ ಕೂಡ ಲಾಯ್ಡ್ ಸ್ಟೀವನ್ಸ್ ಸಹಾಯ ಪಡೆಯುತ್ತಿದ್ದಾರೆ. ಮುಂದಿನ ಸಿನಿಮಾಗಾಗಿ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್ ಮಾಡಲು ಮುಂದಾಗಿದ್ದಾರೆ.

ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ಸಕಲ ತಯಾರಿ ನಡೆದಿದೆ. ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಮೂರು ಪಾತ್ರ ನಿಭಾಯಿಸಲಿದ್ದಾರೆ. ಆ ಪೈಕಿ ಒಂದು ಪಾತ್ರಕ್ಕಾಗಿ ಅವರು ದೇಹವನ್ನು ಹುರಿಗೊಳಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಲಾಯ್ಡ್ ಸ್ಟೀವನ್ಸ್ ಜೊತೆ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ
ಹೆಸರು ಬದಲಾವಣೆ ಮಾಡಿಕೊಳ್ಳಲಿರುವ ಅಲ್ಲು ಅರ್ಜುನ್, ಕಾರಣವೇನು?
ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಅಲ್ಲು ಅರ್ಜುನ್; ಮುಂದಿದೆ ದೊಡ್ಡ ಸವಾಲು
‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಮಾಹಿತಿ ಕೊಟ್ಟ ನಿರ್ಮಾಪಕ
ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲುಗೆ ಶಿಫ್ಟ್

ಲಾಯ್ಡ್ ಸ್ಟೀವನ್ಸ್ ಅವರು ಅಲ್ಲು ಅರ್ಜುನ್ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಈ ಅಪ್​​ಡೇಟ್ ನೀಡಿದ್ದಾರೆ. ಲೋಡಿಂಗ್, ಟ್ರಾನ್ಸ್​ಫಾರ್ಮೇಷನ್​ ಎಂದು ಅವರು ಹ್ಯಾಶ್ಟ್ಯಾಗ್ ನೀಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹೊಸ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರನ್ನು ಕಟ್ಟುಮಸ್ತಾದ ಗೆಟಪ್​ನಲ್ಲಿ ನೋಡುವುದು ಫ್ಯಾನ್ಸ್ ಪಾಲಿಗೆ ಹಬ್ಬವೇ ಸರಿ.

ಇದನ್ನೂ ಓದಿ: 20 ವರ್ಷಗಳ ಹಿಂದೆ ನಟಿ ಮಾಡಿದ ಕುಹಕದ ಮಾತಿನಿಂದ ಸಿಕ್ಸ್ ಪ್ಯಾಕ್​ ಮಾಡಿದ್ದ ಅಲ್ಲು ಅರ್ಜುನ್

ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅವರು ಮೂರು ಪಾತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಇದು ಚಾಲೆಂಜಿಂಗ್ ಆಗಿದೆ. ಅಲ್ಲದೇ, ‘ಪುಷ್ಪ 2’ ಸಿನಿಮಾದ ಗೆಲುವಿನ ಬಳಿಕ ಕೈಗೆತ್ತಿಕೊಂಡ ಸಿನಿಮಾ ಎಂಬ ಕಾರಣದಿಂದಲೂ ಫ್ಯಾನ್ಸ್ ನಿರೀಕ್ಷೆ ಜಾಸ್ತಿ ಇದೆ. ಅದಕ್ಕೆ ತಕ್ಕಂತೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಅವರು ಜಿಮ್​​ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.