Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಟ್ರೈಲರ್ ಅವಧಿ ಎಷ್ಟು? ಹೇಗಿರಲಿದೆ ಗ್ರ್ಯಾಂಡ್ ಇವೆಂಟ್?

Pushpa 2: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಭಾರತೀಯ ಚಿತ್ರರಂಗದ ಈಗಿನ ಅತ್ಯಂತ ನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಟ್ರೈಲರ್ ಇಂದು (ನವೆಂಬರ್ 17) ಕ್ಕೆ ಬಿಹಾರದ ಪಾಟ್ನಾನಲ್ಲಿ ಬಲು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

‘ಪುಷ್ಪ 2’ ಟ್ರೈಲರ್ ಅವಧಿ ಎಷ್ಟು? ಹೇಗಿರಲಿದೆ ಗ್ರ್ಯಾಂಡ್ ಇವೆಂಟ್?
Follow us
ಮಂಜುನಾಥ ಸಿ.
|

Updated on: Nov 17, 2024 | 9:43 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಪ್ರಸ್ತುತ ಭಾರತೀಯ ಚಿತ್ರರಂಗದ ಅತಿಹೆಚ್ಚು ನಿರೀಕ್ಷೆಯ ಸಿನಿಮಾ. ಈ ಸಿನಿಮಾಕ್ಕಾಗಿ ದಕ್ಷಿಣ, ಉತ್ತರ ಭಾರತದ ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ದುಬೈ, ರಷ್ಯಾ, ಜಪಾನ್ ಸಿನಿಮಾ ಪ್ರೇಮಿಗಳು ಸಹ ಕಾಯುತ್ತಿದ್ದಾರೆ. ‘ಪುಷ್ಪ 2’ ಸಿನಿಮಾ ಬಿಡುಗಡೆಗೆ 20ಕ್ಕೂ ಕಡಿಮೆ ದಿನಗಳು ಬಾಕಿ ಉಳಿದಿವೆ. ಚಿತ್ರತಂಡ ಪ್ರಚಾರ ಆರಂಭ ಮಾಡಿದೆ. ಸಿನಿಮಾ ಪ್ರಚಾರದ ಮೊದಲ ಭಾಗವಾಗಿ ಇಂದು ಭಾರಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಟ್ರೈಲರ್ ಅನ್ನು ದಕ್ಷಿಣ ಭಾರತದ ನಗರಗಳ ಬದಲಾಗಿ ಉತ್ತರ ಭಾರತದ ಪ್ರಮುಖ ನಗರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ತೆಲುಗು ಸಿನಿಮಾಗಳ ಟ್ರೈಲರ್​ಗಳನ್ನು ಹೈದರಾಬಾದ್, ವಿಜಯವಾಡ, ಅನಂತಪುರಂ ತೀರ ಹೆಚ್ಚೆಂದರೆ ಚಿಕ್ಕಬಳ್ಳಾಪುರಗಳಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಇದೀಗ ‘ಪುಷ್ಪ 2’ ಸಿನಿಮಾದ ಟ್ರೈಲರ್ ಅನ್ನು ಬಿಹಾರದ ಪಟ್ನಾನಲ್ಲಿ ನಡೆಸಲಾಗುತ್ತಿದೆ. ಗಂಗಾ ನದಿಯ ತೀರದ ನಗರ ಪಟ್ನಾದ ಗಾಂಧಿ ಮೈದಾನದಲ್ಲಿ ಇಂದು (ನವೆಂಬರ್ 17)ರ ಸಂಜೆ ಬಲು ಅದ್ಧೂರಿಯಾಗಿ ‘ಪುಷ್ಪ 2’ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ. ‘ಪುಷ್ಪ 2’ ಚಿತ್ರತಂಡದ ಜೊತೆಗೆ ಇನ್ನೂ ಕೆಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

‘ಪುಷ್ಪ’ ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಬಿಹಾರದಲ್ಲಿ ಭಾರಿ ಬ್ಲಾಕ್ ಬಸ್ಟರ್ ಆಗಿತ್ತು. ಇದೇ ಕಾರಣಕ್ಕೆ ಬಿಹಾರದಲ್ಲಿ ಮೊದಲ ಟ್ರೈಲರ್ ಲಾಂಚ್ ಕಾರ್ಯಕ್ರವನ್ನು ಚಿತ್ರತಂಡ ಆಯೋಜನೆ ಮಾಡಿದೆ. ಬಿಹಾರದಲ್ಲಿ ನಡೆಯಲಿರುವ ಟ್ರೈಲರ್ ಲಾಂಚ್​ನಲ್ಲಿ ಭೋಜ್​ಪುರಿಯ ಕೆಲ ತಾರೆಯರು ಅತಿಥಿಗಳಾಗಿ ಭಾಗಿ ಆಗಲಿದ್ದಾರೆ. ಭೋಜ್​ಪುರಿ ತಾರೆ ಅಕ್ಷರಾ ಸಿಂಗ್ ವಿಶೇಷ ಮನೊರಂಜನಾ ಕಾರ್ಯಕ್ರಮವನ್ನೂ ಸಹ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ

ಇಂದು ‘ಪುಷ್ಪ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್​ ಬರೋಬ್ಬರಿ 2:44 ಸೆಕೆಂಡ್ ಇದೆ. ರಶ್ಮಿಕಾ ಹಂಚಿಕೊಂಡಿರುವ ಟ್ವೀಟ್ ಪ್ರಕಾರ, ‘ಪುಷ್ಪ 2’ ಸಿನಿಮಾದ ಟ್ರೈಲರ್ ಪ್ರಾರಂಭದಿಂದ ಅಂತ್ಯದವರೆಗೂ ‘ಮಾಸ್ ಮ್ಯಾಡ್​ನೆಸ್’ ಅಂತೆ. ‘ಪುಷ್ಪ 2’ ಸಿನಿಮಾದ ಟ್ರೈಲರ್ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಾಗಿಯೇ ಇಟ್ಟುಕೊಳ್ಳಿ, ನೀವು ಎಷ್ಟು ಹೆಚ್ಚು ನಿರೀಕ್ಷೆ ಇಟ್ಟುಕೊಂಡರೂ ಅದನ್ನು ರೀಚ್ ಆಗುತ್ತದೆ ಈ ಟ್ರೈಲರ್’ ಎಂದಿದ್ದಾರೆ.

‘ಪುಷ್ಪ 2’ ಸಿನಿಮಾದ ಮೊದಲ ಟೀಸರ್ 2023ರ ಆರಂಭದಲ್ಲಿಯೇ ಬಿಡುಗಡೆ ಆಗಿತ್ತು. ಟೀಸರ್​ನಲ್ಲಿ ಪುಷ್ಪ ಜೈಲಿನಿಂದ ತಪ್ಪಿಸಿಕೊಂಡಿರುವುದಾಗಿಯೂ, ತಪ್ಪಿಸಿಕೊಳ್ಳುವ ವೇಳೆ ಪುಷ್ಪಗೆ ಗುಂಡು ತಗುಲಿ ಸಾವನ್ನಪ್ಪಿರುವುದಾಗಿಯೂ ತೋರಿಸಲಾಗಿತ್ತು. ಅದೇ ಟೀಸರ್​ನಲ್ಲಿ ಪುಷ್ಪ ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದು, ಸಾಕಷ್ಟು ಬಡಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾನೆ, ಕೆಲಸಗಳನ್ನು ಕೊಡಿಸಿದ್ದಾನೆ ಎಂದೆಲ್ಲ ತೋರಿಸಲಾಗಿತ್ತು. ಟೀಸರ್​ನ ಕೊನೆಯಲ್ಲಿ ಅಲ್ಲು ಅರ್ಜುನ್ ಕಾಡಿನಲ್ಲಿ ಜೀವಂತ ಇದ್ದಾನೆ ಎಂಬಂತೆ ತೋರಿಸಲಾಗಿತ್ತು. ಇಂದಿನ ಟ್ರೈಲರ್​ನಲ್ಲಿ ಏನೇನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು