AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದಲ್ಲ 20 ಕೋಟಿ ರೂಪಾಯಿ ಕೊಡಬೇಕು’; ಅಲ್ಲು ಅರ್ಜುನ್​ಗೆ ಸಚಿವನ ಆಗ್ರಹ

ಸಂಧ್ಯಾ ಥಿಯೇಟರ್​ನಲ್ಲಿ 'ಪುಷ್ಪ 2' ಪ್ರೀಮಿಯರ್​ ಸಮಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ, ತೆಲಂಗಾಣ ಸಿನಿಮಾಟೊಗ್ರಫಿ ಸಚಿವರು ಮೃತರ ಕುಟುಂಬಕ್ಕೆ 20 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅಲ್ಲು ಅರ್ಜುನ್ ಮತ್ತು ಚಿತ್ರ ನಿರ್ಮಾಪಕರ ಮೇಲೆ ಒತ್ತಡ ಹೇರಿದ್ದಾರೆ.

‘ಒಂದಲ್ಲ 20 ಕೋಟಿ ರೂಪಾಯಿ ಕೊಡಬೇಕು’; ಅಲ್ಲು ಅರ್ಜುನ್​ಗೆ ಸಚಿವನ ಆಗ್ರಹ
ಕೊಮಿರೆಡ್ಡಿ-ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Dec 23, 2024 | 12:47 PM

Share

ಸಂಧ್ಯಾ ಥಿಯೇಟರ್​ನಲ್ಲಿ ‘ಪುಷ್ಪ 2’ ಪ್ರೀಮಿಯರ್​ಗೆ ಅಲ್ಲು ಅರ್ಜುನ್ ಬಂದ ಸಮಯದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಿಂದ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಬಂಧನಕ್ಕೂ ಒಳಗಾಗಿದ್ದರು. ಅಲ್ಲು ಅರ್ಜುನ್ ಅವರು ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದರು. ಹೀಗಿರುವಾಗಲೇ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ ಹೊಸ ಬೇಡಿಕೆ ಇಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲು ಅರ್ಜುನ್ ಮನೆಯ ಎದುರು ಪ್ರತಿಭಟನೆ ನಡೆದಿದೆ. ಅಲ್ಲು ಅರ್ಜುನ್ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್ ನಿವಾಸದ ಮೇಲೆ ದಾಳಿ ನಡೆದಿದೆ. ಈ ದಾಳಿ ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ದಾಳಿ ಬೆನ್ನಲ್ಲೇ ಮಾತನಾಡಿರುವ ಕೊಮಟಿ ರೆಡ್ಡಿ ಅವರು 20 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

‘ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಅವರು ಈ ಕಲೆಕ್ಷನ್​ನಲ್ಲಿ 20 ಕೋಟಿ ರೂಪಾಯಿ ಹಣವನ್ನು ಕುಟುಂಬಕ್ಕೆ ನೀಡಬಹುದು. ಈ ಮೂಲಕ ಸಂತಸ್ತ ಕುಟುಂಬಕ್ಕೆ ಸಹಾಯ ಮಾಡಬಹುದು’ ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

‘ಅಲ್ಲು ಅರ್ಜುನ್ ಬಳಿ ಥಿಯೇಟರ್​ ಬಳಿ ಬರಬಾರದು ಎಂದಿತ್ತು. ಆದಾಗ್ಯೂ ಅವರು ಬಂದರು. ಅವರು ಕಾರಿನ ಸನ್​ರೂಫ್ ಬಳಿ ಬಂದು ಕೈ ಬೀಸಿದರು. ಇದರಿಂದ ಸಾಕಷ್ಟು ಜನರು ಸೇರುವಂತೆ ಆಯಿತು. ಇದರಿಂದ ಸಾವು ಸಂಭವಿಸಿತು. ಈ ಘಟನೆ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಮಾಹಿತಿ ನೀಡಲಾಯಿತು. ಆದಾಗ್ಯೂ ಅಲ್ಲು ಅರ್ಜುನ್ ಅವರು ಸಿನಿಮಾ ನೋಡುವುದನ್ನು ಮುಂದುವರಿಸಿದರು. ಇದು ನಿರ್ಲಕ್ಷ್ಯದ ಸೂಚನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ದಾಳಿ ಆಗುತ್ತಿದ್ದಂತೆ ಮನೆ ಬಿಟ್ಟು ತೆರಳಿದ ಅಲ್ಲು ಅರ್ಜುನ್ ಮಕ್ಕಳು

‘ಸಿನಿಮಾ 2000 ಕೋಟಿ ರೂಪಾಯಿ ಗಳಿಸಿದೆ, 3000 ಕೋಟಿ ರೂಪಾಯಿ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರ ಕುಟುಂಬಕ್ಕೆ 20 ಕೋಟಿ ರೂಪಾಯಿ ಕೊಡಬಹುದಲ್ಲ. ಇದು ನನ್ನ ಬೇಡಿಕೆ. ಅಲ್ಲು ಅರ್ಜುನ್ ಹಾಗೂ ಸಿನಿಮಾ ನಿರ್ಮಾಪಕರು 20 ಕೋಟಿ ರೂಪಾಯಿ ಕೊಡಬೇಕು’ ಎಂದು ಕೊಮಟಿ ರೆಡ್ಡಿ ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.