‘ಡಿಸಿ’ ಸಿನಿಮಾಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಮೆಚ್ಚುಗೆ: ಹೆಚ್ಚಾಯಿತು ಕ್ರೇಜ್

ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರು ಹೀರೋ ಆಗಿ ನಟಿಸಿರುವ ‘ಡಿಸಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ತಮಿಳು ಹಾಗೂ ತೆಲುಗು ಮಾರುಕಟ್ಟೆಯಲ್ಲಿ ಈ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸ್ಟಾರ್ ಹೀರೋಗಳು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

‘ಡಿಸಿ’ ಸಿನಿಮಾಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಮೆಚ್ಚುಗೆ: ಹೆಚ್ಚಾಯಿತು ಕ್ರೇಜ್
Wamiqa Gabbi, Lokesh Kanagaraj

Updated on: Aug 17, 2026 | 10:09 PM

ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ನಾಯಕನಾಗಿ ನಟಿಸಿರುವ ‘ಡಿಸಿ’ (DC) ಸಿನಿಮಾಗೆ ಪ್ರೇಕ್ಷಕರಿಂದ ಹಾಗೂ ಚಿತ್ರರಂಗದ ಪ್ರಮುಖರಿಂದ ಪ್ರಶಂಸೆ ಸಿಗುತ್ತಿದೆ. ಅರುಣ್ ಮಾದೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ಲೋಕೇಶ್ ಕನಗರಾಜ್ (Lokesh Kanagaraj) ಹಾಗೂ ವಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಸಿದ್ದ ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಇದನ್ನು ನಿರ್ಮಿಸಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಿರುವ ತೆಲುಗು ಚಿತ್ರರಂಗದ ಸೂಪರ್‌ ಸ್ಟಾರ್‌ಗಳಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ (Allu Arjun) ಸಿನಿಮಾವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಸಿನಿಮಾ ವೀಕ್ಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಮಹೇಶ್ ಬಾಬು, ‘ಸಿನಿಮಾ ತುಂಬಾ ಒರಿಜಿನಲ್ ಆಗಿದೆ ಹಾಗೂ ಅತ್ಯುತ್ತಮವಾಗಿ ಮೂಡಿಬಂದಿದೆ. ಪ್ರತಿಯೊಂದು ಸನ್ನಿವೇಶವೂ ಅದ್ಭುತವಾಗಿದೆ. ಚಿತ್ರತಂಡಕ್ಕೆ ನನ್ನ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಮಹೇಶ್ ಬಾಬು ಅವರ ಈ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ನೀಡಿದ್ದು, ಬಾಕ್ಸ್ ಆಫೀಸ್ ಗಳಿಕೆಗೂ ಪೂರಕವಾಗಿದೆ.

ಪ್ರಸ್ತುತ ‘ರಾಕಾ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್, ಮುಂಬರುವ ದಿನಗಳಲ್ಲಿ ಲೋಕೇಶ್ ಕನಗರಾಜ್ ನಿರ್ದೇಶನದಲ್ಲೂ ನಟಿಸಲಿದ್ದಾರೆ. ಇದೀಗ ನಟನಾಗಿ ಲೋಕೇಶ್ ಅವರ ಮೊದಲ ಸಿನಿಮಾವನ್ನು ವೀಕ್ಷಿಸಿರುವ ಅಲ್ಲು ಅರ್ಜುನ್, ಇದನ್ನು ‘ತಮಿಳು ಕ್ಲಾಸಿಕ್’ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಮ್ಮ ವಿಮರ್ಶೆಯನ್ನು ಅವರು ಹಂಚಿಕೊಂಡಿದ್ದಾರೆ.

‘ಸಿನಿಮಾ ಪ್ರೇಮಿಗಳು ಖಂಡಿತವಾಗಿಯೂ ನೋಡಲೇಬೇಕಾದ ಚಿತ್ರವಿದು. ಅರ್ಥಮಾಡಿಕೊಳ್ಳುವವರಿಗೆ ಇದೊಂದು ಕಾವ್ಯದಂತೆ ಕಾಣಿಸುತ್ತದೆ’ ಎಂದು ಹೊಗಳಿರುವ ಅಲ್ಲು ಅರ್ಜುನ್ ಅವರು ನಿರ್ದೇಶಕ ಅರುಣ್ ಮಾದೇಶ್ವರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಕೆಲಸಕ್ಕೆ ತಲೆಬಾಗಿದ್ದಾರೆ. ಅನಿರುದ್ಧ್ ಅವರನ್ನು ‘ಸಂಗೀತದ ಮಾಸ್ಟರ್’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ನಟನೆಯಲ್ಲಿ ಸಕ್ಸಸ್ ಕಂಡರೂ ಬೇಸರದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್: ಯಾಕೆ ಗೊತ್ತಾ?

ನಟನೆಯಲ್ಲಿ ಮಿಂಚಿರುವ ವಮಿಕಾ ಗಬ್ಬಿ ಹಾಗೂ ಲೋಕೇಶ್ ಕನಗರಾಜ್ ಅವರ ಅಭಿನಯಕ್ಕೂ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಂದ ಸಿಕ್ಕ ಈ ಪ್ರಶಂಸೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿರುವ ನಟಿ ವಮಿಕಾ ಗಬ್ಬಿ, ‘ಕಲೆಯ ಮೇಲಿರುವ ನಿಮ್ಮ ಶ್ರದ್ಧೆ ನಮ್ಮಂತವರಿಗೆ ಸ್ಫೂರ್ತಿ. ನಮ್ಮ ಸಿನಿಮಾದ ಬಗ್ಗೆ ನೀವು ಬರೆದ ಮಾತುಗಳನ್ನು ಓದಿ ಹೃದಯ ತುಂಬಿಬಂತು, ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us