‘ಪುಷ್ಪ’ ಸಿನಿಮಾ (Pushpa Movie) ತೆರೆಗೆ ಬಂದು ವರ್ಷ ಕಳೆಯುತ್ತಾ ಬಂದಿದೆ. ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಸೀಕ್ವೆಲ್ಗೆ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ, ಚಿತ್ರದ ಕೆಲಸಗಳು ವಿಳಂಬ ಆದವು. ‘ಪುಷ್ಪ’ ಸೂಪರ್ ಹಿಟ್ ಆದ ಕಾರಣ ‘ಪುಷ್ಪ 2’ ಚಿತ್ರದ ಕಥೆಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ. ಸ್ಕ್ರಿಪ್ಟ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಹೀಗಾಗಿ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಕ್ಕೆ ಒಂದು ವರ್ಷ ಬೇಕಾಗಿದೆ. ಈ ಮಧ್ಯೆ ‘ಪುಷ್ಪ 2’ (Pushpa 2) ಚಿತ್ರದ ವಿರುದ್ಧ ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳು ಬೀದಿಗೆ ಇಳಿದಿದ್ದಾರೆ. ಚಿತ್ರದ ಬಗ್ಗೆ ಅಪ್ಡೇಟ್ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
‘ಪುಷ್ಪ 2’ ಚಿತ್ರಕ್ಕೆ ಕೆಲ ತಿಂಗಳ ಹಿಂದೆ ಮುಹೂರ್ತ ನಡೆದಿತ್ತು. ಆ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರು ಇರಲಿಲ್ಲ. ಅವರು ವಿದೇಶಿ ಪ್ರವಾಸದಲ್ಲಿ ಇದ್ದ ಕಾರಣ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ. ಈಗ ‘ಪುಷ್ಪ 2’ ಚಿತ್ರದ ಶೂಟಿಂಗ್ ಶುರುವಾಗಿದೆ. ಅಲ್ಲು ಅರ್ಜುನ್ ಅವರು ಶೂಟಿಂಗ್ನಲ್ಲಿ ಈವರೆಗೆ ಭಾಗಿ ಆಗಿಲ್ಲ ಎನ್ನಲಾಗಿದೆ. ಡಿಸೆಂಬರ್ ವೇಳೆಗೆ ಅವರು ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಕಾರಣಕ್ಕೆ ಫ್ಯಾನ್ಸ್ ಬೀದಿಗೆ ಇಳಿದಿದ್ದಾರೆ.
ಪ್ರತಿಭಟನೆ ನಡೆಸಿರುವ ಅಲ್ಲು ಅರ್ಜುನ್ ಫ್ಯಾನ್ಸ್, ‘ನಮಗೆ ಪುಷ್ಪ 2 ಚಿತ್ರದ ಅಪ್ಡೇಟ್ ಬೇಕು’ ಎಂದು ಬ್ಯಾನರ್ ಹಿಡಿದು ನಿಂತಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ. ಯುಎಇ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಮೊದಲಾದ ಕಡೆಗಳಲ್ಲಿ ಈ ಪ್ರತಿಭಟನೆ ನಡೆದಿದೆ.
After the success of #PushpaTheRise , the cult of restless #AlluArjun fans have taken to the streets asking for an update on the sequel! This rage amongst fans is absolutely fantastic, a phenomena never witnessed before! The fervour and the excitement in their voices was loud.. pic.twitter.com/Ayu1F4piBj
— Ramesh Bala (@rameshlaus) November 15, 2022
ಇದನ್ನೂ ಓದಿ: ‘ಪುಷ್ಪ 2’ ರಿಲೀಸ್ ವಿಚಾರದಲ್ಲಿ ‘ಕೆಜಿಎಫ್ 2’ ಹಾದಿಯನ್ನೇ ಅನುಸರಿಸಿದ ನಿರ್ದೇಶಕ ಸುಕುಮಾರ್?
‘ಪುಷ್ಪ’ ಸಿನಿಮಾ 300 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಬಾಲಿವುಡ್ ಒಂದರಲ್ಲೇ ಈ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತ್ತು. ಈ ಕಾರಣಕ್ಕೆ ಸೀಕ್ವೆಲ್ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರ 2024ರ ಏಪ್ರಿಲ್ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ತಂಡ ಹೆಚ್ಚಿನ ಸಮಯ ಮೀಸಲಿಡುತ್ತಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಇನ್ನೂ ಒಂದೂವರೆ ವರ್ಷ ಕಾಯಲೇಬೇಕಿದೆ.